HomeIndiaದಾಲ್ ಸರೋವರದಲ್ಲಿ ಕಾಶ್ಮೀರಿ ಸ್ಟ್ರೀಟ್‌ ಫುಡ್ ಮಾರಾಟ; ದೋಣಿಯಾನದ ವೇಳೆಯೇ ಸಿಗುತ್ತೆ ಬಿಸಿಬಿಸಿ ಆಹಾರ

ದಾಲ್ ಸರೋವರದಲ್ಲಿ ಕಾಶ್ಮೀರಿ ಸ್ಟ್ರೀಟ್‌ ಫುಡ್ ಮಾರಾಟ; ದೋಣಿಯಾನದ ವೇಳೆಯೇ ಸಿಗುತ್ತೆ ಬಿಸಿಬಿಸಿ ಆಹಾರ

ಹೋಟೆಲ್ ಮತ್ತು ಬೀದಿಬದಿಯಲ್ಲಿ ಬಿಸಿಬಿಸಿಯಾದ ರುಚಿಕರ ತಿಂಡಿಗಳನ್ನು ನೀವು ಸೇವಿಸಿರಬಹುದು. ಆದರೆ ಸಮುದ್ರಯಾನದ ನಡುವೆಯೇ ಬಿಸಿಬಿಸಿಯಾದ ಆಹಾರ ನಿಮಗೆ ಸಿಗಲು ಸಾಧ್ಯವೇ? ಖಂಡಿತ ಸಾಧ್ಯವಿದೆ. ಮಾಸ್ಟರ್‌ಶೆಫ್ ಇಂಡಿಯಾದ ಸೀಸನ್ 1 ರಲ್ಲಿ ಫೈನಲಿಸ್ಟ್ ಆಗಿರುವ ಕನಕ್ ಖತುರಿಯಾ ಅವರು ಶ್ರೀನಗರದಲ್ಲಿ ಅದ್ಭುತ ರಜೆ ದಿನಗಳನ್ನು ಆನಂದಿಸಿದ್ದು ದಾಲ್ ಸರೋವರದಲ್ಲಿ ಪ್ರಯಾಣದ ವೇಳೆ ಬಿಸಿಬಿಸಿ ರುಚಿಕರವಾದ ಮಶ್ರೂಮ್ ಟಿಕ್ಕಾ ರುಚಿ ನೋಡಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊ ಹಂಚಿಕೊಂಡಿರುವ ಕನಕ್ ಖತುರಿಯಾ, ಸುಂದರವಾದ ದಾಲ್ ಸರೋವರದ ನಡುವೆ ರುಚಿಕರವಾದ ಮಶ್ರೂಮ್ ಟಿಕ್ಕಾವನ್ನು ಸವಿಯುವುದನ್ನು ಕಾಣಬಹುದು. ಸರೋವರದ ಮಧ್ಯದಲ್ಲಿರುವ ಶಿಕಾರಾದಲ್ಲಿ ಕುಳಿತ ಕನಕ್ ಖತುರಿಯಾ ಮತ್ತೊಂದು ದೋಣಿಯಲ್ಲಿ ಬರುತ್ತಿದ್ದ ಆಹಾರ ಮಾರಾಟಗಾರನತ್ತ ಕೈಬೀಸಿ ತಿನ್ನಲು ಏನೇನಿದೆ ಎಂದು ಕೇಳುತ್ತಾರೆ.

ಅದಕ್ಕೆ ಅವರು ಸಸ್ಯಾಹಾರಿಗಳಿಗೆ ಪನೀರ್, ಅಣಬೆಗಳು ಮತ್ತು ಮಾಂಸಾಹಾರಿಗಳಿಗೆ ಮೀನು ಇದೆ ಎಂದು ಪ್ರತಿಕ್ರಿಯಿಸುತ್ತಾರೆ. ಬಳಿಕ ಮಾರಾಟಗಾರ ದೋಣಿಯೊಳಗೆ ಬಿಸಿಬಿಸಿಯಾದ ಮಶ್ರೂಮ್ ಟಿಕ್ಕಾ ತಯಾರಿಸಿ ನೀಡುತ್ತಾನೆ. ಅದನ್ನು ಕನಕ್ ಆನಂದಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಕೆಲವರು ದೋಣಿಯಲ್ಲಿ ಮಾರಾಟಗಾರ ನಿರ್ವಹಿಸಿದ್ದ ನೈರ್ಮಲ್ಯವನ್ನು ಶ್ಲಾಘಿಸಿದರೆ ಹಲವರು ಕಾಶ್ಮೀರಿ ಬೀದಿ ಆಹಾರವು ಭಾರತದ ಇತರ ರಾಜ್ಯಗಳಿಗಿಂತ ಹೆಚ್ಚು ಆರೋಗ್ಯಕರವಾಗಿದೆ ಎಂದು ಪ್ರಶಂಸಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular