
ವೃದ್ಧನೊಬ್ಬ ತನ್ನ ಜೇಬಿನಿಂದ ಬೀಡಿಯನ್ನು ತೆಗೆದಿದ್ದಾರೆ. ಪ್ರಯಾಣಿಕರಿಂದ ತುಂಬಿರುವ ಮೆಟ್ರೋದಲ್ಲಿ ಅವರು ಬೀಡಿಯನ್ನು ಹಚ್ಚಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಬೀಡಿ ಹಚ್ಚಿದ ವ್ಯಕ್ತಿಯ ಬಗ್ಗೆ ಇತರೆ ಪ್ರಯಾಣಿಕರು ಆಕ್ಷೇಪ ವ್ಯಕ್ತಪಡಿಸಿದ್ದನ್ನು ಕಾಣಬಹುದಾಗಿದೆ. ವಿರೋಧ ವ್ಯಕ್ತಪಡಿಸಿದ ಪ್ರಯಾಣಿಕರಿಗೆ ಈತ ನನ್ನ ಬಳಿಯೂ ಟಿಕೆಟ್ ಇದೆ ಎಂದು ಉತ್ತರ ನೀಡಿದ್ದಾನೆ ಎನ್ನಲಾಗಿದೆ.
ಈ ವಿಡಿಯೋ ಆನ್ಲೈನ್ನಲ್ಲಿ ಸಖತ್ ವೈರಲ್ ಆಗಿದೆ. ಅನೇಕರು ದೆಹಲಿ ಮೆಟ್ರೋ ರೈಲು ನಿಗಮ ಹಾಗೂ ದೆಹಲಿ ಮೆಟ್ರೋ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದು, ಈ ಘಟನೆ ಬಗ್ಗೆ ಉತ್ತರ ನೀಡಬೇಕೆಂದು ಆಗ್ರಹಿಸಿದ್ದಾರೆ. ಆದರೆ ಈ ಘಟನೆ ಬಗ್ಗೆ ಈವರೆಗೆ ಯಾವುದೇ ಮೆಟ್ರೋ ಅಧಿಕಾರಿಗಳು ಅಧಿಕೃತ ಹೇಳಿಕೆ ನೀಡಿಲ್ಲ.
दिल्ली मेट्रो में खुल्लम खुल्ला किसिंग के बीच अब… बीड़ी का स्वैग#DelhiMetro pic.twitter.com/HDJk1rzl8b
— Manish Pandey (@joinmanishpande) September 25, 2023

