HomeCrimeSHOCKING VIDEO: ಗನ್ ಹಿಡಿದು ಮೆಡಿಕಲ್ ಶಾಪ್ ದೋಚಿದ ಖದೀಮರು

SHOCKING VIDEO: ಗನ್ ಹಿಡಿದು ಮೆಡಿಕಲ್ ಶಾಪ್ ದೋಚಿದ ಖದೀಮರು

ಆಘಾತಕಾರಿ ಘಟನೆಯೊಂದರಲ್ಲಿ ಗನ್ ಹಿಡಿದಿದ್ದ ದರೋಡೆಕೋರರ ಗುಂಪೊಂದು ಮೆಡಿಕಲ್ ಶಾಪ್ ನಲ್ಲಿ ದರೋಡೆ ಮಾಡಿದೆ. ಪಂಜಾಬಿನ ಫರೀದ್ ಕೋಟ್ ನಲ್ಲಿ ಈ ಘಟನೆ ನಡೆದಿದ್ದು, ದರೋಡೆಯ ಸಂಪೂರ್ಣ ದೃಶ್ಯಾವಳಿ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಗ್ರಾಹಕರಂತೆ ಮೆಡಿಕಲ್ ಶಾಪಿಗೆ ಬಂದ 3-4 ಮಂದಿಯ ಗುಂಪು ಇದ್ದಕ್ಕಿದ್ದಂತೆ ಸಿಬ್ಬಂದಿಯನ್ನು ಬೆದರಿಸತೊಡಗಿದೆ. ಇದರಿಂದ ಎಚ್ಚೆತ್ತ ಮಾಲೀಕ ತನ್ನ ಸೀಟಿನಿಂದ ಏಳುತ್ತಿದ್ದಂತೆ ಓರ್ವ ತನ್ನ ಜೇಬಿನಿಂದ ಗನ್ ತೆಗೆದು ಎದೆಗೆ ಹಿಡಿದಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಳಿಕ ಆತನ ಸಹಚರ ಕ್ಯಾಶ್ ಕೌಂಟರ್ ನಲ್ಲಿದ್ದ 40,000 ರೂಪಾಯಿಗಳನ್ನು ತೆಗೆದುಕೊಂಡಿದ್ದು, ಮಾಲೀಕನ ಬಳಿಯೂ ಇರುವ ಹಣವನ್ನು ತೆಗೆದು ಕೊಡುವಂತೆ ಬೆದರಿಕೆ ಹಾಕಿದ್ದಾರೆ. ಬಳಿಕ ಹಣ ದೋಚಿ ತಂಡ ಅಲ್ಲಿಂದ ಪರಾರಿಯಾಗಿದೆ. ಘಟನೆಯ ಸಿಸಿ ಟಿವಿ ದೃಶ್ಯಾವಳಿಗಳನ್ನು ಪಡೆದುಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular