HomeKarnatakaಯುವತಿ ಖಾಸಗಿ ವಿಡಿಯೋ ಬಹಿರಂಗಪಡಿಸುವುದಾಗಿ ಬೆದರಿಸಿ ಗೆಳಯನಿಂದಲೇ ಚಿನ್ನ ವಸೂಲಿ

ಯುವತಿ ಖಾಸಗಿ ವಿಡಿಯೋ ಬಹಿರಂಗಪಡಿಸುವುದಾಗಿ ಬೆದರಿಸಿ ಗೆಳಯನಿಂದಲೇ ಚಿನ್ನ ವಸೂಲಿ

ಬೆಂಗಳೂರು: ಪ್ರಿಯಕರನ ಜೊತೆಗಿರುವ ಖಾಸಗಿ ಫೋಟೋ, ವಿಡಿಯೋ ಬಹಿರಂಗಪಡಿಸುವುದಾಗಿ ಬೆದರಿಸಿ ಯುವತಿಯಿಂದ ಆಕೆಯ ಸ್ನೇಹಿತನೇ 15 ಲಕ್ಷ ರೂಪಾಯಿ ಮೌಲ್ಯದ ಚಿನ್ನವನ್ನು ವಸೂಲಿ ಮಾಡಿದ್ದಾನೆ.

ಬ್ಲಾಕ್ ಮೇಲ್ ಮಾಡಿದ ಆರೋಪಿ ಆರ್‌ಟಿ ನಗರದ ಅರ್ಪಿತ್ ಎಂಬವನನ್ನು ಜಯನಗರ ಠಾಣೆ ಪೋಲೀಸರು ಬಂಧಿಸಿದ್ದಾರೆ. ಆತ ಮಾರಾಟ ಮಾಡಿದ್ದ ಅಂಗಡಿಗಳನ್ನು ಪತ್ತೆ ಹಚ್ಚಿ 15 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಲಾಗಿದೆ.

ಮನೆಯಲ್ಲಿಟ್ಟಿದ್ದ 260 ಗ್ರಾಂ ಚಿನ್ನಾಭರಣ ಕಾಣೆಯಾಗದಿದ್ದಾಗ ಜ್ಯುವೆಲ್ಲರಿ ಶಾಪ್ ಮಾಲೀಕ ಮನೆಯವರನ್ನು ವಿಚಾರಿಸಿದ್ದಾರೆ. ಈ ವೇಳೆ ಅವರ ಪುತ್ರಿ ಗೆಳೆಯನಿಗೆ ಚಿನ್ನಾಭರಣ ಕೊಟ್ಟಿದ್ದೇನೆ. ಮುಂಬೈನಿಂದ ಓದಲು ಬಂದಿದ್ದ ಆತ ಓದು ಮುಗಿದ ನಂತರ ಚಿನ್ನದ ಸಮೇತ ಮುಂಬೈಗೆ ತೆರಳಿದ್ದಾನೆ ಎಂದು ಹೇಳಿದ್ದಾಳೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆಕೆಯ ಪೋಷಕರು ಜಯನಗರ ಠಾಣೆಗೆ ದೂರು ನೀಡಿದ್ದಾರೆ. ಪೋಲೀಸರು ತನಿಖೆ ಆರಂಭಿಸುತ್ತಿದ್ದಂತೆ ಅಸಲಿ ವಿಷಯ ಬಯಲಾಗಿದೆ. ಯುವತಿ ಮತ್ತು ಆಕೆಯ ಪ್ರಿಯಕರ ಹಾಗೂ ಬಂಧಿತ ಆರೋಪಿ ಅರ್ಪಿತ್ ಒಂದೇ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಯುವತಿ ಮತ್ತು ಆಕೆಯ ಪ್ರಿಯಕರನ ಖಾಸಗಿ ವಿಡಿಯೋಗಳನ್ನು ಮಾಡಿಕೊಂಡಿದ್ದ ಅರ್ಪಿತ್ ನಂತರದಲ್ಲಿ ಅವುಗಳನ್ನು ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಸಿ ಯುವತಿಯಿಂದ 15 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಪಡೆದುಕೊಂಡಿದ್ದ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular