HomeKarnatakaನಕಲಿ ಬೆತ್ತಲೆ ವಿಡಿಯೋ ತೋರಿಸಿ ಬ್ಲಾಕ್ ಮೇಲ್: ಶಿಕ್ಷಕನಿಂದ 10 ಲಕ್ಷ ರೂ. ಪಡೆದು ವಂಚನೆ

ನಕಲಿ ಬೆತ್ತಲೆ ವಿಡಿಯೋ ತೋರಿಸಿ ಬ್ಲಾಕ್ ಮೇಲ್: ಶಿಕ್ಷಕನಿಂದ 10 ಲಕ್ಷ ರೂ. ಪಡೆದು ವಂಚನೆ

ಚಿಕ್ಕಬಳ್ಳಾಪುರ: ನಕಲಿ ಬೆತ್ತಲೆ ವಿಡಿಯೋ ತೋರಿಸಿ ಬ್ಲಾಕ್ ಮೇಲ್ ಮಾಡಿ ಶಿಕ್ಷಕನಿಂದ 9.99 ಲಕ್ಷ ರೂ. ಪಡೆದು ವಂಚಿಸಿದ ಘಟನೆ ನಡೆದಿದ್ದು, ಚಿಕ್ಕಬಳ್ಳಾಪುರ ಸೈಬರ್ ಠಾಣೆಗೆ ದೂರು ನೀಡಿಲ್ಲಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಿವಾಸಿಯಾಗಿರುವ ಚಿಕ್ಕಬಳ್ಳಾಪುರದಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ವ್ಯಕ್ತಿ ವಂಚನೆಗೊಳಗಾದವರು. ಸೋರಿಯಾಸಿಸ್ ಚರ್ಮರೋಗ ಕಾಯಿಲೆ ವಾಸಿಗಾಗಿ ಫೇಸ್ಬುಕ್ ನಲ್ಲಿ ದೊರೆತ ಲಿಂಕ್ ಬಳಸಿ ಅದರಲ್ಲಿ ತಿಳಿಸಿದಂತೆ ಚರ್ಮ ಕಾಯಿಲೆ ತೋರಿಸಿದ ವಿಡಿಯೋ ಕಳಿಸಿದ್ದಾರೆ. ಅವರು ಅರೆಬೆತ್ತಲಾಗಿದ್ದ ವಿಡಿಯೋ ಸಂಪೂರ್ಣ ಬೆತ್ತಲಾದಂತೆ ಸೃಷ್ಟಿಸಿ ಬ್ಲಾಕ್ ಮೇಲ್ ಮಾಡಿ ಹಣ ವಸೂಲಿ ಮಾಡಲಾಗಿದೆ.

ಅವರು ಹೇಳಿದ ಖಾತೆಗೆ ಶಿಕ್ಷಕ ಹಂತ ಹಂತವಾಗಿ ಹಣ ಹಾಕಿದ್ದಾರೆ. ಕೊನೆಗೆ ವಂಚನೆಗೊಳಗಾಗಿರುವುದನ್ನು ತಿಳಿದು ಚಿಕ್ಕಬಳ್ಳಾಪುರ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular