HomeIndiaಮಹಾಕಾಳೇಶ್ವರ ದೇವಾಲಯದಲ್ಲಿ ಭಕ್ತರ ನಡುವೆ ಮಾರಾಮಾರಿ: ವಿಡಿಯೋ ವೈರಲ್

ಮಹಾಕಾಳೇಶ್ವರ ದೇವಾಲಯದಲ್ಲಿ ಭಕ್ತರ ನಡುವೆ ಮಾರಾಮಾರಿ: ವಿಡಿಯೋ ವೈರಲ್

ಉಜ್ಜೈನ್: ಈ ವಾರದ ಆರಂಭದಲ್ಲಿ ಮಧ್ಯಪ್ರದೇಶದ ಉಜ್ಜಯಿನಿಯ ಮಹಾಕಾಳೇಶ್ವರ ದೇವಾಲಯದಲ್ಲಿ ಎರಡು ಭಕ್ತರ ಗುಂಪುಗಳ  ನಡುವೆ ಮಾರಾಮಾರಿ ನಡೆದಿದ್ದು ಇದರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಇ-ರಿಕ್ಷಾದಲ್ಲಿ ಕುಳಿತುಕೊಳ್ಳುವ ವಿಚಾರದಲ್ಲಿ ಭಕ್ತರು ತೀವ್ರ ವಾಗ್ವಾದಕ್ಕಿಳಿದು ಪರಸ್ಪರ ಹೊಡೆದಾಡಿಕೊಂಡರು ಎಂದು ಪೊಲೀಸರು ತಿಳಿಸಿದ್ದಾರೆ. ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದ ಭಕ್ತರು ಈ ಗಲಾಟೆಯಿಂದ ಭಯಭೀತರಾಗಿ ನೋಡುತ್ತಿರುವಾಗ ಅವರು ಪರಸ್ಪರ ಗುದ್ದುವುದು ಮತ್ತು ಹೊಡೆಯುವುದನ್ನು ವೈರಲ್ ವೀಡಿಯೊ ತೋರಿಸುತ್ತದೆ. ಕೆಲವರು ಹೋರಾಟದಲ್ಲಿ ಮಧ್ಯಪ್ರವೇಶಿಸುತ್ತಿರುವ ದೃಶ್ಯವೂ ಕಂಡು ಬರುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

“ಭಕ್ತರ ನಡುವಿನ ಜಗಳದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗುತ್ತಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಆದರೆ, ಅವರ್ಯಾರೂ ದೂರು ದಾಖಲಿಸಿಕೊಂಡಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಎನ್‌ಡಿಟಿವಿಗೆ ತಿಳಿಸಿದ್ದಾರೆ.

https://www.youtube.com/watch?v=XR1mSm1oEJU&t=22s

For Latest News Updates, Join Our Whatsapp Community🚩
RELATED ARTICLES

Most Popular