HomeRecipiesತುಂಬಾ ರುಚಿಕರ ʼಹೆಸರುಬೇಳೆʼ ಸಾರು

ತುಂಬಾ ರುಚಿಕರ ʼಹೆಸರುಬೇಳೆʼ ಸಾರು

ಪ್ರತಿ ದಿನ ಒಂದೇ ರೀತಿ ಸಾಂಬಾರು ತಿಂದು ತಿಂದು ಬೇಜಾರು ಬಂದರೆ ಹೀಗೊಮ್ಮೆ ಹೆಸರು ಬೇಳೆ ಸಾರು ಮಾಡಿಕೊಂಡು ಸವಿಯಿರಿ. ಮಾಡುವ ವಿಧಾನ ಕೂಡ ಸುಲಭವಿದೆ.

ಬೇಕಾಗುವ ಸಾಮಗ್ರಿಗಳು:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೆಸರು ಬೇಳೆ-1/2 ಕಪ್, ಉಪ್ಪು-1/2 ಟೇಬಲ್ ಸ್ಪೂನ್, ಜೀರಿಗೆ ಪುಡಿ- ¼ ಟೀ ಸ್ಪೂನ್, ಸಣ್ಣ ಲಿಂಬೆ ಹಣ್ಣು-1, 2-ಟೇಬಲ್ ಸ್ಪೂನ್ ತುಪ್ಪ, 1/2 ಕಪ್-ಕಾಯಿತುರಿ, 5-ಹಸಿಮೆಣಸು, ಸ್ವಲ್ಪ ಕೊತ್ತಂಬರಿ ಸೊಪ್ಪು, 2-ಟೊಮೆಟೊ, ಕರಿಬೇವು-ಸ್ವಲ್ಪ, ½ ಟಿ ಸ್ಪೂನ್- ಸಾಸಿವೆ, ¼ ಟೀ ಸ್ಪೂನ್ ಜೀರಿಗೆ, ಸಣ್ಣ ತುಂಡು-ಬೆಲ್ಲ, ಚಿಟಿಕೆ-ಅರಿಶಿನ, 4 ಕಪ್ –ನೀರು.

 ಮಾಡುವ ವಿಧಾನ:

ಮೊದಲಿಗೆ ಹೆಸರುಬೇಳೆ ಚೆನ್ನಾಗಿ ತೊಳೆದು ಒಂದು ಅಗಲವಾದ ಪಾತ್ರೆಗೆ ಹಾಕಿ ನೀರು ಸೇರಿಸಿ ಬೇಯಿಸಿಕೊಳ್ಳಿ. ಇದು ಸ್ವಲ್ಪ ಬೇಯುತ್ತಾ ಇದ್ದಂತೆ ಅದಕ್ಕೆ ಟೊಮೆಟೊ, ಹಸಿಮೆಣಸು ಕತ್ತರಿಸಿ ಹಾಕಿ ಚಿಟಿಕೆ ಅರಿಸಿನ, ಕರಿಬೇವು ಸೇರಿಸಿ. ಹೆಸರುಬೇಳೆ, ಟೊಮೆಟೊ ಚೆನ್ನಾಗಿ ಬೇಯಲಿ. ನಂತರ ಉಪ್ಪು, ಜೀರಿಗೆ ಪುಡಿ, ಬೆಲ್ಲ ಕೂಡ ಸೇರಿಸಿ.

 ನಂತರ ಕಾಯಿತುರಿಯನ್ನು ಮಿಕ್ಸಿ ಜಾರಿಗೆ ಹಾಕಿಕೊಂಡು ಒಂದು ಸುತ್ತು ರುಬ್ಬಿಕೊಂಡು ಅದರ ಹಾಲು ತೆಗೆದು ಬೇಯುತ್ತಿರುವ ಹೆಸರುಬೇಳೆ ಸೇರಿಸಿ. ಸಾರಿನ ಹದಕ್ಕೆ ತಕ್ಕಂತೆ ನೀರು ಸೇರಿಸಿ 2 ನಿಮಿಷಗಳ ಕಾಲ ಕುದಿಸಿ ಕೊತ್ತಂಬರಿ ಸೊಪ್ಪು ಸೇರಿಸಿ ಗ್ಯಾಸ್ ಆಫ್ ಮಾಡಿ. ನಂತರ ಒಗ್ಗರಣೆ ಪಾತ್ರೆಗೆ ತುಪ್ಪ ಹಾಕಿ ಅದಕ್ಕೆ ಸಾಸಿವೆ, ಜೀರಿಗೆ, ಇಂಗು, ಕರಿಬೇವು ಹಾಕಿ ಈ ಒಗ್ಗರಣೆಯನ್ನು ಸಾರಿಗೆ ಹಾಕಿ. ನಂತರ ಅರ್ಧ ಲಿಂಬೆ ಹಣ್ಣನ್ನು ಸಾರಿಗೆ ಹಿಂಡಿ.

For Latest News Updates, Join Our Whatsapp Community🚩
RELATED ARTICLES

Most Popular