HomeKarnatakaನಮ್ಮ ಇಲಾಖೆಯಿಂದ ಯಾರನ್ನೂ ವಿದೇಶ ಪ್ರವಾಸಕ್ಕೆ ಕಳುಹಿಸುತ್ತಿಲ್ಲ: ಪಶುಸಂಗೋಪನಾ ಇಲಾಖೆ ಸಚಿವ ವೆಂಕಟೇಶ್ ಸ್ಪಷ್ಟನೆ

ನಮ್ಮ ಇಲಾಖೆಯಿಂದ ಯಾರನ್ನೂ ವಿದೇಶ ಪ್ರವಾಸಕ್ಕೆ ಕಳುಹಿಸುತ್ತಿಲ್ಲ: ಪಶುಸಂಗೋಪನಾ ಇಲಾಖೆ ಸಚಿವ ವೆಂಕಟೇಶ್ ಸ್ಪಷ್ಟನೆ

ಬೆಂಗಳೂರು: ಪಶುಸಂಗೋಪನಾ ಇಲಾಖೆಯಿಂದ ಶಾಸಕರನ್ನು ವಿದೇಶ ಪ್ರವಾಸಕ್ಕೆ ಕಳುಹಿಸಲಾಗುತ್ತಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪಶುಸಂಗೋಪನಾ ಇಲಾಖೆ ಸಚಿವರೇ ಕೆಲ ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೆ.ವೆಂಕಟೇಶ್, ನಮ್ಮ ಇಲಾಖೆಯಿಂದ ನಾವು ಯಾರನ್ನೂ ಪ್ರವಾಸಕ್ಕೆ ಕಳುಹಿಸುತ್ತಿಲ್ಲ. ಯಾವ ವಿದೇಶ ಪ್ರವಾಸಕ್ಕೂ ನಮ್ಮ ಇಲಾಖೆಯಿಂದ ಕಳುಹಿಸುತ್ತಿಲ್ಲ. ಶಾಸಕರ ವಿದೇಶ ಪ್ರವಾಸ ವಿಚಾರದಲ್ಲಿ ನಮ್ಮ ಇಲಾಖೆ ಹೆಸರು ಯಾಕೆ ಬಂತೋ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.

ಅಧಿವೇಶನ ಸಂದರ್ಭದಲ್ಲಿ ವಿದೇಶ ಪ್ರವಾಸದ ಬಗ್ಗೆ ಚರ್ಚೆಯಾಗಿತ್ತು. ನೀವೂ ಬನ್ನಿ ಎಂದು ಕೆಲವರು ಹೇಳಿದರು. ಆಯ್ತು, ನೋಡೋಣ ಎಂದು ಹೇಳಿದೆ. ನಂತರ ಇಲಾಖೆಯಿಂದ ಕಳುಹಿಸುವ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಕೆಲ ಸ್ನೇಹಿತರು ಅವರವರ ಖರ್ಚಿನಲ್ಲಿ ವಿದೇಶ ಪ್ರವಾಸಕ್ಕೆ ಹೋಗುತ್ತಿದ್ದಾರೆ. ಅವರ ಖರ್ಚಿನಲ್ಲಿ ಹೋಗುವುದಕ್ಕೆ ಯಾಕೆ ಭಯಪಡುತ್ತಿದ್ದಾರೆ ಗೊತ್ತಿಲ್ಲ. ನಮ್ಮ ಇಲಾಖೆಯಲ್ಲಿ ಪ್ರವಾಸಕ್ಕೆ ಕಳುಹಿಸುವಷ್ಟು ದುಡ್ಡು ಇಲ್ಲ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಡಿ.ಕೆ ಬಣ, ಸಿಎಂ ಬಣ ಎಂದು ಯಾಕೆ ಚರ್ಚೆ ಮಾಡಬೇಕು? ನಾಯಕತ್ವ ವಿಚಾರಕ್ಕೂ ಶಾಸಕರ ಪ್ರವಾಸಕ್ಕೂ ಏನು ಸಂಬಂಧ? ಕೆಲವರು ಅನುಮತಿ ಕೋರಿ ಪತ್ರ ಬರೆದಿದ್ದು ನಿಜ. ಆದರೆ ಇಲಾಖೆಯಿಂದ ಕಳುಹಿಸುವ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಎನ್ ಒಸಿಗೆ ಪತ್ರ ಬರೆದಿದದಗ ನನ್ನ ಹೆಸರೂ ಇತ್ತು. ಆದರೆ ನಾನು ವಿದೇಶಕ್ಕೆ ಹೋಗುತ್ತಿಲ್ಲ ಎಂದರು.

ಸಿಎಂ ಸಿದ್ದರಾಮಯ್ಯ ಜೊತೆಗೆ ನಾನು 30 ವರ್ಷಗಳಿಂದ ಇದ್ದೇನೆ. ಅವರ ಒಡನಾಟವನ್ನು ಹೀಗೆ ವ್ಯಾಖ್ಯಾನ ಮಾಡಿದರೆ ಏನು ಹೇಳುವುದು? ದೆಹಲಿಯಿಂದ ನನಗೇನೂ ವರದಿ ಕೇಳಿಲ್ಲ ಎಂದು ಸ್ಪಷ್ಟಪಡಿಸಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular