ಬೆಂಗಳೂರು : ದಿನಾಂಕ 28.05.2026 ರಂದು ಬೆಳಿಗ್ಗೆ 08:00 ರಿಂದ ಮಧ್ಯಾಹ್ನ 12:00 ಗಂಟೆಯವರೆಗೆ ಬಕ್ರೀದ್ ಹಬ್ಬದ ಪ್ರಯುಕ್ತ ಮೈಕೋ ಲೇಔಟ್ ಮತ್ತು ಕೆ.ಎಸ್. ಲೇಔಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಬನ್ನೇರುಘಟ್ಟ ಮುಖ್ಯ ರಸ್ತೆ, ಗುರುಪ್ಪನಪಾಳ್ಯ ಜಂಕ್ಷನ್ ಮತ್ತು ಜೆಟ್ಟರ್ ರಿಂಗ್ ರಸ್ತೆಯ ಈದ್ಗಾ ಮೈದಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಸಾರ್ವಜನಿಕರ ಅನುಕೂಲಕ್ಕಾಗಿ ಈ ಕೆಳಗಿನ ಸಂಚಾರ ಮಾರ್ಪಾಡುಗಳನ್ನು ಮಾಡಲಾಗಿದೆ.
ಮೈಕೋ ಲೇಔಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿ
ಸಂಚಾರ ನಿರ್ಬಂಧಗಳು:
- ಬನ್ನೇರುಘಟ್ಟ ಮುಖ್ಯ ರಸ್ತೆಯಲ್ಲಿ ಸಾಗರ್ ಆಸ್ಪತ್ರೆ ಜಂಕ್ಷನ್ನಿಂದ ಗುರುಪ್ಪನಪಾಳ್ಯ ಜಂಕ್ಷನ್ ವರೆಗೆ.
- ಬನ್ನೇರುಘಟ್ಟ ಮುಖ್ಯ ರಸ್ತೆಯಲ್ಲಿ ಸಾಯಿ ರಾಮ್ ಜಂಕ್ಷನ್ನಿಂದ ಗುರುಪ್ಪನಪಾಳ್ಯ ಜಂಕ್ಷನ್ ವರೆಗೆ.
- 39ನೇ ಕ್ರಾಸ್ ರಸ್ತೆಯಲ್ಲಿ ಗುರುಪ್ಪನಪಾಳ್ಯ ಜಂಕ್ಷನ್ನಿಂದ ರೆಡ್ಡಿ ಆಸ್ಪತ್ರೆ ಜಂಕ್ಷನ್ ವರೆಗೆ.
ಪರ್ಯಾಯ ಮಾರ್ಗಗಳು:
- ಡೈರಿ ಸರ್ಕಲ್ ಕಡೆಯಿಂದ ಬರುವ ವಾಹನಗಳು ಸಾಗರ್ ಆಸ್ಪತ್ರೆ ಜಂಕ್ಷನ್ನಲ್ಲಿ ಬಲ ತಿರುವು ಪಡೆದು, ತಿಲಕ್ ನಗರ ಮುಖ್ಯ ರಸ್ತೆಯಲ್ಲಿ ಚಲಿಸಿ, ಸೌತ್ ಎಂಡ್ ಜಂಕ್ಷನ್ನಲ್ಲಿ ಎಡ ತಿರುವು ಪಡೆಯಬೇಕು. ನಂತರ ಈಸ್ಟ್ ಎಂಡ್ ಮುಖ್ಯ ರಸ್ತೆಯಲ್ಲಿ ಚಲಿಸಿ, ಜಯದೇವ ‘ಯು’ ಟರ್ನ್ ಜಂಕ್ಷನ್ನಲ್ಲಿ ‘ಯು’ ತಿರುವು ಪಡೆದು ಹೊರ ರಿಂಗ್ ರಸ್ತೆಯಲ್ಲಿ ಚಲಿಸಬೇಕು. ಅಲ್ಲಿಂದ ಜಯದೇವ ಜಂಕ್ಷನ್ ಸರ್ವಿಸ್ ರಸ್ತೆಯಲ್ಲಿ ಎಡ ತಿರುವು ಪಡೆದು ಬನ್ನೇರುಘಟ್ಟ ಮುಖ್ಯ ರಸ್ತೆಯನ್ನು ತಲುಪಬಹುದು.
- ಬನ್ನೇರುಘಟ್ಟ ಮುಖ್ಯ ರಸ್ತೆಯ ಡಿ.ಡಿ. ಮರ ಜಂಕ್ಷನ್ (ನೆಕ್ಸಸ್ ವೇಗ ಸಿಟಿ ಮಾಲ್) ಕಡೆಯಿಂದ ಬರುವ ವಾಹನಗಳು ಸಾಯಿ ರಾಮ್ ಜಂಕ್ಷನ್ ಸರ್ವಿಸ್ ರಸ್ತೆಯಲ್ಲಿ ಎಡ ತಿರುವು ಪಡೆದು ಜಯದೇವ ಜಂಕ್ಷನ್ನಲ್ಲಿ ಎಡಕ್ಕೆ ತಿರುಗಬೇಕು. ನಂತರ ಈಸ್ಟ್ ಎಂಡ್ ಜಂಕ್ಷನ್ನಲ್ಲಿ ಬಲಕ್ಕೆ ತಿರುಗಿ, ಈಸ್ಟ್ ಎಂಡ್ ಮುಖ್ಯ ರಸ್ತೆ ಮೂಲಕ ಸೌತ್ ಎಂಡ್ ಜಂಕ್ಷನ್ ತಲುಪಿ, ಬಲ ತಿರುವು ಪಡೆದು ಸಾಗರ್ ಆಸ್ಪತ್ರೆ ಜಂಕ್ಷನ್ ಮೂಲಕ ಬನ್ನೇರುಘಟ್ಟ ಮುಖ್ಯ ರಸ್ತೆ ಸಂಪರ್ಕ ಪಡೆಯಬಹುದು.
ಕೆ.ಎಸ್. ಲೇಔಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿ
ಸಂಚಾರ ನಿರ್ಬಂಧ:
- ಕನಕಪುರ ಮುಖ್ಯ ರಸ್ತೆ ಸಾರಕ್ಕಿ ಸಿಗ್ನಲ್ನಿಂದ ಜೆಟ್ಟರ್ ರಿಂಗ್ ರಸ್ತೆ ಕೆ.ಎಸ್. ಲೇಔಟ್ ಸಿಗ್ನಲ್ ವರೆಗೆ.
ಪರ್ಯಾಯ ಮಾರ್ಗ:
- ಕನಕಪುರ ಮುಖ್ಯ ರಸ್ತೆ ಸಾರಕ್ಕಿ ಸಿಗ್ನಲ್ನಿಂದ ಮುಂದೆ ಸಾಗಿ, ಸಾರಕ್ಕಿ ಮಾರ್ಕೆಟ್-ಬನಶಂಕರಿ ಬಸ್ ನಿಲ್ದಾಣದ ಬಳಿ ಎಡ ತಿರುವು ಪಡೆದು, ಬೇಂದ್ರೆ ಸರ್ಕಲ್ ಮೂಲಕ ಜೆಟ್ಟರ್ ರಿಂಗ್ ರಸ್ತೆಯನ್ನು ತಲುಪಿ ತಮ್ಮ ಗಮ್ಯಸ್ಥಾನಗಳಿಗೆ ತೆರಳಬಹುದು.
- ಸಾರ್ವಜನಿಕರು ಸಹಕರಿಸಬೇಕೆಂದು ಬೆಂಗಳೂರು ನಗರ ಸಂಚಾರ ಪೊಲೀಸ್ ಕೋರಿದೆ.
https://twitter.com/DCPSouthTrBCP/status/2059528447513526334/photo/1

