HomeLatest NewsBIG NEWS: ಯಾವುದೇ ಹುದ್ದೆ ಹಾಗೂ ಅಧಿಕಾರಕ್ಕಾಗಿ ವಿಸಿಕೆ ಬೇಡಿಕೆ ಇಟ್ಟಿಲ್ಲ: ಪಕ್ಷದ ಘನತೆಗೆ ಕುಂದು...

BIG NEWS: ಯಾವುದೇ ಹುದ್ದೆ ಹಾಗೂ ಅಧಿಕಾರಕ್ಕಾಗಿ ವಿಸಿಕೆ ಬೇಡಿಕೆ ಇಟ್ಟಿಲ್ಲ: ಪಕ್ಷದ ಘನತೆಗೆ ಕುಂದು ತರಲು ಅಪಪ್ರಾಚಾರ ನಡೆಸಲಾಗುತ್ತಿದೆ: ವಿಸಿಕೆ ನಾಯಕ ರವಿಕುಮಾರ್ ಸ್ಪಷ್ಟನೆ

ಚೆನ್ನೈ: ತಮಿಳುನಾಡಿನಲ್ಲಿ ನಟ ವಿಜಯ್ ಅವರ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಸರ್ಕಾರ ರಚನೆಗೆ ಅಗತ್ಯ ಸಂಖ್ಯಾಬಲದ ಕೊರತೆ ಇರುವುದರಿಂದ ವಿಸಿಕೆ ಪಕ್ಷದ ಬೆಂಬಲವನ್ನು ವಿಜಯ್ ಕೋರಿದ್ದು, ಆದರೆ ವಿಸಿಕೆ ಕೆಲ ಷರತ್ತುಗಳನ್ನು ಹಾಕಿದೆ. ಡಿಸಿಎಂ ಹುದ್ದೆ ಹಾಗೂ ಒಂದು ಸಚಿವ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿದೆ ಎಂಬ ಮಾತು ಕೇಳಿಬರುತ್ತಿದೆ. ಇದೇ ವಿಚಾರವಾಗಿ ವಿಸಿಕೆ ಪಕ್ಷದ ನಾಯಕ ರವಿಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ತಮಿಳುನಾಡಿನಲ್ಲಿ ಸರ್ಕಾರ ರಚನೆಗೆ 118 ಸಂಖ್ಯಾಬಲದ ಅಗತ್ಯವಿದೆ. ವಿಜಯ್ ಅವರ ಟಿವಿಕೆ ಪಕ್ಷ 108 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆಯಾದರೂ ಸರ್ಕಾರ ರಚನೆಗೆ ಇನ್ನು 10 ಸ್ಥಾನಗಳ ಅಗತ್ಯವಿರುವುದರಿಂದ ಕಾಂಗ್ರೆಸ್ ಬೆಂಬಲ ಘೋಷಿಸಿದೆ. ಆದರೆ ಕಾಂಗ್ರೆಸ್ ತಮಿಳುನಾಡಿನಲ್ಲಿ ಗೆದ್ದಿರುವುದು ಕೇವಲ 5 ಸ್ಥಾನಗಳನ್ನು ಮಾತ್ರ. ಹೀಗಾಗಿ ಇನ್ನೂ5 ಸ್ಥಾನಗಳ ಅಗತ್ಯ ಟಿವಿಕೆಗೆ ಇದೆ. ಈ ನಡುವೆ ಸಿಪಿಐ ಹಗೂ ಸಿಪಿಐಎಂ ಬೆಂಬಲ ಘೋಷಿಸಿದರೂ ಮಾಜಿಕ್ ನಂಬರ್ ದಾಟಿಲ್ಲ. ಈ ಕಾರಣಕ್ಕೆ ವಿಜಯ್ ತಮಿಳುನಾಡಿನಲ್ಲಿ ಎರಡು ಸ್ಥಾಗಳ್ಲಲಿ ಗೆದ್ದಿರುವ ವಿಸಿಕೆ ಬೆಂಬಲ ಕೋರಿದ್ದಾರೆ. ವಿಸಿಕೆ ತಾನು ಗೆದ್ದಿರುವ ಎರಡು ಸ್ಥಾನಕ್ಕೆ ಬಾರಿ ಡಿಮ್ಯಾಂಡ್ ಇಟ್ಟಿದೆ ಎನ್ನಲಾಗಿದೆ. ಉಪಮುಖ್ಯಮಂತ್ರಿ ಸ್ಥಾನ, ಒಂದು ಮಂತ್ರಿ ಸ್ಥಾನ ನೀಡುವುದಾದರೆ ಟಿವಿಕೆ ಜೊತೆ ಕೈಜೋಡಿಸುವುದಾಗಿ ಬೇಡಿಕೆ ಇಟ್ಟಿದೆ ಎಂದು ಹೇಳಲಾಗುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ವಿಚಾರವನ್ನು ವಿಸಿಕೆ ನಾಯಕ ರವಿಕುಮಾರ್ ತಳ್ಳಿಹಾಕಿದ್ದಾರೆ. ವಿಸಿಕೆ ಯಾವುದೇ ಹುದ್ದೆ ಹಾಗೂ ಅಧಿಕಾರಕ್ಕಾಗಿ ಬೇಡಿಕೆ ಇಟ್ಟಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು. ನಮ್ಮ ಪಕ್ಷ ಡಿಸಿಎಂ ಹುದ್ದೆ, ಮಂತ್ರಿ ಸ್ಥಾನಕ್ಕೆ ಬೇಡಿಕೆ ಇಟ್ಟಿದೆ ಎಂಬುದು ಸತ್ಯಕ್ಕೆ ದೂರವಾದದ್ದು ಎಂದಿದ್ದಾರೆ.

ವಿಸಿಕೆ ಪಕ್ಷದ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳು ಸಂಪೂರ್ಣ ಸುಳ್ಳು ಸುದ್ದಿ. ವಿಸಿಕೆ ಘನತೆಗೆ ಕುಂದುತರುವ ಪ್ರಯತ್ನಗಳಿಗೆ ಸಾಥ್ ನೀಡಬಾರದು. ಇದು ಪಕ್ಷದ ಬಗ್ಗೆ ಅಪಪ್ರಚಾರ ನಡೆಸಲು ಮಾಡುತ್ತಿರುವ ವದಂತಿಗಳು. ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಪೋಸ್ಟ್ ಗಳು ಸತ್ಯಕ್ಕೆ ದೀರವಾದದ್ದು ಎಂದು ಸ್ಪಷ್ಟಪಡಿಸಿದ್ದಾರೆ.

ಸತ್ಯಾಸತ್ಯತೆ ತಿಳಿಯದೇ ಇಂತಹ ಸುದ್ದಿ ನಂಬಬೇಡಿ. ನಾವು ಯಾವುದೇ ಹುದ್ದೆಗೂ ಬೇದಿಕೆ ಇಟ್ಟಿಲ್ಲ ಎಂದು ತಮಿಳುನಾಡು ಜನತೆಗೆ ರವಿಕುಮಾರ್ ಮನವಿ ಮಾಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular