HomeAstroತುಳಸಿ ನೆಡುವಾಗ ನೆನಪಿರಲಿ ಈ ವಿಷ್ಯ: ಶುಕ್ರವಾರ ತಪ್ಪದೆ ಈ ಕೆಲಸ ಮಾಡಿ

ತುಳಸಿ ನೆಡುವಾಗ ನೆನಪಿರಲಿ ಈ ವಿಷ್ಯ: ಶುಕ್ರವಾರ ತಪ್ಪದೆ ಈ ಕೆಲಸ ಮಾಡಿ

ಭಾರತದ ಪ್ರತಿಯೊಬ್ಬ ಹಿಂದುಗಳ ಮನೆಯಲ್ಲಿ ನೀವು ತುಳಸಿ ಗಿಡವನ್ನು ನೋಡ್ಬಹುದು. ತುಳಸಿ ಗಿಡ ಮನೆಯಲ್ಲಿದ್ದರೆ ಒಳ್ಳೆಯದು ಎನ್ನುವ ಕಾರಣಕ್ಕೆ ಎಲ್ಲರೂ ತುಳಸಿ ಗಿಡ ಬೆಳೆಸುತ್ತಾರೆ. ಹಿಂದು ಧರ್ಮದಲ್ಲಿ ತುಳಸಿಗೆ ದೇವರ ಸ್ಥಾನವನ್ನು ನೀಡಲಾಗಿದೆ. ಆದ್ರೆ ತುಳಸಿ ಗಿಡವನ್ನು ಮನೆಯಲ್ಲಿ ಬೆಳೆಸಿದ್ರೆ ಸಾಲದು ಅದಕ್ಕೆ ಸಂಬಂಧಿಸಿದ ಕೆಲ ವಾಸ್ತು ಶಾಸ್ತ್ರಗಳನ್ನು ತಿಳಿದಿರಬೇಕು.

ತುಳಸಿ ಗಿಡವನ್ನು ನೆಡುವ ಮೊದಲು ಉತ್ತಮ ಜ್ಯೋತಿಷಿಯನ್ನು ಸಂಪರ್ಕಿಸುವುದು ಒಳ್ಳೆಯದು. ಮನೆಯ ಎಲ್ಲ ಕಡೆ ತುಳಸಿ ನೆಡುವುದು ಒಳ್ಳೆಯದಲ್ಲ. ನಿಮ್ಮ ಮನೆಯಲ್ಲಿ ಬೆಳೆದಿರುವ ತುಳಸಿ ಹಸಿರಾಗಿದ್ದರೆ ಮನೆಯಲ್ಲಿ ಸದಾ ಸಂತೋಷ, ನೆಮ್ಮದಿ ನೆಲೆಸಿರುತ್ತದೆ. ಅದೇ ತುಳಸಿ ಒಣಗಲು ಶುರುವಾಗಿದ್ದರೆ ಅದು ಒಳ್ಳೆಯ ಸಂಕೇತವಲ್ಲ. ಮನೆಯಲ್ಲಿ ಒಣಗಿರುವ ತುಳಸಿ ಗಿಡವನ್ನು ಎಂದೂ ಇಡಬಾರದು. ಅದನ್ನು ತೆಗೆದು ಹರಿಯುವ ನದಿಯಲ್ಲಿ ಬಿಡಬೇಕು.

ತುಳಸಿ ಹಾಗೂ ಗ್ರಹದ ಮಧ್ಯೆ ಸಂಬಂಧವಿದೆ. ಯಾವುದೇ ಕಾರಣಕ್ಕೂ ತಾರಸಿ ಮೇಲೆ ತುಳಸಿ ಗಿಡವನ್ನು ಬೆಳೆಸಬಾರದು. ತುಳಸಿ ಗಿಡವನ್ನು ನೀವು ತಾರಸಿ ಮೇಲೆ ಬೆಳೆಸಿದ್ದರೆ ನಿಮಗೆ ಆರ್ಥಿಕ ಸಮಸ್ಯೆ ಎದುರಾಗುತ್ತದೆ. ಶುಕ್ರವಾರದಂದು ತುಳಸಿ ಗಿಡಕ್ಕೆ ಹಸಿ ಹಾಲನ್ನು ಅರ್ಪಿಸುವುದರಿಂದ ಲಕ್ಷ್ಮಿ ದೇವಿಯ ಆಶೀರ್ವಾದ ಸಿಗುತ್ತದೆ. ಜಾತಕದಲ್ಲಿ ಶುಕ್ರ ಗ್ರಹವು ಬಲಗೊಳ್ಳುತ್ತದೆ. ಭಾನುವಾರ ಮತ್ತು ಏಕಾದಶಿ ಹೊರತುಪಡಿಸಿ ಉಳಿದ ದಿನಗಳಲ್ಲಿ ತುಳಸಿ ಗಿಡಕ್ಕೆ ನೀರು ಅರ್ಪಿಸಿದರೆ ತಾಯಿ ಲಕ್ಷ್ಮಿ ಪ್ರಸನ್ನಳಾಗುತ್ತಾಳೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular