ಬಳ್ಳಾರಿ: ಬಳ್ಳಾರಿಯಲ್ಲಿ ಬ್ಯಾನರ್ ಗಲಾಟೆ ಪ್ರಕರಣದಲ್ಲಿ ಐಪಿಎಸ್ ಅಧಿಕಾರಿ ವರ್ತಿಕಾ ಕಟಿಯಾರ್ ವರ್ಗಾವಣೆಯಾಗಿದ್ದು, ಅವರ ಜಾಗಕ್ಕೆ ಐಪಿಎಸ್ ಅಧಿಕಾರಿ ಹರ್ಷ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಮಧ್ಯೆ ವರ್ತಿಕಾ ಕಟಿಯಾರ್ ವರ್ಗಾವಣೆಯಾಗಿದ್ದರೂ ಕೂಡ ಅವರು ಫೈಲ್ ಗಳನ್ನು ಹೊಸ ಅಧಿಕಾರಿಗಳಿಗೆ ಕೊಡದಂತೆ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ವರ್ಗಾವಣೆ ಬಳಿಕ ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ (CAT) ಮೊರೆ ಹೋಗಿರುವ ವರ್ತಿಕಾ ಕಟಿಯಾರ್ ಮತ್ತೆ ಬಳ್ಳಾರಿಗೆ ಬರಲು ಯತ್ನಿಸಿದ್ದಾರೆ. ಈ ಮಧ್ಯೆ ಬಳ್ಳಾರಿ ವಲಯ ಸಹಾಯಕ ಆಡಳಿತಾಧಿಕಾರಿ ಬಸವರಾಜ್ ಅವರುಗೆ ವಾಟ್ಸಪ್ ಕರೆ ಮಾಡಿದ್ದ ವರ್ತಿಕಾ ಕಟಿಯಾರ್, ಪ್ರಮುಖ ಕಡತಗಳನ್ನು ಈಗಿನ ಅಧಿಕಾರಿಗಳಿಗೆ ನೀಡದಂತೆ ಸೂಚಿಸಿದ್ದಾರೆ. ನನ್ನ ವರ್ಗಾವಣೆ ವಿಚಾರ ಸಿಎಟಿಯಲಿದೆಕಡತಗಳನ್ನು ನೀಡಿದರೆ ಸಿಎಟಿಯಲ್ಲಿ ಪ್ರತಿವಾದಿ ಮಾಡಲಾಗುವುದು ಎಂಫ಼್ದು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ವರ್ತಿಕಾ ಕಟಿಯಾರ್ ಕರೆ ಮಾಡಿದ್ದಾರೆ ಎನ್ನಲಾದ ವಾಟ್ಸಾಪ್ ಕರೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕರೆ ಬಳಿಕ ವರ್ತಿಕಾ ಕಟಿಯಾರ್ ಗೆ ಪತ್ರ ಬರೆದಿರುವ ಬಳ್ಳಾರಿ ವಲಯ ಸಹಾಯಕ ಆಡಳಿತಾಧಿಕಾರಿ ಬಸವರಾಜ್, ನಿಮ್ಮ ನಿರ್ದೇಶನ ನನ್ನ ಕರ್ತವ್ಯಕ್ಕೆ ಅಡ್ಡಿಯಾಗುತ್ತಿದೆ. ಹೀಗಾಗಿ ಯಾವುದೇ ಕರೆ, ವಾಟ್ಸಪ್, ಪತ್ರಗಳು, ಮುಖಿಕವಾಗಿ ತಿಳಿ ಹೇಳುವುದು ಬೇಡ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿದುಬಂದಿದೆ.

