ಕರ್ನಾಟಕದ ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್ ಒಂದಿದೆ. ರೈಲ್ವೆ ಇಲಾಖೆ ರಾಜ್ಯದಲ್ಲಿ ಸಂಚಾರ ನಡೆಸುವ ಹಲವು ರೈಲು ಸೇವೆಗಳನ್ನು ಖಾಯಂಗೊಳಿಸಿ ಆದೇಶಿಸಿದೆ. ಬೆಂಗಳೂರು, ಮೈಸೂರು, ಹುಬ್ಬಳ್ಳಿ ಸೇರಿದಂತೆ ವಿವಿಧ ಪ್ರದೇಶಗಳಿಂದ ಹೊರಡುವ ರೈಲುಗಳು ಇದರಲ್ಲಿ ಸೇರಿವೆ.
ಎಕ್ಸ್‌ಪ್ರೆಸ್, ತಾತ್ಕಾಲಿಕ ಸಂಚಾರದ ರೈಲುಗಳ ದರಗಳು ಹೆಚ್ಚಿರುತ್ತದೆ. ಅದೇ ರೈಲುಗಳನ್ನು ಖಾಯಂಗೊಳಿಸಿದರೆ ಪ್ರಯಾಣ ದರಗಳು ಕಡಿಮೆಯಾಗುತ್ತದೆ. ಆದ್ದರಿಂದ ಹೆಚ್ಚು ಜನರು ಸಂಚಾರ ನಡೆಸಲು ಅನುಕೂಲವಾಗುತ್ತದೆ.
ರೈಲುಗಳನ್ನು ಖಾಯಂಗೊಳಿಸಿದರೆ ಅದರ ಸಂಖ್ಯೆ ಸಹ ಬದಲಾವಣೆಯಾಗುತ್ತದೆ. ಆದ್ದರಿಂದ ಯಾವ-ಯಾವ ರೈಲುಗಳನ್ನು ಖಾಯಂಗೊಳಿಸಲಾಗಿದೆ, ಹೊಸ ಸಂಖ್ಯೆ ಏನು? ಎಂದು ಇಲಾಖೆ ಮಾಹಿತಿ ನೀಡಿದೆ.
ಖಾಯಂಗೊಂಡ ರೈಲುಗಳ ಪಟ್ಟಿ
- 07395/96. ಬಳ್ಳಾರಿ-ದಾವಣಗೆರೆ-ಬಳ್ಳಾರಿ ಡೆಮು. ಹೊಸ ಸಂಖ್ಯೆ 76509/10
- 07397/98. ಹೊಸಪೇಟೆ-ಬಳ್ಳಾರಿ-ಹೊಸಪೇಟೆ ಡೆಮು. 76511/ 12
- 07393/94. ಹೊಸಪೇಟೆ-ಹುಬ್ಬಳ್ಳಿ-ಹೊಸಪೇಟೆ ಡೆಮು. 76507/08
- 06281/82. ಮೈಸೂರು-ಅಜ್ಮೀರ್-ಮೈಸೂರು ಎಕ್ಸ್‌ಪ್ರೆಸ್. 16281/82
- 06919/20. ಹುಬ್ಬಳ್ಳಿ-ವಿಜಯಪುರ-ಹುಬ್ಬಳ್ಳಿ ಪ್ಯಾಸೆಂಜರ್. 56919/20
- 06207/ 08. ಬೆಂಗಳೂರು ದಂಡು-ಕಲಬುರಗಿ-ಬೆಂಗಳೂರು ಎಕ್ಸ್‌ಪ್ರೆಸ್.16563/64
- 06539/ 40. ಎಸ್‌ಎಂವಿಟಿ ಬೆಂಗಳೂರು-ಬೀದರ್-ಬೆಂಗಳೂರು.16559/60
- 07329/30. ಹುಬ್ಬಳ್ಳಿ-ವಿಜಯಪುರ-ಹುಬ್ಬಳ್ಳಿ ಮೆಮು. 66501/02
ಖಾಯಂಗೊಂಡ ಇತರ ರೈಲುಗಳ ಪಟ್ಟಿ ಚಿತ್ರದಲ್ಲಿದೆ.


