HomeLatest NewsBIG NEWS: ವಡೋದರಾ ಸೇತುವೆ ಕುಸಿತ ದುರಂತ: ಸಾವಿನ ಸಂಖ್ಯೆ ಮತ್ತಷ್ಟು ಏರಿಕೆ: 15 ಜನರು...

BIG NEWS: ವಡೋದರಾ ಸೇತುವೆ ಕುಸಿತ ದುರಂತ: ಸಾವಿನ ಸಂಖ್ಯೆ ಮತ್ತಷ್ಟು ಏರಿಕೆ: 15 ಜನರು ದುರ್ಮರಣ

ಅಹಮದಾಬಾದ್: ಗುಜರಾತ್ ನ ವಡೋದರಾ ಸೇತುವೆ ಕುಸಿತ ಪ್ರಕರಣದಲ್ಲಿ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗಿದ್ದು, 15 ಜನರು ಮೃತಪಟ್ಟಿದ್ದಾರೆ.

ಮಹಿಸಾಗರ ನದಿಗೆ ಕಟ್ಟಲಾಗಿದ್ದ ಸೇತುವೆ ವಾಹನಗಳು ಚಲಿಸುತ್ತಿದ್ದಗಲೇ ಬುಧವಾರ ಏಕಾಏಕಿ ಕುಸಿತಗೊಂಡು ವಾಹನಗಳ ಸಮೇತ ಜನರು ನದಿಗೆ ಬಿದ್ದಿದ್ದಾರೆ. ದುರಂತದಲ್ಲಿ ಸಾವಿನ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸೇತುವೆಯ 10-15 ಮೀಟರ್ ಉದ್ದ ಸ್ಲ್ಯಾಬ್ ಇದ್ದಕ್ಕಿದ್ದಂತೆ ಕುಸಿದು ಈ ದುರಂತ ಸಂಭವಿಸಿದೆ. ಎರಡು ಟ್ರಕ್, ಎರಡು ವ್ಯಾನ್, ಒಂದು ರಿಕ್ಷಾ, ಒಂದು ದ್ವಿಚಕ್ರವಾಹನಗಳು ನದಿಗೆ ಬಿದ್ದಿವೆ. ಘಟನೆಯಲ್ಲಿ ಗಾಯಗೊಂಡಿರುವ ಐವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಹಿಸಾಗರ ನದಿಯಲ್ಲಿ ಘಟನಾ ಸ್ಥಳದಿಂದ 4 ಕಿ.ಮೀ ದೂರದವರೆಗೂ ಶೋಧ ಕಾರ್ಯಾಚರಣೆ ಮುಂದುವರೆದಿದೆ. ನದಿಯಲ್ಲಿ ಬಿದ್ದಿರುವ ವಾಹನಗಳು ಸುಮಾರು ಮೂರು ಮೀಟರ್ ಹೂಳಿನಲ್ಲಿ ಸಿಲುಕಿಕೊಂಡಿವೆ. ನಾಪತ್ತೆಯಾದವರ್ಗಾಗಿಯೂ ಶೋಧ ಮುಂದುವರೆಸಲಾಗಿದೆ. ಮತ್ತೊಂದೆಡೆ ಸೇತುವೆ ಕುಸಿತ ಪ್ರಕರಣದ ಬಗ್ಗೆ ತನಿಖೆ ಆರಂಭವಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular