ದಾವಣಗೆರೆ: ಹರಿಹರ ವೀರಶೈವ ಪಂಚಮಸಾಲಿ ಪೀಠದಿಂದ ಉಚ್ಛಾಟನೆಗೊಂಡಿರುವ ವಚನಾನಂದ ಶ್ರೀ ವಿರುದ್ಧ ಪಂಚಮಸಾಲಿ ಸಮಾಜ ಟ್ರಸ್ಟ್‌ನ ಸದಸ್ಯ ಎಚ್.ಎಸ್. ನಾಗರಾಜ್ ಗಂಭೀರ ಆರೋಪ ಮಾಡಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ನಾಗರಾಜ್, ವಚನಾನಂದ ಶ್ರೀಗಳು ರಾಜ್ಯದ ಹಿರಿಯ ಮತ್ತು ಪ್ರಮುಖ ರಾಜಕೀಯ ನಾಯಕರೊಂದಿಗೆ ನಡೆಸಿದ ದೂರವಾಣಿ ಸಂಭಾಷಣೆಗಳನ್ನು ರೆಕಾರ್ಡ್ ಮಾಡಿಕೊಳ್ಳುತ್ತಿದ್ದಾರೆ. ಈ ರೆಕಾರ್ಡಿಂಗ್‌ಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸುವ ಅಭ್ಯಾಸ ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ.
ಅಲ್ಲದೆ ಇಂತಹ ನಡೆ ರಾಜ್ಯದಲ್ಲಿ ಚುಕ್ಕಾಣಿ ಹಿಡಿದಿರುವ ನಾಯಕರಿಗೆ ತೀವ್ರ ಅಪಾಯಕಾರಿ ಎಂದು ನಾಗರಾಜ್ ಎಚ್ಚರಿಸಿದದ್ದು, ಯಾವುದೇ ನಾಯಕರು ಶ್ರೀಗಳೊಂದಿಗೆ ಫೋನ್‌ನಲ್ಲಿ ಮಾತನಾಡದಂತೆ ಮನವಿ ಮಾಡಿದ್ದಾರೆ.
ಸ್ವಾಮೀಜಿ ಪ್ರತಿದಿನ ನಾಲ್ಕೈದು ವಿದ್ಯಾರ್ಥಿಗಳಿಂದ ಮಸಾಜ್ ಮಾಡಿಸಿಕೊಳ್ಳುತ್ತಿದ್ದರು. ಈ ವಿಕೃತ ಭಾವ ಸಹಿಸಲಾಗದೇ 60 ವಿದ್ಯಾರ್ಥಿಗಳ ಪೈಕಿ ಹಲವರು ವಸತಿ ನಿಲಯ ತೊರೆದಿದ್ದಾರೆ. ಈಗ ಕೇವಲ 5 ವಿದ್ಯಾರ್ಥಿಗಳು ಇದ್ದಾರೆ.
ಸ್ವಾಮೀಜಿ ನಡೆ ವಿರುದ್ಧ ವಿದ್ಯಾರ್ಥಿಗಳ ಪೋಷಕರು ದೂರು ನೀಡಲು ಮುಂದಾಗಿದ್ದರು. ದೂರು ನೀಡಿದರೆ ಸ್ವಾಮೀಜಿ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿ ಬಂಧನವಾಗುತ್ತಿತ್ತು. ಸಮುದಾಯದ ಹಿತದೃಷ್ಟಿಂದ ದೂರು ನೀಡದಂತೆ ಟ್ರಸ್ಟ್ ನವರೇ ಪೋಷಕರನ್ನು ಸಮಾಧಾನ ಪಡಿಸ್ದ್ದೇವೆ. ವಿದ್ಯಾರ್ಥಿಗಳಿಂದ ಮಾಸಾಜ್ ಮಾಡಿಸಿಕೊಳ್ಳುತ್ತಿದ್ದ ವಿಚಾರ ಎರಡು ತಿಂಗಳ ಹಿಂದೆ ಗಮನಕ್ಕೆ ಬಂದಿತ್ತು. ಸ್ವಾಮೀಜಿಯವರಿಗೆ ಬುದ್ಧಿ ಹೇಳಲು ಮುಂದಾಗಿದ್ದಕ್ಕೆ ಟ್ರಸ್ ವಿರುದ್ಧವೇ ತಿರುಗಿ ಬಿದ್ದಾರೆ. ತಮ್ಮ ತಪ್ಪು ಮುಚ್ಚಿಕೊಳ್ಳಲು ಲೆಕ್ಕ ಕೊಡಿ ಅಭಿಯಾನ ಶುರು ಮಾಡಿದರು ಎಂದು ಆರೋಪಿಸಿದ್ದರು.

