HomeLatest Newsಕಾಲುವೆ ಬಳಿ ಬಹಿರ್ದೆಸೆಗೆ ಹೋಗಿದ್ದ ಯುವಕನ ಮೇಲೆ ಹಲ್ಲೆ: ಕೀಯಿಂದ ಕಣ್ಣು ಚುಚ್ಚಿದ ವ್ಯಕ್ತಿ: ದೃಷ್ಟಿ...

ಕಾಲುವೆ ಬಳಿ ಬಹಿರ್ದೆಸೆಗೆ ಹೋಗಿದ್ದ ಯುವಕನ ಮೇಲೆ ಹಲ್ಲೆ: ಕೀಯಿಂದ ಕಣ್ಣು ಚುಚ್ಚಿದ ವ್ಯಕ್ತಿ: ದೃಷ್ಟಿ ಕಳೆದುಕೊಂಡ ಯುವಕ

ಭದೋಹಿ: ಕಾಲುವೆ ಬಳಿ ಬಹಿರ್ದೆಸೆಗೆ ಕುಳಿತಿದ್ದ ಯುವಕನನ್ನು ವ್ಯಕ್ತಿಯೋರ್ವ ಹಿಗ್ಗಾಮುಗ್ಗಾ ಥಳಿಸಿದ್ದಲ್ಲದೇ ಬೈಕ್ ಕೀಯಿಂದ ಆತನ ಕಣ್ಣು ಚ್ಚಿರುವ ಘಟನೆ ಉತ್ತರ ಒರದೇಶದ ಔರೈ ಪ್ರದೇಶದಲ್ಲಿ ನಡೆದಿದೆ.

20 ವರ್ಷದ ರಾಹುಲ್ ಹಲ್ಲೆಗೊಳಗಾದ ಯುವಕ. ಗಾಯಾಳುವನ್ನು ವಾರಣಾಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕಣ್ಣು ದೃಷ್ಟಿ ಕಳೆದುಕೊಂಡಿದ್ದಾನೆ ಎಂದು ತಿಳಿದುಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಾಲುವೆ ಬಳಿ ಬಯಲಿನಲ್ಲಿ ಬಹಿರ್ದೆಸೆಗೆಂದು ಕುಳಿತಿದ್ದ. ಇದನ್ನು ಕಂಡು ಶಾಂಕರ್ ಎಂಬಾತ ಕಾಅಲುವೆ ಬಳಿ ಬಹಿರ್ದೆಸೆ ಮಾಡದಂತೆ ತಾಕೀತು ಮಾಡಿದ್ದ. ಇದೇ ವಿಚಾರವಾಗಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಕೋಪಗೊಂದ ಶಂಕರ್ ಯುವಕ ರಾಹುಲ್ ಮೇಲೆ ಹಲ್ಲೆ ನಡೆಸಿದ್ದಾನೆ. ಅಲ್ಲದೇ ತನ್ನ ಬಳಿ ಇದ್ದ ಬೈಕ್ ಕೀಯಿಂದ ಕಣ್ಣಿಗೆ ಚುಚ್ಚಿದ್ದಾನೆ.

ರಾಹುಲ್ ಎಡಕಣ್ಣಿಗೆ ಗಂಭೀರವಾದ ಗಾಯಗಳಾಗಿದ್ದು, ದೃಷ್ಟಿ ಕಳೆದುಕೊಂಡಿದ್ದಾನೆ. ದಲಿತ ಯುವಕನ ಮೇಲೆ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಯುವಕ ರಾಹುಲ್ ತಂದೆ ನೀಡಿದ ದೂರಿನ ಮೇರೆಗೆ ಶಂಕರ್ ವಿರುದ್ದ ಪ್ರಕರಣ ದಾಖಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular