HomeIndiaಐಆರ್ ಎಸ್ ಅಧಿಕಾರಿಯೆಂದು ನಂಬಿ ಮದುವೆಯಾಗಿ ಮೋಸ ಹೋದ ಮಹಿಳಾ ಡಿಎಸ್ ಪಿ; ಲೇಡಿ ಸಿಂಗಂ...

ಐಆರ್ ಎಸ್ ಅಧಿಕಾರಿಯೆಂದು ನಂಬಿ ಮದುವೆಯಾಗಿ ಮೋಸ ಹೋದ ಮಹಿಳಾ ಡಿಎಸ್ ಪಿ; ಲೇಡಿ ಸಿಂಗಂ ಖ್ಯಾತಿಯ ಪೊಲೀಸ್ ಅಧಿಕಾರಿಗೆ ಪತಿಯಿಂದ ವಂಚನೆ

ಲಖನೌ: ಲೇಡಿ ಸಿಂಗಂ ಖ್ಯಾತಿಯ ಉತ್ತರ ಪ್ರದೇಶದ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಐಆರ್ ಎಸ್ ಅಧಿಕಾರಿಯೆಂದು ನಂಬಿ ಮದುವೆಯಾದ ವ್ಯಕ್ತಿಯಿಂದಲೇ ಮೋಸ ಹೋಗಿರುವ ಘಟನೆ ಬೆಳಕಿಗೆ ಬಂದಿದೆ.

ಶ್ರೇಷ್ಠಾ ಠಾಕೂರ್ ಉತ್ತರ ಪ್ರದೇಶದ ಖಡಕ್ ಪೊಲೀಸ್ ಅಧಿಕಾರಿ. ಡಿಎಸ್ ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಐಆರ್ ಎಸ್ ಅಧಿಕಾರಿ ಎಂದು ನಂಬಿ ಮದುವೆಯಾದ ಪತಿ ಅಸಲಿಗೆ ಅಧಿಕಾರಿಯೇ ಅಲ್ಲ. ಆತನೊಬ್ಬ ಮಹಾನ್ ವಂಚಕ ಎಂಬುದು ತಿಳಿದುಬಂದಿದೆ.

2012ರ ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿರುವ ಶ್ರೇಷ್ಠಾ ಠಾಕೂರ್ 2018ರಲ್ಲಿ ಮ್ಯಾಟ್ರಿಮೋನಿಯಲ್ ಸೈಟ್ ನಲ್ಲಿ ಪರಿಚಯವಾದ ರೋಹಿತ್ ರಾಜ್ ಎಂಬಾತನನ್ನು ವಿವಾಹವಾಗಿದ್ದರು. ಆತ ತಾನು ರಾಂಚಿಯಲ್ಲಿ ಡೆಪ್ಯುಟಿ ಕಮಿಷ್ನರ್ ಆಗಿದ್ದು, 2008ರ ಬ್ಯಾಚ್ ನ ಐಆರ್ ಎಸ್ ಅಧಿಕಾರಿ ಎಂದು ಹೇಳಿಕೊಂಡಿದ್ದ. ಮದುವೆ ಬಳಿಕ ತನ್ನ ಪತಿ ಐಆರ್ ಎಸ್ ಅಧಿಕಾರಿಯಲ್ಲ ಎಂಬುದು ಶ್ರೇಷ್ಠಾಗೆ ಗೊತ್ತಾಗಿದೆ. ಆದರೆ ತನ್ನ ಕುಟುಂಬ ಉಳಿಸಿಕೊಳ್ಳಲು ಸುಮ್ಮನಾಗಿದ್ದರು. ಆದರೆ ಪತಿ ಮಹಾಶಯ ಪತ್ನಿ ಶ್ರೇಷ್ಠಾ ಹೆಸರಲ್ಲೇ ವಂಚನೆ ಮಡಲು ಶುರುಮಾಡಿದ್ದ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದರಿಂದ ನೊಂದ ಶ್ರೇಷ್ಠಾ ಎರಡು ವರ್ಷಗಳ ಬಳಿಕ ವಿಚ್ಛೇದನ ಪಡೆದುಕೊಂಡಿದ್ದರು. ಆದಾಗ್ಯೂ ಸಮಸ್ಯೆ ಬಗೆಹರಿಯಲಿಲ್ಲ. ರೋಹಿತ್ ರಾಜ್ ತನ್ನ ವಂಚನೆಯನ್ನು ಮುಂದುವರೆಸಿದ್ದಾನೆ. ಇದರಿಂದ ಶ್ರೇಷ್ಠಾ ಠಾಕೂರ್ ಘಾಜಿಯಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿ ರೋಹಿತ್ ರಾಜ್ ನನ್ನು ಪೊಲೀಸರು ಬಂಧಿಸಿ ತನಿಖೆ ನಡೆಸಿದ್ದಾರೆ.

 

For Latest News Updates, Join Our Whatsapp Community🚩
RELATED ARTICLES

Most Popular