ಡೆಹ್ರಾಡೂನ್: ಪಾಕಿಸ್ತಾನ ಮೂಲದ ಉಗ್ರನ ಸೂಚನೆ ಮೇರೆಗೆ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಉತ್ತರಾಖಂಡದಲ್ಲಿ ಪೊಲೀಸ್ ವಿಶೇಶ ಕಾರ್ಯಪಡೆ (ಎಸ್ ಟಿ ಎಫ್) ಬಂಧಿಸಿದೆ.
ವಿಕ್ರಾಂತ್ ಕಶ್ಯಪ್ (29) ಬಂಧಿತ ಆರೋಪಿ. ಡೆಹ್ರಾಡೂನ್ ನಲ್ಲಿರುವ ಸರ್ಕಾರಿ ಕಚೇರಿಗಳು ಹಾಗೂ ರಕ್ಷಣ ಅಸಂಸ್ಥೆಗಳ ವಿವರಗಳು, ಛಾಯಾಚಿತ್ರಗಳನ್ನು ಪಾಕಿಸ್ತಾನದಲ್ಲಿರುವ ತನ್ನ ನಿರ್ವಾಹಕರಿಗೆ ಕಳುಹಿಸುತ್ತಿದ್ದನಂದು ಆರೋಪಿಸಲಾಗಿದೆ ಎಂದು ಎಸ್ ಟಿ ಎಫ್ ಹಿರಿಯ ಪೊಲೀಸ್ ಅಧಿಕಾರಿ ಅಜಯ್ ಸಿಂಗ್ ತಿಳಿಸಿದ್ದಾರೆ.
ಆರೋಪಿ ಪಾಕಿಸ್ತಾನದ ಇಂಟರ್ ಸರ್ವಿಸಸ್ ಇಂಟಲಿಜನ್ಸ್ (ಐಎಸ್ಐ) ಏಜೆಂಟ್ ಮತ್ತು ಪಾಕಿಸ್ತಾನಿ ಭಯೋತ್ಪಾದಕ ಶೆಹಜಾದ್ ಭಟ್ಟಿ ಸೂಚನೆ ಮೇರೆಗೆ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಖಚಿತ ಮಾಹಿತಿ ಮೇರೆಗೆ ಎಸ್ ಟಿ ಎಫ್ ಹಾಗೂ ಉತ್ತರಾಖಂಡ ರಾಜ್ಯ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಪ್ರೇಮ್ ನಗರ ಪ್ರದೇಶದಿಂದ ವಿಕ್ರಾಂತ್ ಕಶ್ಯಪ್ ನನ್ನು ಬಂಧಿಸಲಾಗಿದೆ.

