HomeLatest Newsಹಿಂದೂ ಎಂದು ಸುಳ್ಳು ಹೇಳಿ ಯುವತಿಯನ್ನು ಮದುವೆಯಾಗಿದ್ದ ಮುಸ್ಲಿಂ ಯುವಕ ಅರೆಸ್ಟ್

ಹಿಂದೂ ಎಂದು ಸುಳ್ಳು ಹೇಳಿ ಯುವತಿಯನ್ನು ಮದುವೆಯಾಗಿದ್ದ ಮುಸ್ಲಿಂ ಯುವಕ ಅರೆಸ್ಟ್

ಲಖನೌ: ಮುಸ್ಲಿಂ ಯುವಕನೊಬ್ಬ ತಾನು ಹಿಂದೂ ಎಂದು ಸುಳ್ಳು ಹೇಳಿ ಹಿಂದೂ ಯುವತಿಯನ್ನು ವಿವಾಹವಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಯುವಕ ಬೆಲ್ಹಾ ಮಾಯಿ ದೇವಾಲಯದಲ್ಲಿ ಯುವತಿಯನ್ನು ವಿವಾಹವಾಗುತ್ತಿದ್ದ. ಈ ವೇಳೆ ದೇವಾಲಯದ ಅರ್ಚಕ ಮಂಗಳ ಪ್ರಸಾದ್ ಅವರಿಗೆ ಅನುಮಾನಗೊಂಡಿದೆ. ಹೆಸರು ಕೇಳಿದಾಗ ಅನುಮಾನ ಬಲವಾಗಿದೆ. ಈ ಬಗ್ಗೆ ಅರ್ಚಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಯುವತಿ ಪ್ರಯಾಗ್ ರಾಜ್ ಮೂಲದ ಮಲಾಕಾದ ಶಾಲಿನಿ ಪ್ರತಾಪ್ ಎಂದು ತನ್ನ ಹೆಸರು ಹೇಳಿದ್ದಾಳೆ. ಯುವಕ ಮಲಾಕಾದ ರಾಜೀವ್ ಎಂದು ಹೇಳಿಕೊಂಡಿದ್ದಾನೆ. ವಿಚಾರಣೆ ವೇಳೆ ಯುವಕನ ಆಧಾರ್ ಕಾರ್ಡ್ ಕೇಳಿದಾಗ ತನ್ನ ಹೆಸರು ಮತ್ಲೂಬ್ ಅಲಂ ಎಂದು ಬಾಯ್ಬಿಟ್ಟಿದ್ದಾನೆ. ಅಲ್ಲದೇ ತಾನು ಪ್ರಯಾಗ್ ರಾಜ್ ನ ಚಂದಾಪುರ ಪೊಲೀಸ್ ಠಾಣೆಯ ವ್ಯಾಪ್ತಿಯ ನಿವಾಸಿ ಎಂದಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಯುವಕ ತಾನು ಹಿಂದೂ ಎಂದು ಹೇಳಿಕೊಂಡು ಬಲವಂತದಿಂದ ಮದುವೆಯಾಗುತ್ತಿದ್ದ. ಸಾಕಷ್ಟು ಒತ್ತಡ ಹಾಕುತ್ತಿದ್ದ ಎಂದಿದ್ದಾಳೆ. ಸದ್ಯ ಆರೋಪಿ ಯುವಕನನ್ನು ಬಂಧಿಸಲಾಗಿದೆ. ಹಿಂದೂ ಸಂಘಟನೆ ಕಾರ್ಯಕರ್ತರು ಸ್ಥಳದಲ್ಲಿ ಪ್ರತಿಭಟನೆ ನಡೆಸಿ, ಆರೋಪಿ ವಿರುದ್ಧ ಕಠಿಅಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular