HomeLive Newsಮನೆಗೆ ಬರುವಂತೆ ಕರೆದು, ಪ್ರಿಯಕರನ ಮೇಲೆ ಹಲ್ಲೆ; ಗುಪ್ತಾಂಗ ಕತ್ತರಿಸಿ ಹಿಂಸಿಸಿದ ಪ್ರಿಯತಮೆ

ಮನೆಗೆ ಬರುವಂತೆ ಕರೆದು, ಪ್ರಿಯಕರನ ಮೇಲೆ ಹಲ್ಲೆ; ಗುಪ್ತಾಂಗ ಕತ್ತರಿಸಿ ಹಿಂಸಿಸಿದ ಪ್ರಿಯತಮೆ

ಯುವತಿಯೊಬ್ಬಳು ತನ್ನ ಪ್ರಿಯಕರನನ್ನು ಮನೆಗೆ ಕರೆಸಿ ಆಕೆಯ ಸಹೋದರರೊಂದಿಗೆ ಸೇರಿ ಹಲ್ಲೆ ನಡೆಸಿ, ಯುವಕನ ಗುಪ್ತಾಂಗ ಕತ್ತರಿಸಿರುವ ಘಟನೆ ಉತ್ತರ ಪ್ರದೇಶದ ಗೋರಖ್ ಪುರದಲ್ಲಿ ನಡೆದಿದೆ.

ಮಿಥುನ್ ಕುಮಾರ್ ಹಲ್ಲೆಗೊಳಗಾದ ಯುವಕ. ಮನೆಯ ಸಮೀಪವೇ ಇರುವ ತನಗಿಂತ ಹಿರಿಯಳಾದ ಯುವತಿಯನ್ನು ಮಿಥುನ್ ಪ್ರೀತಿಸುತ್ತಿದ್ದ. ಕಳೆದ ಎರಡು ವರ್ಷಗಳಿಂದ ಇಬ್ಬರೂ ಸಂಪರ್ಕದಲ್ಲಿದ್ದರು. ಆದರೆ ಯುವಕನ ಮನೆಯವರಿಗೂ ಹಾಗೂ ಯುವತಿಯ ಮನೆಯವರಿಗೂ ಸಾಕಷ್ಟು ವೈಷಮ್ಯವಿತ್ತು. ಹಲವು ಬಾರಿ ಬೇರೆ ಬೇರೆ ಕಾರಣಗಳಿಗಾಗಿ ಗಲಾಟೆಯೂ ನಡೆದಿತ್ತು. ಆದಾಗ್ಯೂ ಯುವತಿಯ ಜೊತೆ ಮಿಥುನ್ ಗೆ ಲವ್ ಆಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿಷಯ ತಿಳಿದಾಗ ಕೆಲ ದಿನಗಳ ಹಿಂದಷ್ಟೇ ಎರಡು ಕುಟುಂಬಗಳ ನಡುವೆ ಗಲಾಟೆಯಾಗಿದೆ. ಇದಾದ ಬಳಿಕ ಗದ್ದೆಗೆ ಹೋಗಿದ್ದ ಮಿಥುನ್ ನನ್ನು ಯುವತಿ ಮನೆಗೆ ಬರುವಂತೆ ಕರೆದಿದ್ದಳು. ಮನೆಗೆ ಹೋದ ಮಿಥುನ್ ಮೇಲೆ ಯುವತಿಯ ನಾಲ್ವರು ಸಹೋದರರು ಹಲ್ಲೆ ನಡೆಸಿದ್ದಾರೆ. ಅಲ್ಲದೇ ಮಿಥುನ್ ನ ಕೈ-ಕಾಲು ಕಟ್ಟಿಹಾಕಿ ಥಳಿಸಿದದರೆ. ಸಾಲದ್ದಕ್ಕೆ ಯುವತಿ ಮಿಥುನ್ ಗುಪ್ತಾಂಗವನ್ನು ಬ್ಲೇಡ್ ನಿಂದ ಕತ್ತರಿಸಿದ್ದಾಳೆ. ತೀವ್ರ ರಕ್ತಸ್ರಾವದಿಂದ ನಳರಾಳಾಡುತ್ತಿದ್ದ ಆತನನ್ನು ಮನೆಯಿಂದ ಹೊರಗೆ ಎಳೆದುಕೊಂಡು ತಂದು ಬಿಸಾಕಿದ್ದಾರೆ.

ಹಲ್ಲೆಗೊಳಗಾದ ವ್ಯಕ್ತಿಯನ್ನು ಕಂಡ ಗ್ರಾಮಸ್ಥರೊಬ್ಬರು ಆತನ ತಂದೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ತಂದೆ ಬಸಂತ್ ಲಾಲ್ ತನ್ನ ಮಗನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಯುವಕನ ಸ್ಥಿತಿ ಗಂಭೀರವಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular