HomeLatest NewsBIG NEWS: ಶೌಚಗುಂಡಿ ಸ್ವಚ್ಛಗೊಳಿಸುವಾಗ ದುರಂತ: ಒಂದೇ ಕುಟುಂಬದ ಮೂವರು ದುರ್ಮರಣ

BIG NEWS: ಶೌಚಗುಂಡಿ ಸ್ವಚ್ಛಗೊಳಿಸುವಾಗ ದುರಂತ: ಒಂದೇ ಕುಟುಂಬದ ಮೂವರು ದುರ್ಮರಣ

ಶೌಚಗುಂಡಿ ಸ್ವಚ್ಛ ಮಾಡಲು ಹೋಗಿ ಒಂದೇ ಕುಟುಂಬದ ಮೂವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಶೌಚಗುಂಡಿ ಸ್ವಚ್ಛಗೊಳಿಸುವಾಗ ಉಸಿರುಗಟ್ಟಿ ಮೂವರು ಮೃತಪಟ್ಟಿದ್ದಾರೆ. ಪ್ರಹ್ಲಾದ್ ಮಂಡಲ್ (60), ಅಳಿಯ ಕಾರ್ತಿಕ್ ವಿಶ್ವಾಸ್ (38) ಹಾಗೂ ಮಗಳು ತನು ವಿಶ್ವಾಸ್ (32) ಮೃತ ದುರ್ದೈವಿಗಳು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇತ್ತೀಚೆಗಷ್ಟೇ ಪ್ರಹ್ಲಾದ್ ಮಂಡಲ್ 8 ಅಡಿ ಆಳದ ಶೌಚಗುಂಡಿ ನಿರ್ಮಾಣ ಮಾಡಿದ್ದರು. ಇದನ್ನು ಸ್ವಚ್ಛಗೊಳಿಸಲೆಂದು ಅಳಿಯ ಹಾಗೂ ಮಗಳೊಂದಿಗೆ ಇಳಿದಿದ್ದಾರೆ. ಈ ವೇಳೆ ಪಕ್ಕದ ಹಳೆ ಶೌಚಗುಂಡಿಯಿಂದ ಅನಿಲ ಸೋರಿಕೆಯಾಗಿ ಉಸಿರುಗಟ್ಟಿ ಹೊರಬರಲು ಸಾಧ್ಯವಾಗದೇ ಮೂವರು ಸಾವನ್ನಪ್ಪಿದ್ದಾರೆ. ಈ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular