HomeIndiaಅತ್ಯಾಚಾರ ಎಸಗಿ ವಿಡಿಯೋ ಮಾಡಿ ಲೈಂಗಿಕ ಸಂಬಂಧಕ್ಕೆ ಬ್ಲಾಕ್ ಮೇಲ್: ಯುವಕ ಅರೆಸ್ಟ್

ಅತ್ಯಾಚಾರ ಎಸಗಿ ವಿಡಿಯೋ ಮಾಡಿ ಲೈಂಗಿಕ ಸಂಬಂಧಕ್ಕೆ ಬ್ಲಾಕ್ ಮೇಲ್: ಯುವಕ ಅರೆಸ್ಟ್

ಉತ್ತರ ಪ್ರದೇಶದ ಭಾದೋಹಿಯಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ 22 ವರ್ಷದ ಯುವಕನನ್ನು ಬಂಧಿಸಲಾಗಿದೆ.

ಮಹಿಳೆ ಮೇಲೆ ಅತ್ಯಾಚಾರ ಎಸಗಿ ಆಕೆಯ ಖಾಸಗಿ ವಿಡಿಯೋವನ್ನು ಆನ್‌ ಲೈನ್‌ ನಲ್ಲಿ ಅಪ್‌ ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಕ್ಕಾಗಿ 22 ವರ್ಷದ ವ್ಯಕ್ತಿಯನ್ನು ಶನಿವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಯಾಗರಾಜ್ ಜಿಲ್ಲೆಯ ಹಂಡಿಯಾ ನಿವಾಸಿ ರಾಹುಲ್ ಯಾದವ್ ವಿರುದ್ಧ ಶುಕ್ರವಾರ 20 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ಮತ್ತು ಕ್ರಿಮಿನಲ್ ಬೆದರಿಕೆ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇಲ್ಲಿನ ಜ್ಞಾನಪುರ-ಗೋಪಿಗಂಜ್ ಟ್ರೈ-ಸೆಕ್ಷನ್ ಬಳಿ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜ್ಞಾನಪುರ ಪೊಲೀಸ್ ಠಾಣೆಯ ಎಸ್‌ಹೆಚ್‌ಒ ವಿನೋದ್ ಕುಮಾರ್ ತಿವಾರಿ ಮಾಹಿತಿ ನೀಡಿ, ಯಾದವ್ ತನ್ನ ಹಳ್ಳಿಯಲ್ಲಿ ವಾಸಿಸುವ ತನ್ನ ಅಣ್ಣನ ಅತ್ತೆಯನ್ನು ಭೇಟಿ ಮಾಡುವಾಗ ಮಹಿಳೆಯೊಂದಿಗೆ ಮಾತನಾಡುತ್ತಿದ್ದ. ಮಾರ್ಚ್ 3 ರಂದು ಆಕೆಯನ್ನು ಮೋಟಾರ್ ಸೈಕಲ್‌ ನಲ್ಲಿ ಕರೆದೊಯ್ದು ಅತ್ಯಾಚಾರ ಎಸಗಿದ್ದಲ್ಲದೆ, ವಿಡಿಯೋ ಕೂಡ ಮಾಡಿದ್ದ. ವಿಡಿಯೋ ಬಳಸಿಕೊಂಡು ಮಾರ್ಚ್ 5 ರವರೆಗೆ ಹಲವಾರು ಬಾರಿ ಲೈಂಗಿಕ ಸಂಬಂಧ ಹೊಂದುವಂತೆ ಬ್ಲಾಕ್ ಮೇಲ್ ಮಾಡಿದ್ದ. ಶುಕ್ರವಾರ ಸಂಜೆ ಸಂತ್ರಸ್ತೆ ಸ್ವತಃ ಪೊಲೀಸರನ್ನು ಸಂಪರ್ಕಿಸಿ ಯಾದವ್ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ಹೇಳಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular