HomeBeautyತಲೆ ಹೊಟ್ಟು ಸಮಸ್ಯೆ ನಿವಾರಣೆ ಮಾಡಲು ಇದನ್ನು ಬಳಸಿ

ತಲೆ ಹೊಟ್ಟು ಸಮಸ್ಯೆ ನಿವಾರಣೆ ಮಾಡಲು ಇದನ್ನು ಬಳಸಿ

ತಲೆಹೊಟ್ಟು ಈಗ ಸಾಮಾನ್ಯ. ಬೇಸಿಗೆ, ಮಳೆ, ಚಳಿಗಾಲ ಯಾವುದೇ ಇರಲಿ  ತಲೆಹೊಟ್ಟು ಸಮಸ್ಯೆ ಸಾಮಾನ್ಯವಾಗಿದೆ. ಹೆಚ್ಚಿನ ಜನರ ಜೀವನ ಶೈಲಿ ಇದಕ್ಕೆ ಕಾರಣವಾಗುತ್ತದೆ. ತಲೆ ಹೊಟ್ಟಿಗೆ ಮನೆಯಲ್ಲಿಯೇ ಮದ್ದಿದೆ.

ನಿಂಬೆ ರಸ: ತಲೆಹೊಟ್ಟು ಸಮಸ್ಯೆಯನ್ನು ನಿವಾರಿಸಲು ನಿಂಬೆ ರಸವನ್ನು ಬಳಸುವುದು ತುಂಬಾ ಪ್ರಯೋಜನಕಾರಿ. ಸಾಸಿವೆ ಎಣ್ಣೆಯಲ್ಲಿ ಅಥವಾ ತೆಂಗಿನ ಎಣ್ಣೆಯಲ್ಲಿ ಒಂದು ನಿಂಬೆ ರಸವನ್ನು ಹಾಕಬೇಕು. ಈ ಎಣ್ಣೆಯಿಂದ ನೆತ್ತಿಗೆ ಮಸಾಜ್ ಮಾಡಿ ಸ್ವಲ್ಪ ಹೊತ್ತು ಬಿಡಿ. ಇದರ ನಂತರ ಕೂದಲನ್ನು ಚೆನ್ನಾಗಿ ತೊಳೆಯಿರಿ. ವಾರಕ್ಕೆ ಎರಡು ಬಾರಿ ಇದನ್ನು ಮಾಡಬೇಕು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಟೀ ಟ್ರೀ ಆಯಿಲ್: ಟಿ-ಟ್ರೀ ಎಣ್ಣೆಯು ಜೀವಿರೋಧಿ ಮತ್ತು ಆಂಟಿವೈರಲ್ ಗುಣಗಳನ್ನು ಹೊಂದಿದೆ. ತಲೆಹೊಟ್ಟು ಸಮಸ್ಯೆಯನ್ನು ನಿವಾರಿಸಲು ಇದು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ. ಶಾಂಪೂದಲ್ಲಿ ಅದರ ಕೆಲವು ಹನಿಗಳನ್ನು ಬೆರೆಸಿ ತಲೆ ತೊಳೆಯಿರಿ. ನಾಲ್ಕರಿಂದ ಐದು ಬಾರಿ ಬಳಸುವುದರಿಂದ ತಲೆಹೊಟ್ಟು ಸಮಸ್ಯೆ ಕಡಿಮೆಯಾಗುತ್ತದೆ.

ಮೊಸರು:  ತಲೆಹೊಟ್ಟು ಸಮಸ್ಯೆಯಲ್ಲಿ ಮೊಸರು ಬಳಸುವುದು ತುಂಬಾ ಪ್ರಯೋಜನಕಾರಿ. ಒಂದು ಕಪ್ ಮೊಸರಿನಲ್ಲಿ ಒಂದು ಚಮಚ ಅಡಿಗೆ ಸೋಡಾ ಮಿಶ್ರಣ ಮಾಡಿ. ಈ ಪ್ಯಾಕ್ ಅನ್ನು ನೆತ್ತಿಗೆ ಹಾಕಿ. ಕೆಲ ದಿನ ಮಾಡುತ್ತ ಬಂದರೆ ವ್ಯತ್ಯಾಸ ನಿಮಗೆ ಕಾಣುತ್ತದೆ.

ಬೇವಿನ ಮತ್ತು ತುಳಸಿ ಎಲೆಗಳನ್ನು ನೀರಿನಲ್ಲಿ ಕುದಿಸಿ. ನೀರು ಅರ್ಧವಾದ್ಮೇಲೆ  ಫಿಲ್ಟರ್ ಮಾಡಿ ಮತ್ತು ತಣ್ಣಗಾಗಲು ಬಿಡಿ. ಈ ನೀರಿನಿಂದ ಕೂದಲನ್ನು ತೊಳೆಯಿರಿ. ಕೆಲವು ಬಾರಿ ಬಳಸುವುದರಿಂದ ತಲೆಹೊಟ್ಟು ಸಮಸ್ಯೆ ಕಡಿಮೆಯಾಗುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular