HomeBeautyಗುಲಾಬಿ ತುಟಿ ಹೊಂದಲು ಈ ಮದ್ದನ್ನು ಬಳಸಿ

ಗುಲಾಬಿ ತುಟಿ ಹೊಂದಲು ಈ ಮದ್ದನ್ನು ಬಳಸಿ

ಧೂಮಪಾನ, ರಾಸಾಯನಿಕಯುಕ್ತ ಲಿಪ್ ಬಾಮ್ ಹಚ್ಚುವುದರಿಂದ ತುಟಿಯ ಮೇಲಿನ ಭಾಗ ಕಪ್ಪಾಗುತ್ತದೆ. ಇದು ಮುಖದ ಅಂದವನ್ನು ಕೆಡಿಸುತ್ತದೆ. ಈ ಸಮಸ್ಯೆಯನ್ನು ನಿವಾರಿಸಿ ತುಟಿಗಳು ಕೆಂಪಾಗುವಂತೆ ಮಾಡಲು ಈ ಮನೆಮದ್ದನ್ನು ಬಳಸಿ.

*1 ಚಮಚ ನಿಂಬೆ ರಸಕ್ಕೆ 1 ಚಮಚ ಸಕ್ಕರೆ ಬೆರೆಸಿ ತುಟಿಗಳ ಮೇಲೆ ನಿಧಾನವಾಗಿ ಉಜ್ಜಿ. ಇದನ್ನು ಪ್ರತಿದಿನ ಮಾಡಿ. ಇದರಿಂದ ತುಟಿಗಳ ಮೇಲಿನ ಕಪ್ಪು ಪದರ ಕಡಿಮೆಯಾಗುತ್ತಾ ತುಟಿ ಕೆಂಪಗಾಗುತ್ತದೆ.

*1 ಚಮಚ ಜೇನುತುಪ್ಪ ಮತ್ತು 1 ಚಮಚ ನಿಂಬೆರಸ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ತುಟಿಗಳಿಗೆ ಹಚ್ಚಿ ರಾತ್ರಿಯಿಡಿ ಬಿಡಿ ಮರುದಿನ ಬೆಳಿಗ್ಗೆ ವಾಶ್ ಮಾಡಿ. ಇದನ್ನು ಪ್ರತಿದಿನ ಮಾಡಿದರೆ ಉತ್ತಮ ಫಲಿತಾಂಶ ಸಿಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular