HomeLatest Newsಕಂಪ್ಯೂಟರ್ ಕೀಬೋರ್ಡ್ ಕೀಗಳು ಮತ್ತು ಮೌಸ್ ಸ್ವಚ್ಛಗೊಳಿಸಲು ಈ ವಿಧಾನ ಬಳಸಿ

ಕಂಪ್ಯೂಟರ್ ಕೀಬೋರ್ಡ್ ಕೀಗಳು ಮತ್ತು ಮೌಸ್ ಸ್ವಚ್ಛಗೊಳಿಸಲು ಈ ವಿಧಾನ ಬಳಸಿ

ಇತ್ತೀಚಿನ ದಿನಗಳಲ್ಲಿ ಕಚೇರಿಯ ಕೆಲಸಗಳನ್ನು ಮನೆಯಲ್ಲಿಯೇ ಕಂಪ್ಯೂಟರ್ ಮುಂದೆಯೇ ಮಾಡುತ್ತೇವೆ. ಇದರಿಂದ ಕಂಪ್ಯೂಟರ್ ಅನ್ನು ನಾವು ಹೆಚ್ಚು ಕಾಲ ಬಳಸುವುದರಿಂದ ಕಂಪ್ಯೂಟರ್ ಮೌಸ್ ಮತ್ತು ಕೀಬೋರ್ಡ್ ಗಳ ಮೇಲೆ ಧೂಳು ಕುಳಿತುಕೊಳ್ಳುತ್ತದೆ. ಇದನ್ನು ಸ್ವಚ್ಛಗೊಳಿಸಲು ಈ ಟಿಪ್ಸ್ ಫಾಲೋ ಮಾಡಿ.

ಕಂಪ್ಯೂಟರ್ ಮೌಸ್ ಮತ್ತು ಕೀಬೋರ್ಡ್ ಸ್ವಚ್ಛಗೊಳಿಸುವುದು ತುಂಬಾ ಕಷ್ಟ. ಯಾಕೆಂದರೆ ಅವುಗಳನ್ನು ನೀರಿನಿಂದ ಸ್ವಚ್ಛಗೊಳಿಸಲು ಆಗುವುದಿಲ್ಲ. ಹಾಗಾಗಿ ಅವುಗಳನ್ನು ಸ್ವಚ್ಛಗೊಳಿಸುವಾಗ ಕಂಪ್ಯೂಟರ್ ಸ್ವಿಚ್ ಆಫ್ ಮಾಡಿ. ಹಾಗೇ ಒಮ್ಮೆ ಕೀಬೋರ್ಡ್ ಅನ್ನು ತಲೆಕೆಳಗಾಗಿಸಿ 2 ಬಾರಿ ನಿಧಾನವಾಗಿ ಶೇಕ್ ಮಾಡಿ. ಇದರಿಂದ ಅದರೊಳಗೆ ಇದ್ದ ಧೂಳು, ಕೊಳಕು ಹೊರಗೆ ಬರುತ್ತದೆ. ಬಳಿಕ ಒಣ ಬಟ್ಟೆಯಿಂದ ಕೀಬೋರ್ಡ್ ಅನ್ನು ಒರೆಸಿ.

 ಕೀಬೋರ್ಡ್ ಮೇಲೆ ಕೊಳಕು ಅಂಟಿಕೊಂಡಿದ್ದರೆ ಫೇಸ್ ವೈಪ್ ಬಳಸಿ ಸ್ವಚ್ಛಗೊಳಿಸಿ. ಫೇಸ್ ವೈಪ್ ನಿಂದ ನಿಧಾನವಾಗಿ ಉಜ್ಜಿದರೆ ಅಂಟಿಕೊಂಡ ಕೊಳೆಗಳು ಕ್ಲೀನ್ ಆಗುತ್ತವೆ. ಹಾಗೇ ಇಯರ್ ಬರ್ಡ್ ಅನ್ನು ಕೂಡ ಕೀಬೋರ್ಡ್ ಸ್ವಚ್ಛಗೊಳಿಸಲು ಬಳಸಬಹುದು. ಇಯರ್ ಬರ್ಡ್ ಗೆ ಆಲ್ಕೋಹಾಲ್ ಅದ್ದಿ ಕೀಬೋರ್ಡ್ ನ ಪ್ರತಿಯೊಂದು ಮೂಲೆಯನ್ನು ಸ್ವಚ್ಛಗೊಳಿಸಿ. ಹಾಗೇ ಮೌಸ್ ಅನ್ನು ಸ್ವಚ್ಛಗೊಳಿಸಲು ಕ್ಲೀನಿಂಗ್ ಸ್ಪ್ರೇಯನ್ನು ಬಳಸಬಹುದು.

For Latest News Updates, Join Our Whatsapp Community🚩
RELATED ARTICLES

Most Popular