HomeBeautyಸನ್ ಬರ್ನ್‌ ದೂರವಾಗಿಸಲು ಬಳಸಿ 'ಟೀ ಬ್ಯಾಗ್'

ಸನ್ ಬರ್ನ್‌ ದೂರವಾಗಿಸಲು ಬಳಸಿ ‘ಟೀ ಬ್ಯಾಗ್’

ನೀವು ಬೆಳಗೆದ್ದು ಚಹಾ ಕುಡಿಯುವವರೇ, ಅದರಲ್ಲೂ ನಿಮಗೆ ಗ್ರೀನ್ ಟೀ ಎಂದರೆ ಬಹಳ ಇಷ್ಟವೇ…? ಒಮ್ಮೆ ಬಳಸಿದ ಟೀ ಪುಡಿಯ ಬ್ಯಾಗ್ ಅನ್ನು ಹಾಗೆ ಎಸೆದು ಬಿಡಬೇಡಿ. ಅದರಲ್ಲಿ ಸೌಂದರ್ಯವರ್ಧಕ ಗುಣಗಳಿವೆ.

ಚಹಾದಲ್ಲಿರುವ ಅಂಟಿ ಏಜಿಂಗ್ ಗುಣಗಳು ನಿಮ್ಮ ತ್ವಚೆ ಹಾಗೂ ಕೂದಲನ್ನು ಆರೋಗ್ಯದಿಂದ ಇಡುತ್ತವೆ.

ಬಳಸಿ ಎಸೆಯಲು ಇಟ್ಟ ಟೀ ಬ್ಯಾಗ್ ಗಳನ್ನು ಸ್ವಲ್ಪ ಹೊತ್ತು ಫ್ರೀಜರ್ ನಲ್ಲಿ ಬಿಡಿ. ಬಳಿಕ ಊದಿರುವ ಕಣ್ಣಿನ ಮೇಲಿಟ್ಟು ಹತ್ತು ನಿಮಿಷ ಮಲಗಿ. ಕಣ್ಣಿನ ಬುಡ ಕಪ್ಪಾಗಿದ್ದರೂ ಇದು ಸರಿಪಡಿಸುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಟೀ ಬ್ಯಾಗಿನ ಒಣಗಿದ ಎಲೆಗಳನ್ನು ಸ್ಕ್ರಬ್ ರೂಪದಲ್ಲಿಯೂ ಬಳಸಬಹುದು. ಇದು ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಿ ಮುಖದ ಮೊಡವೆಗಳನ್ನು ಹೋಗಲಾಡಿಸುತ್ತದೆ. ಕೂದಲು ಉದುರುವಿಕೆ, ಸನ್ ಬರ್ನರ್ ಗಳನ್ನೂ ತಡೆಗಟ್ಟುತ್ತದೆ. ತುಟಿ ಒಡೆಯುವ ಸಮಸ್ಯೆಯನ್ನೂ ದೂರ ಮಾಡುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular