HomeBeautyಮುಖದ ಸೌಂದರ್ಯ ದುಪ್ಪಟ್ಟಾಗಲು ಬಳಸಿ ‘ಕಡಲೆಕಾಯಿ ಫೇಸ್ ಪ್ಯಾಕ್’

ಮುಖದ ಸೌಂದರ್ಯ ದುಪ್ಪಟ್ಟಾಗಲು ಬಳಸಿ ‘ಕಡಲೆಕಾಯಿ ಫೇಸ್ ಪ್ಯಾಕ್’

ಕಡಲೆಕಾಯಿ ಆರೋಗ್ಯಕ್ಕೆ ಉತ್ತಮ. ಕಡಲೆಕಾಯಿ ಕೂದಲು ಮತ್ತು ಚರ್ಮದ ಸೌಂದರ್ಯವನ್ನು ಹೆಚ್ಚಿಸಲು ಸಹಕಾರಿ. ಇದು ಚರ್ಮದ ರಂಧ್ರಗಳನ್ನು ಶುದ್ಧಿಕರಿಸುತ್ತದೆ. ಹಾಗಾಗಿ ಪಾರ್ಟಿ ಫಕ್ಷನ್ ಗಳಿಗೆ ಹೋಗುವಾಗ ಕಡಲೆಕಾಯಿಯಿಂದ ಫೇಸ್ ಪ್ಯಾಕ್ ತಯಾರಿಸಿ ಮುಖಕ್ಕೆ ಹಚ್ಚಿ.

3 ಚಮಚ ಕಡಲೆಕಾಯಿ ಮತ್ತು ½ ಕಪ್ ಹಾಲನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿ ಪೇಸ್ಟ್ ತಯಾರಿಸಿಕೊಳ್ಳಿ. ಇದಕ್ಕೆ 1 ಚಮಚ ಜೇನುತುಪ್ಪ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಫೇಸ್ ಪ್ಯಾಕ್ ತಯಾರಿಸಿ. ಮುಖವನ್ನು ಹಸಿ ಹಾಲಿನಿಂದ ಸ್ವಚ್ಛಗೊಳಿಸಿ ಬಳಿಕ ಈ ಫೇಸ್ ಪ್ಯಾಕ್ ಹಚ್ಚಿ 20 ನಿಮಿಷ ಬಿಟ್ಟು ಮುಖವನ್ನು ವಾಶ್ ಮಾಡಿ.

½ ಕಪ್ ಕಡಲೆಕಾಯಿ ಮತ್ತು 2 ಬಾಳೆಹಣ್ಣನ್ನು ಸೇರಿಸಿ ಚೆನ್ನಾಗಿ ರುಬ್ಬಿ ಪೇಸ್ಟ್ ತಯಾರಿಸಿ ಇದಕ್ಕೆ 1 ಚಿಟಿಕೆ ಅರಿಶಿನ ಮಿಕ್ಸ್ ಮಾಡಿ ಪ್ಯಾಕ್ ತಯಾರಿಸಿ ಮುಖ ಮತ್ತು ಕುತ್ತಿಗೆಗೆ ಹಚ್ಚಿ 15 ನಿಮಿಷ ಬಿಟ್ಟು ಮುಖವನ್ನು ವಾಶ್ ಮಾಡಿ. ಇದನ್ನು ವಾರಕೊಮ್ಮೆ ಬಳಸಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular