HomeInternationalಹಾಸಿಗೆ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಕ್ಕೆ ಬಾಯ್ ಫ್ರೆಂಡ್ ಗೆ ಚಾಕು ಇರಿದ ಗೆಳತಿ

ಹಾಸಿಗೆ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಕ್ಕೆ ಬಾಯ್ ಫ್ರೆಂಡ್ ಗೆ ಚಾಕು ಇರಿದ ಗೆಳತಿ

ಹಾಸಿಗೆ ಮೇಲೆ ಮೂತ್ರ ಮಾಡಿದ ಬಾಯ್ ಫ್ರೆಂಡ್ ಗೆ ಚಾಕು ಹಾಕಿದ ಯುವತಿ ಮೇಲೆ ಕೊಲೆ ಆರೋಪ ಹೊರಿಸಲಾಗಿದೆ. ಅಮೆರಿಕಾದ ಲೂಸಿಯಾನದಲ್ಲಿ ಈ ಘಟನೆ ನಡೆದಿದೆ.

ಈಸ್ಟ್ ಬ್ಯಾಟನ್ ರೂಜ್ ಶೆರಿಫ್ ಕಚೇರಿಯ ಪೊಲೀಸ್ ಸಿಬ್ಬಂದಿ ಸ್ಥಳೀಯ ಆಸ್ಪತ್ರೆಯಿಂದ ಸಂತ್ರಸ್ತನ ಬಗ್ಗೆ ಮಾಹಿತಿ ಪಡೆದ ನಂತರ ಪ್ರಕರಣ ದಾಖಲಿಸಿದ್ದಾರೆ. ಸಂತ್ರಸ್ತನ ತಲೆಯ ಎಡಭಾಗ ಮತ್ತು ಶ್ವಾಸಕೋಶಕ್ಕೆ ಗಾಯವಾಗಿದ್ದು ಅವನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಳೆದ ಒಂದೂವರೆ ವರ್ಷಗಳಿಂದ ಬಾಯ್ ಫ್ರೆಂಡ್ ಹಾಸಿಗೆಯಲ್ಲಿ ಮೂತ್ರ ಮಾಡ್ತಿದ್ದನಂತೆ. ಇದರಿಂದ ರೋಸಿಹೋದ ಗೆಳತಿ ಬ್ರಿಯಾನಾ ಲಕೋಸ್ಟ್ (25) ಕೋಪಗೊಂಡು ಚಾಕು ಹಾಕಿದ್ದಾಳೆ.

ಬ್ರಿಯಾನಾ ಮತ್ತು ಸಂತ್ರಸ್ತ ಘಟನೆ ದಿನದ ರಾತ್ರಿ ಮದ್ಯಪಾನ ಮಾಡುತ್ತಿದ್ದರು ಎಂದು ವರದಿಯಾಗಿದೆ ಎಂದು ತಿಳಿಸಿದ್ದು ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular