ಶಿಕ್ಷಕಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸ್ತಿದ್ದ ಮಗನನ್ನು ಅಪ್ಲಿಕೇಷನ್ ಮೂಲಕ ಪತ್ತೆ‌ ಹಚ್ಚಿದ ತಾಯಿ….!

Tracking app Life 360 helps mum 'catch son having sex with science teacher in car' - Mirror Onlineಕ್ರೀಡೆಯ ಅಭ್ಯಾಸದಿಂದ ತಪ್ಪಿಸಿಕೊಳ್ತಿದ್ದ ಮಗ ಎಲ್ಲಿಗೆ ಹೋಗ್ತಿದ್ದಾನೆ ? ಏನು ಮಾಡ್ತಿದ್ದಾನೆಂದು ತಿಳಿಯಲು ಅಮೆರಿಕಾದಲ್ಲಿ ತಾಯಿಯೊಬ್ಬಳು ಅಪ್ಲಿಕೇಷನ್ ಮೂಲಕ ಆತನ ಚಲನವಲನ ಕಂಡು ಹಿಡಿಯುವ ವೇಳೆ ಆಘಾತಕಾರಿ ವಿಷಯವೊಂದನ್ನ ಕಂಡುಕೊಂಡಿದ್ದಾಳೆ.

ರಗ್ಬಿ ಅಭ್ಯಾಸದಿಂದ ತಪ್ಪಿಸಿಕೊಳ್ತಿದ್ದ ತನ್ನ ಮಗ ಟೀಚರ್ ನೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡಿದ್ದನ್ನ ತಾಯಿ ಕಂಡು ಹಿಡಿದಿದ್ದಾಳೆ. ಕುಟುಂಬ ಸದಸ್ಯರ ಲೊಕೇಷನ್ ಕಂಡುಹಿಡಿಯುವ Life360 ಅಪ್ಲಿಕೇಶನ್ ಬಳಸಿದ ತಾಯಿಗೆ ತನ್ನ ಮಗ ಆತನ ಟೀಚರ್ ನೊಂದಿಗೆ ಪಾರ್ಕ್ ರೋಡ್ ಪಾರ್ಕ್‌ನಲ್ಲಿ ಇದ್ದಿದ್ದು ಗೊತ್ತಾಗಿದೆ. ಈ ವಿಷಯ ತಿಳಿದ ತಕ್ಷಣ ಗಾಬರಿಗೊಂಡ ತಾಯಿ ಖುದ್ದು ಉದ್ಯಾನವನಕ್ಕೆ ಭೇಟಿ ನೀಡಿದ್ದರು. ಆಕೆಯ 18 ವರ್ಷದ ಮಗ ಮತ್ತು 26 ವರ್ಷದ ಸೌತ್ ಮೆಕ್ಲೆನ್‌ಬರ್ಗ್ ಹೈಸ್ಕೂಲ್ ಶಿಕ್ಷಕಿ ಗೇಬ್ರಿಯೆಲಾ ಕಾರ್ಟಯಾ-ನ್ಯೂಫೆಲ್ಡ್ ಕಾರಿನೊಳಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದನ್ನ ನೋಡಿದ್ದಾಗಿ ತಾಯಿ ಆರೋಪಿಸಿದ್ದಾರೆ.

ತಕ್ಷಣ ಕ್ರಮ ಕೈಗೊಂಡ ತಾಯಿ ವಾಹನ ಮತ್ತು ಅದರ ಪರವಾನಗಿ ಫಲಕದ ಫೋಟೋಗಳನ್ನು ಸೆರೆಹಿಡಿಯುವ ಮೂಲಕ ಘಟನೆಯನ್ನು ವರದಿ ಮಾಡಲು ಅಧಿಕಾರಿಗಳನ್ನು ಸಂಪರ್ಕಿಸಿದರು. ವಿದ್ಯಾರ್ಥಿಯೊಂದಿಗಿನ ಅನುಚಿತ ವರ್ತನೆಗೆ ಸಂಬಂಧಿಸಿದಂತೆ ಕಾರ್ಟಯಾ-ನ್ಯೂಫೆಲ್ಡ್ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕಾಯಿತು.

ನ್ಯೂಯಾರ್ಕ್ ಪೋಸ್ಟ್ ನ ಪ್ರಕಾರ, ಪೋಲೀಸರು ಉಲ್ಲೇಖಿಸಿದಂತೆ ತನ್ನ ಮಗನ ಅನುಚಿತ ಸಂಬಂಧದ ಬಗ್ಗೆ ಆತನ ತಾಯಿಗೆ ವದಂತಿಗಳು ಕೇಳಿಬರುತ್ತಿದ್ದವು. ಕ್ರೀಡಾ ಅಭ್ಯಾಸದಿಂದ ವಿಮುಖನಾಗುತ್ತಿದ್ದ ಮಗ ವಿಜ್ಞಾನ ಶಿಕ್ಷಕಿಯಾಗಿರುವ ಕಾರ್ಟಯಾ-ನ್ಯೂಫೆಲ್ಡ್ ನ ಕಾರಿನಲ್ಲಿ, ಆಕೆಯ ಮನೆಯಲ್ಲಿ ಮತ್ತು ತನ್ನ ಮನೆಯಲ್ಲಿ ಭೇಟಿಯಾಗುತ್ತಿದ್ದಾಗಿ ಗೊತ್ತಾಗಿದೆ.

ವಿದ್ಯಾರ್ಥಿಯೊಂದಿಗೆ ಲೈಂಗಿಕ ಚಟುವಟಿಕೆ ಅಪರಾಧದ ಆರೋಪದಲ್ಲಿ ಮೆಕ್ಲೆನ್‌ಬರ್ಗ್ ಕೌಂಟಿ ಜೈಲು ಸೇರಿದ್ದ ಕಾರ್ಟಯಾ-ನ್ಯೂಫೆಲ್ಡ್ ಬಳಿಕ ಜಾಮೀನು ಪಡೆದು ಹೊರಬಂದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read