HomeInternationalಟಿವಿ ಗೇಮ್‌ಶೋ ಗೆದ್ದ ಖುಷಿಯಲ್ಲಿ ಕುಣಿದು ತೋಳಿಗೆ ಪೆಟ್ಟು ಮಾಡಿಕೊಂಡ ಸ್ಪರ್ಧಿ

ಟಿವಿ ಗೇಮ್‌ಶೋ ಗೆದ್ದ ಖುಷಿಯಲ್ಲಿ ಕುಣಿದು ತೋಳಿಗೆ ಪೆಟ್ಟು ಮಾಡಿಕೊಂಡ ಸ್ಪರ್ಧಿ

ಅಮೆರಿಕನ್ ಟಿವಿ ಗೇಮ್ ಶೋ ’ದಿ ಪ್ರೈಸ್ ಈಸ್ ರೈಟ್’ನಲ್ಲಿ ವಿಜೇತನಾದ ಸ್ಫರ್ಧಿಯೊಬ್ಬರು ಇದೇ ಖುಷಿಯಲ್ಲಿ ವಿಪರೀತ ಕುಣಿದಾಡಿದ ಪರಿಣಾಮ ತಮ್ಮ ತೋಳಿಗೆ ಗಂಭೀರವಾದ ಗಾಯ ಮಾಡಿಕೊಂಡಿದ್ದಾರೆ.

ಪಂದ್ಯದಲ್ಲಿ ಗೆದ್ದ ಖುಷಿಯಲ್ಲಿ ಗಾಳಿಗೆ ಜೋರಾಗಿ ಗುದ್ದು ನೀಡುವ ವೇಳೆ ಆತನಿಗೆ ತೋಳು ಹಿಡಿದುಕೊಂಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

’ಪಂದ್ಯದಲ್ಲಿ ಗೆದ್ದ ಬಹುಮಾನವಾಗಿ ಹವಾಯ್ ದ್ವೀಪಕ್ಕೆ ಪ್ರವಾಸ ಹಾಗೂ ಭಾರೀ ಉಡುಗೊರೆ ಗೆದ್ದ ಖುಷಿಯನ್ನು ಸಂಭ್ರಮಿಸಲು ಹೋಗಿ ಹೀಗೆ ಮಾಡಿಕೊಂಡ ಹ್ಯಾರಿ ಹೆಸರಿನ ಈ ಸ್ಫರ್ಧಿ ಸದ್ಯ ಆಸ್ಪತ್ರೆಯಲ್ಲಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಪಂದ್ಯದ ಆಯೋಜಕರು ತಿಳಿಸಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, 4.4 ದಶಲಕ್ಷ ವೀಕ್ಷಣೆಗಳನ್ನು ಕಂಡಿದೆ.

For Latest News Updates, Join Our Whatsapp Community🚩
RELATED ARTICLES

Most Popular