HomeEntertainmentಅಂದಿನಂತೆಯೇ ಇಂದಿಗೂ ಅದೇ ಗ್ಲಾಮರ್: ‘ಆ ಹಿ ಜಾಯೇ’ ಹಾಡಿನ 25 ವರ್ಷದ ಸಂಭ್ರಮದಲ್ಲಿ ಮಿಂಚಿದ...

ಅಂದಿನಂತೆಯೇ ಇಂದಿಗೂ ಅದೇ ಗ್ಲಾಮರ್: ‘ಆ ಹಿ ಜಾಯೇ’ ಹಾಡಿನ 25 ವರ್ಷದ ಸಂಭ್ರಮದಲ್ಲಿ ಮಿಂಚಿದ ಉರ್ಮಿಳಾ ಮಾತೋಂಡ್ಕರ್

ಬಾಲಿವುಡ್‌ನ ಎವರ್‌ಗ್ರೀನ್ ನಟಿ ಉರ್ಮಿಳಾ ಮಾತೋಂಡ್ಕರ್ ತಮ್ಮ ಮನಮೋಹಕ ನಟನೆ ಹಾಗೂ ಭರ್ಜರಿ ಡ್ಯಾನ್ಸ್ ಮೂಲಕ 90ರ ದಶಕದಲ್ಲಿ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದವರು. ಅವರ ವೃತ್ತಿಜೀವನದ ಸೂಪರ್ ಹಿಟ್ ಗೀತೆಗಳಲ್ಲಿ ಒಂದಾದ ‘ಆ ಹಿ ಜಾಯೇ’ ಬಿಡುಗಡೆಯಾಗಿ ಈಗ ಬರೊಬ್ಬರಿ 25 ವರ್ಷಗಳು ಪೂರೈಸಿವೆ. ಈ ವಿಶೇಷ ಮೈಲಿಗಲ್ಲನ್ನು ನಟಿ ಸಾಮಾಜಿಕ ಜಾಲತಾಣದಲ್ಲಿ ಅತ್ಯಂತ ವಿಭಿನ್ನವಾಗಿ ಆಚರಿಸಿದ್ದಾರೆ.

ತಮ್ಮ ಹಿಟ್ ಹಾಡಿನ 25ನೇ ವರ್ಷದ ನೆನಪಿಗಾಗಿ ಉರ್ಮಿಳಾ ಹೊಸ ಫೋಟೋಶೂಟ್ ಒಂದನ್ನು ಹಂಚಿಕೊಂಡಿದ್ದಾರೆ. ಮಿಂಚುವ ಗುಲಾಬಿ ಬಣ್ಣದ ಸುಂದರ ಗೌನ್ ಧರಿಸಿ ಫೋಟೋಗೆ ಪೋಸ್ ನೀಡಿರುವ ಅವರು, 52ರ ವಯಸ್ಸಿನಲ್ಲೂ ತಮ್ಮ ಹಳೆಯ ದಿವ್ಯ ರೂಪವನ್ನು ಮರುಸೃಷ್ಟಿಸಿದ್ದಾರೆ. ಪಳಪಳನೆ ಹೊಳೆಯುವ ಸೀಕ್ವಿನ್ ಕೆಲಸವಿರುವ ಈ ಡ್ರೆಸ್‌ನಲ್ಲಿ ನಟಿ ಅತ್ಯಂತ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದು, ಅಭಿಮಾನಿಗಳನ್ನು ಬೆರಗುಗೊಳಿಸಿದ್ದಾರೆ.

ಫೋಟೋಶೂಟ್‌ಗೆ ತಕ್ಕಂತೆ ಆಕರ್ಷಕ ಇಯರಿಂಗ್ಸ್, ವಜ್ರದ ಉಂಗುರ ಹಾಗೂ ಶೈನಿಂಗ್ ಮೇಕಪ್ ಜೊತೆಗೆ ನಟಿ ಕಂಗೊಳಿಸಿದ್ದಾರೆ. ಜಾಲತಾಣದಲ್ಲಿ ಈ ಫೋಟೋಗಳು ವೈರಲ್ ಆಗುತ್ತಿದ್ದಂತೆ ಬಾಲಿವುಡ್ ಪ್ರಮುಖರು ಹಾಗೂ ಅಭಿಮಾನಿಗಳು ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದ್ದಾರೆ. ಪ್ರಸಿದ್ಧ ಕೊರಿಯೋಗ್ರಾಫರ್ ಫರಾ ಖಾನ್ ಕಾಮೆಂಟ್ ಮಾಡಿ, “ಇಂದಿಗೂ ನೀವು ಅಂದಿನಂತೆಯೇ ಕಾಣುತ್ತಿದ್ದೀರಿ, ಇದು ಹೇಗೆ ಸಾಧ್ಯ?” ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇನ್ನುಳಿದ ಅಭಿಮಾನಿಗಳು ಉರ್ಮಿಳಾ ಅವರನ್ನು ಎಂದೆಂದಿಗೂ ಬಾಲಿವುಡ್‌ನ ‘ಒರಿಜಿನಲ್ ಕ್ವೀನ್’ ಎಂದು ಬಣ್ಣಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular