HomeCrimeಕ್ರೈಂ ಸ್ಟೋರಿಯಾದ ಪ್ರೇಮ ಸಂಬಂಧ; ಗೆಳತಿಗೆ ಗುಂಡು ಹಾರಿಸಿ ಅವಳ ತಂದೆಯನ್ನೂ ಕೊಂದು ಆತ್ಮಹತ್ಯೆ ಮಾಡಿಕೊಂಡ...

ಕ್ರೈಂ ಸ್ಟೋರಿಯಾದ ಪ್ರೇಮ ಸಂಬಂಧ; ಗೆಳತಿಗೆ ಗುಂಡು ಹಾರಿಸಿ ಅವಳ ತಂದೆಯನ್ನೂ ಕೊಂದು ಆತ್ಮಹತ್ಯೆ ಮಾಡಿಕೊಂಡ ಕಾನ್ಸ್ ಟೇಬಲ್

ಪ್ರೇಮ ಸಂಬಂಧದಿಂದ ಪೊಲೀಸ್ ಪೇದೆಯೊಬ್ಬ ತನ್ನ ಗೆಳತಿಗೆ ಗುಂಡು ಹಾರಿಸಿ ನಂತರ ಆಕೆಯ ತಂದೆಯನ್ನು ಕೊಂದು ಕೊನೆಗೆ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಧ್ಯಪ್ರದೇಶದ ಶಾಜಾಪುರ ಜಿಲ್ಲೆಯಲ್ಲಿ ಈ ಘಟನೆ ವರದಿಯಾಗಿದೆ.

ಚಾಲಕರಾಗಿ ಕೆಲಸ ಮಾಡುತ್ತಿದ್ದ ಆರೋಪಿತ ಪೊಲೀಸ್ ಮೊದಲು ಗೆಳತಿಗೆ ಗುಂಡು ಹಾರಿಸಿ ಬಳಿಕ ಅವಳ ತಂದೆಯನ್ನು ಕೊಂದ ತರುವಾಯ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆರೋಪಿ ಕಾನ್‌ಸ್ಟೆಬಲ್ 26 ವರ್ಷದ ಸುಭಾಷ್ ಖರಾಡಿ , ಬರ್ಚಾ ಪೊಲೀಸ್ ಠಾಣೆ ವ್ಯಾಪ್ತಿಯ ಮಲಿಖೇಡಿಯಲ್ಲಿ 55 ವರ್ಷ ವಯಸ್ಸಿನ ಜೈಕರ್ ಶೇಖ್ ಅವರ ನಿವಾಸಕ್ಕೆ ದೇಶೀ ನಿರ್ಮಿತ ಪಿಸ್ತೂಲ್‌ನೊಂದಿಗೆ ಸೋಮವಾರ ಮಧ್ಯರಾತ್ರಿ 1 ಗಂಟೆಗೆ ಪ್ರವೇಶಿಸಿದ್ದ. ಜೈಕರ್ ಶೇಖ್ ಮತ್ತು ಅವರ 25 ವರ್ಷದ ಮಗಳ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದ. ದುರದೃಷ್ಟವಶಾತ್ ಜೈಕರ್ ಶೇಖ್ ಅವರು ಸ್ಥಳದಲ್ಲೇ ಸಾವನ್ನಪ್ಪಿದರು. ಅವರ ಮಗಳನ್ನು ಚಿಕಿತ್ಸೆಗಾಗಿ ಇಂದೋರ್‌ನ ಆಸ್ಪತ್ರೆಗೆ ಸಾಗಿಸಲಾಯಿತು. ಘಟನೆ ಬಳಿಕ ರೈಲ್ವೆ ಹಳಿ ಮೇಲೆ ಸುಭಾಷ್ ಖರಾಡಿ ಮೃತದೇಹ ಸಿಕ್ಕಿದ್ದು ಆತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಪ್ರೇಮ ಸಂಬಂಧದಿಂದಾಗಿ ಈ ದುರಂತ ಸಾವುಗಳು ಸಂಭವಿಸಿವೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಆದಾಗ್ಯೂ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular