HomeLatest News'UPI' ಬಳಕೆದಾರರೇ ಗಮನಿಸಿ : ನಿಮ್ಮ ಖಾತೆಯಿಂದ ಆಟೋಮ್ಯಾಟಿಕ್ ಆಗಿ ಹಣ ಕಟ್ ಆಗುತ್ತಿದ್ರೆ ಕೂಡಲೇ...

‘UPI’ ಬಳಕೆದಾರರೇ ಗಮನಿಸಿ : ನಿಮ್ಮ ಖಾತೆಯಿಂದ ಆಟೋಮ್ಯಾಟಿಕ್ ಆಗಿ ಹಣ ಕಟ್ ಆಗುತ್ತಿದ್ರೆ ಕೂಡಲೇ ಈ ಸೆಟ್ಟಿಂಗ್ ಬದಲಾಯಿಸಿ

ಇಂದಿನ ಡಿಜಿಟಲ್ ಯುಗದಲ್ಲಿ PhonePe, Google Pay, Paytm ನಂತಹ UPI ಆಪ್‌ಗಳನ್ನು ಬಳಸುವವರಿಗೆ ಒಂದು ಪ್ರಮುಖ ಮಾಹಿತಿ ಇದೆ. ಸಾಮಾನ್ಯವಾಗಿ ನಾವು ಒಟಿಟಿ (OTT) ಚಂದಾದಾರಿಕೆಗಳು, ಎಸ್‌ಐಪಿ (SIP), ವಿಮೆ ಅಥವಾ ಇತರ ಸೇವೆಗಳಿಗಾಗಿ ‘ಯೂಪಿಐ ಆಟೋ-ಪೇ’ (UPI Auto-pay) ಸೆಟ್ ಮಾಡಿರುತ್ತೇವೆ. ಆದರೆ ಕಾಲಾನಂತರದಲ್ಲಿ ಇವುಗಳನ್ನು ರದ್ದುಗೊಳಿಸಲು ಮರೆತುಬಿಡುತ್ತೇವೆ. ಇದರಿಂದಾಗಿ ನಮ್ಮ ಗಮನಕ್ಕೆ ಬಾರದೆಯೇ ಹಣ ಕಟ್ ಆಗುತ್ತಿರುತ್ತದೆ.

ಅಸಲಿ ಸಮಸ್ಯೆ ಏನು?

ಅನೇಕ ಬಾರಿ ನಾವು ಕೆಲವು ಸೇವೆಗಳಿಗಾಗಿ ಆಟೋ-ಪೇ ಸೆಟ್ ಮಾಡಿಕೊಂಡಿರುತ್ತೇವೆ. ಆದರೆ ಆ ಸೇವೆಯ ಅವಶ್ಯಕತೆ ಮುಗಿದ ನಂತರವೂ ಅದನ್ನು ಕ್ಯಾನ್ಸಲ್ ಮಾಡಲು ಮರೆಯುತ್ತೇವೆ. ಇದರಿಂದ ಪ್ರತಿ ತಿಂಗಳು ಅಥವಾ ವರ್ಷಕ್ಕೊಮ್ಮೆ ನಮ್ಮ ಅನುಮತಿ ಇಲ್ಲದೆಯೇ ಅಕೌಂಟ್‌ನಿಂದ ಹಣ ಕಟ್ ಆಗುತ್ತಿರುತ್ತದೆ. ಈಗ ಎಲ್ಲಾ UPI ಆಪ್‌ಗಳಲ್ಲಿ ನೀವು ಸೆಟ್ ಮಾಡಿರುವ ಆಟೋ-ಪೇ ಮ್ಯಾಂಡೇಟ್‌ಗಳನ್ನು (Auto-pay Mandates) ಒಂದೇ ಕಡೆ ನೋಡಿ, ಅವುಗಳನ್ನು ರದ್ದುಗೊಳಿಸಲು ಅವಕಾಶವಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆಟೋ-ಪೇ ರದ್ದುಗೊಳಿಸುವುದು ಹೇಗೆ?

ಇದಕ್ಕಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸಿ:

  1. ಮೊದಲಿಗೆ ಅಧಿಕೃತ UPI ವೆಬ್‌ಸೈಟ್ upihelp.npci.org.in ಓಪನ್ ಮಾಡಿ.
  2. ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಕ್ಯಾಪ್ಚಾ ಕೋಡ್ ನಮೂದಿಸಿ.
  3. ನಿಮ್ಮ ಮೊಬೈಲ್‌ಗೆ ಬರುವ ಓಟಿಪಿ (OTP) ನಮೂದಿಸಿ ಲಾಗಿನ್ ಆಗಿ.
  4. ಅಲ್ಲಿ ‘Show My Auto-pay Mandates’ ಎಂಬ ಆಯ್ಕೆ ಕಾಣಿಸುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ.
  5. ಈಗ ನಿಮ್ಮ UPI ಐಡಿಗೆ ಲಿಂಕ್ ಆಗಿರುವ ಎಲ್ಲಾ ಆಟೋ-ಪೇ ಲಿಸ್ಟ್‌ಗಳು ಕಾಣಿಸುತ್ತವೆ.
  6. ನಿಮಗೆ ಅಗತ್ಯವಿಲ್ಲದವುಗಳನ್ನು ನೀವು ‘Pause’ (ತಾತ್ಕಾಲಿಕ ತಡೆ) ಮಾಡಬಹುದು ಅಥವಾ ‘Revoke’ (ರದ್ದು) ಮಾಡಬಹುದು.

ಇದರಿಂದ ಆಗುವ ಪ್ರಯೋಜನವೇನು ?

ಹೀಗೆ ಅನಗತ್ಯ ಆಟೋ ಪೇಮೆಂಟ್‌ಗಳನ್ನು ರದ್ದುಗೊಳಿಸುವುದರಿಂದ ನಿಮ್ಮ ಹಣ ಉಳಿತಾಯವಾಗುತ್ತದೆ. ಅಕೌಂಟ್‌ನಲ್ಲಿರುವ ಬ್ಯಾಲೆನ್ಸ್ ನಿಮ್ಮ ಅರಿವಿಲ್ಲದೆ ಕಡಿಮೆಯಾಗುವುದನ್ನು ತಪ್ಪಿಸಬಹುದು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular