HomeIndiaಗೆಳೆಯನ ಚಿತೆಗೆ ಹಾರಿ ಪ್ರಾಣ ಬಿಟ್ಟ ಬಾಲ್ಯ ಸ್ನೇಹಿತ

ಗೆಳೆಯನ ಚಿತೆಗೆ ಹಾರಿ ಪ್ರಾಣ ಬಿಟ್ಟ ಬಾಲ್ಯ ಸ್ನೇಹಿತ

ಬಾಲ್ಯದ ಸ್ನೇಹಿತನ ಅಗಲಿಕೆಯಿಂದ ಮನನೊಂದ ವ್ಯಕ್ತಿಯೊಬ್ಬರು ಆತನ ಚಿತೆಗೆ ಹಾರಿ ಜೀವ ಕಳೆದುಕೊಂಡ ಘಟನೆ ಉತ್ತರ ಪ್ರದೇಶದ ಫಿರೋಜ಼ಾಬಾದ್‌ನಲ್ಲಿ ಜರುಗಿದೆ.

ಕ್ಯಾನ್ಸರ್‌ನಿಂದ ಮೃತಪಟ್ಟ ಅಶೋಕ್‌ರ ದೇಹವನ್ನು ಯಮುನಾ ನದಿ ತೀರದಲ್ಲಿ ಅಂತಿಮ ಸಂಸ್ಕಾರ ಮಾಡಲಾಗುತ್ತಿತ್ತು. ಈ ವೇಳೆ ಅವರ ಬಾಲ್ಯ ಸ್ನೇಹಿತ ಆನಂದ್, 40, ಸಹ ಅಲ್ಲೇ ಇದ್ದರು. ಶವ ಸಂಸ್ಕಾರ ಮಾಡಿ ಅಲ್ಲಿಂದ ಜನರು ಹೊರಡುತ್ತಲೇ ಆನಂದ್ ಚಿತೆಗೆ ಹಾರಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಲ್ಲಿದ್ದ ಕೆಲವೇ ಮಂದಿ ಕೂಡಲೇ ಆನಂದ್‌ರನ್ನು ಬೆಂಕಿಯಿಂದ ಹೊರಗೆಳೆದು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿಂದ ಆಗ್ರಾ ವೈದ್ಯಕೀಯ ಕಾಲೇಜಿಗೆ ಆತನನ್ನು ದಾಖಲಿಸಿದರೂ ಸಹ ದೇಹವು 90%ರಷ್ಟು ಸುಟ್ಟ ಗಾಯಗಳಿಂದ ಆನಂದ್ ಮೃತಪಟ್ಟಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular