HomeKarnatakaಅನಿರೀಕ್ಷಿತ ಆಲಿಕಲ್ಲು ಮಳೆ: ಧಾರವಾಡ ಮನೆ, ಹೊಲಗಳಿಗೆ ಸಚಿವರ ಭೇಟಿ

ಅನಿರೀಕ್ಷಿತ ಆಲಿಕಲ್ಲು ಮಳೆ: ಧಾರವಾಡ ಮನೆ, ಹೊಲಗಳಿಗೆ ಸಚಿವರ ಭೇಟಿ

ಕಲಘಟಗಿ ತಾಲ್ಲೂಕಿನ ಮಾಚಾಪುರ ಗ್ರಾಮದಲ್ಲಿ ಇತ್ತೀಚೆಗೆ ಸುರಿದ ಆಲಿಕಲ್ಲು ಮಳೆಯಿಂದ ಉಂಟಾದ ಹಾನಿಯನ್ನು ಗ್ರಾಮದ ಉದ್ದಗಲಕ್ಕೂ ಸಂಚರಿಸಿ, ಹಾನಿಗೊಳಗಾದ ಮನೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಪರಿಶೀಲಿಸಿದರು. ಗ್ರಾಮಸ್ಥರೊಂದಿಗೆ ಚರ್ಚಿಸಿ, ಮಾಹಿತಿ ಪಡೆದುಕೊಂಡರು

ಈ ಸಂದರ್ಭದಲ್ಲಿ ಮಾಚಾಪುರ ಗ್ರಾಮದಲ್ಲಿ ಇತ್ತೀಚೆಗೆ ಸುರಿದ ಆಲಿಕಲ್ಲು ಮಳೆಯಿಂದ ತೊಂದರೆಗೆ ಈಡಾದ ಸಾರ್ವಜನಿಕರ ಕುಂದು ಕೊರತೆಗಳನ್ನು ಅವರು ವಿಚಾರಿದರು. ಹಾನಿಗೊಂಡ ಮನೆಗಳಿಗೆ ತುರ್ತು ನೆರವು ನೀಡಲು ಸಂತೋಷ್ ಲಾಡ್ ಫೌಂಡೇಶನ್ ಮುಖಾಂತರ ಗ್ರಾಮಕ್ಕೆ 50,000 ಮೇಲ್ಚಾವಣಿ ಹಂಚುಗಳು ವಿತರಿಸಲಾಗಿತ್ತು. ಇದರಿಂದ ತಾತ್ಕಾಲಿಕವಾಗಿ ಮನೆ ಹಾನಿಗೊಂಡ ಕುಟುಂಬಗಳು ಸುರಕ್ಷಿತ ವಾಸಸ್ಥಳವನ್ನು ಹೊಂದಿದರೆ ಎಂದು ಅವರು ಪರಿಶೀಲಿಸಿದರು.

ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿದ ಸಚಿವರು, ಸಂಕಷ್ಟದ ಸಮಯದಲ್ಲಿ ಜಿಲ್ಲಾಡಳಿತ ಮತ್ತು ಸರ್ಕಾರ ನಿಮ್ಮೊಂದಿಗಿದೆ ಇರುತ್ತದೆ ಎಂದು ಭರವಸೆ ನೀಡಿದರು. ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಗ್ರಾಮದ ಪ್ರತಿ ಹೊಲಕ್ಕೂ ಭೇಟಿ ನೀಡಿ ಶೀಘ್ರವಾಗಿ ಹಾನಿಯ ವರದಿಯನ್ನು ಸಿದ್ಧಪಡಿಸಬೇಕು. ಹಾನಿಯ ಪ್ರಮಾಣವನ್ನು ನಿಖರವಾಗಿ ಅಂದಾಜಿಸಿ, ಅರ್ಹ ರೈತರಿಗೆ ವಿಳಂಬವಾಗದೆ ಪರಿಹಾರವನ್ನು ನೀಡಬೇಕು ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜಾನುವಾರ ಹಾನಿಗೆ ಪರಿಹಾರ ಚೆಕ್ ವಿತರಣೆ: ಮಾಚಾಪುರ ಗ್ರಾಮದಲ್ಲಿ ಅನಿರೀಕ್ಷಿತ ಮಳೆಯಿಂದಾಗಿ ಜಾನುವಾರು ಪ್ರಾಣಹಾನಿ ಆಗಿದ್ದ ಫಲಾನುಭವಿಗಳಾದ ಕಲ್ಕಪ್ಪ ಬಸವಂತಪ್ಪ ಹುರಕಡ್ಲಿ, ನಿಂಗಪ್ಪ ತಿಪ್ಪಣ್ಣ ರಾಮನಕೊಪ್ಪ, ನಾಗಪ್ಪ ಫಕ್ಕೀರಪ್ಪ ಇಂದೂರ ಅವರಿಗೆ ಸ್ಥಳದಲ್ಲಿಯೇ ಜಿಲ್ಲಾಡಳಿತವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು, ತಲಾ ರೂ.20 ಸಾವಿರ ಪರಿಹಾರದ ಮೊತ್ತದ ಚಕ್ ವಿತರಿಸಿದರು.

ಸಚಿವ ಸಂತೋಷ್ ಲಾಡ್ ಅವರು ಆಲಿಕಲ್ಲು ಮಳೆಯಿಂದ ಬೆಳೆ ಹಾನಿಯಾದ ಮಾಚಾಪುರ ಗ್ರಾಮದ ರೈತ ಸಂತೋಜಿ ಹುಳಿ ಹೋಂಡ ಅವರ ಜಮೀನಿಗೆ ಭೇಟಿ ನೀಡಿ, ಕಬ್ಬು, ಗೋವಿನಜೋಳ ಮತ್ತು ಮಾವು ಬೆಳೆ ಹಾನಿಯಾದ ಬಗ್ಗೆ ಪರಿಶೀಲಿಸಿದರು.

ಇಂತಹ ಬೆಳೆಗಳೊಂದಿಗೆ ಅನೇಕ ರೈತರ ಜಮೀನುಗಳಲ್ಲಿನ ಪೈಪ್, ಮತ್ತು ಇತರ ಪರಿಕರಗಳು ಹಾಳಾದ ಬಗ್ಗೆ ಹಾಗೂ ಅಡಿಕೆ ನಾಟಿ ಮಾಡಲು ತಂದಿದ್ದ ಅಡಿಕೆ ಸಸಿ ಹಾನಿಯಾದ ಬಗ್ಗೆ ರೈತರಿಂದ ಮಾಹಿತಿ ಒಡೆದುಕೊಂಡರು. ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸಮೀಕ್ಷೆ ಮಾಡಿ, ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲು ಸೂಚಿಸಿದರು.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular