HomeEntertainmentಫೆಬ್ರವರಿ 7ರಂದು ಬಿಡುಗಡೆಯಾಗಲಿದೆ 'ಅನ್ ಲಾಕ್ ರಾಘವ'

ಫೆಬ್ರವರಿ 7ರಂದು ಬಿಡುಗಡೆಯಾಗಲಿದೆ ‘ಅನ್ ಲಾಕ್ ರಾಘವ’

ತನ್ನ ವಿಭಿನ್ನ ಶೀರ್ಷಿಕೆ ಹಾಗೂ ಟೀಸರ್ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ದೀಪಕ್ ಮಡುವನಹಳ್ಳಿ ನಿರ್ದೇಶನದ ‘ಅನ್ಲಾಕ್ ರಾಘವ’ ಚಿತ್ರ ಮುಂದಿನ ವರ್ಷ ಫೆಬ್ರವರಿ 7ರಂದು  ರಾಜ್ಯಾದ್ಯಂತ ತೆರೆ ಕಾಣಲಿದೆ. ಈ ಕುರಿತು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

ಈ ಚಿತ್ರವನ್ನು ಮಯೂರ ಮೋಷನ್ ಪಿಕ್ಚರ್ಸ್ ಬ್ಯಾನರ್ ನಲ್ಲಿ ಮಂಜುನಾಥ ಡಿ ಹಾಗೂ ಗಿರೀಶ್ ಕುಮಾರ್ ನಿರ್ಮಾಣ ಮಾಡಿದ್ದು, ಮಿಲಿಂದ್ ಗೌತಮ್ ಮತ್ತು ರಾಚೆಲ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೆ ಅನೂಪ್ ಸೀಳಿನ್ ಸಂಗೀತ ಸಂಯೋಜನೆ ನೀಡಿದ್ದು, ಅಜಯ್ ಕುಮಾರ್ ಸಂಕಲನ, ಲವಿತ್ ಛಾಯಾಗ್ರಹಣ, ವಿನೋದ್ ಹಾಗೂ ಅರ್ಜುನ್ ಸಾಹಸ ನಿರ್ದೇಶನವಿದೆ. ಮುರುಳಿ, ಧನಂಜಯ ಅವರ ನೃತ್ಯ ನಿರ್ದೇಶನವಿದೆ.

 

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ
View this post on Instagram

 

A post shared by A2 Music (@a2musicsouth)

 

For Latest News Updates, Join Our Whatsapp Community🚩
RELATED ARTICLES

Most Popular