HomeBusinessBig Update: ಕೇಂದ್ರ ಬಜೆಟ್ 2026: ಬಜೆಟ್ ಬಳಿಕ ಷೇರು ಮಾರುಕಟ್ಟೆ ಭಾರೀ ಕುಸಿತ

Big Update: ಕೇಂದ್ರ ಬಜೆಟ್ 2026: ಬಜೆಟ್ ಬಳಿಕ ಷೇರು ಮಾರುಕಟ್ಟೆ ಭಾರೀ ಕುಸಿತ

ಭಾನುವಾರ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ 2026-27ನೇ ಸಾಲಿನ ಬಜೆಟ್‌ ಮಂಡನೆ ಮಾಡಿದರು. ಬಜೆಟ್‌ ಕಾರಣಕ್ಕೆ ಇಂದು ಷೇರು ಮಾರುಕಟ್ಟೆ ಬಾಗಿಲು ತೆರೆದಿತ್ತು.

ಆದರೆ ಬಜೆಟ್ ಭಾಷಣ ಮಂಡನೆ ಬಳಿಕ ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತವಾಗಿದೆ. ಹೂಡಿಕೆದಾರರು ಕಂಗಾಲಾಗಿದ್ದಾರೆ. 12.34ಕ್ಕೆ ಬಿಎಸ್‌ಇ 1,348.50 ಪಾಯಿಂಟ್ಸ್ ಮತ್ತು ಎ ಎನ್‌ಎಸ್‌ಇ ನಿಫ್ಟಿ 494.35 ಪಾಯಿಂಟ್ಸ್ ಕುಸಿತವಾಗಿದೆ.

ಮಾರುಕಟ್ಟೆ ಕುಸಿತ ಏಕೆ?: ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದಲ್ಲಿ ಆದಾಯ ತೆರಿಗೆ ವಿನಾಯಿತಿಯ ನಿರೀಕ್ಷೆಯಲ್ಲಿದ್ದ ಹೂಡಿಕೆದಾರರಿಗೆ ನಿರಾಶೆಯಾದ ಹಿನ್ನೆಲೆಯಲ್ಲಿ, ಭಾನುವಾರ ದೇಶೀಯ ಷೇರು ಮಾರುಕಟ್ಟೆ ಸೂಚ್ಯಂಕಗಳು 2,000 ಪಾಯಿಂಟ್‌ಗಳಿಗಿಂತಲೂ ಅಧಿಕ ಕುಸಿತ ಕಂಡಿದೆ ಎಂದು ಅಂದಾಜಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಧ್ಯಾಹ್ನ 12:34ರ ಸುಮಾರಿಗೆ, S&P BSE ಸೆನ್ಸೆಕ್ಸ್ 1,348.50 ಪಾಯಿಂಟ್ಸ್ ಕುಸಿದು 80,921.73 ಮಟ್ಟಕ್ಕೆ ತಲುಪಿದರೆ, NSE ನಿಫ್ಟಿ 50 ಸೂಚ್ಯಂಕವು 494.35 ಪಾಯಿಂಟ್ಸ್ ಕುಸಿತದೊಂದಿಗೆ 24,826.30 ಮಟ್ಟಕ್ಕೆ ತಲುಪಿತು.

ಬಜೆಟ್ ಭಾಷಣದ ಅಂತ್ಯದ ವೇಳೆಗೆ, ಸನ್ ಫಾರ್ಮಾಸ್ಯುಟಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ಶೇ. 0.77 ರಷ್ಟು ಏರಿಕೆಯೊಂದಿಗೆ ಸೆನ್ಸೆಕ್ಸ್‌ನಲ್ಲಿ ಅಗ್ರಗಣ್ಯ ಲಾಭದಾಯಕ ಷೇರಾಗಿ ಹೊರಹೊಮ್ಮಿತು. ಇದರ ಬೆನ್ನಲ್ಲೇ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಶೇ. 0.71 ರಷ್ಟು ಏರಿಕೆ ಕಂಡಿತು. ಆದರೆ, HDFC ಬ್ಯಾಂಕ್ ಯಾವುದೇ ಬದಲಾವಣೆ ಕಾಣದೆ ಸ್ಥಿರವಾಗಿತ್ತು.

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಅತಿ ಹೆಚ್ಚು ಕುಸಿತ ಕಂಡು ಶೇ. 6.50 ರಷ್ಟು ಇಳಿಕೆಯಾಗಿದೆ. ರಕ್ಷಣಾ ವಲಯಕ್ಕೆ ಬಜೆಟ್‌ನಲ್ಲಿ ನಿರೀಕ್ಷಿತ ಪ್ರಮಾಣದ ದೊಡ್ಡ ಹೂಡಿಕೆ ಅಥವಾ ಹೊಸ ಘೋಷಣೆಗಳ ಬಗ್ಗೆ ಸ್ಪಷ್ಟತೆ ಇಲ್ಲದಿರುವುದು ಈ ತೀವ್ರ ಕುಸಿತಕ್ಕೆ ಕಾರಣವಾಗಿರಬಹುದು ಎಂದು ಅಂದಾಜಿಸಲಾಗಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶೇ. 3.38 ರಷ್ಟು, NTPC ಲಿಮಿಟೆಡ್ ಶೇ. 3.06 ರಷ್ಟು, HCL ಟೆಕ್ನಾಲಜೀಸ್ ಶೇ. 2.91 ರಷ್ಟು ಮತ್ತು ಬಜಾಜ್ ಫೈನಾನ್ಸ್ ಶೇ. 2.50 ರಷ್ಟು ಕುಸಿತ ಕಂಡಿವೆ. ಎಸ್‌ಬಿಐ ಮತ್ತು ಎಚ್‌ಸಿಎಲ್ ಟೆಕ್‌ನಂತಹ ದೊಡ್ಡ ಕಂಪನಿಗಳು ಬಜೆಟ್ ನಂತರದ ಲಾಭ ಗಳಿಕೆ ಮತ್ತು ತೆರಿಗೆ ನಿಯಮಗಳ ಬದಲಾವಣೆಯಿಂದಾಗಿ ಒತ್ತಡಕ್ಕೆ ಒಳಗಾಗಿವೆ ಎಂದು ವಿಶ್ಲೇಷಿಸಲಾಗಿತ್ತಿದೆ.

ಕ್ಲಿಯರ್‌ ಟ್ಯಾಕ್ಸ್‌ ಸಂಸ್ಥಾಪಕ ಮತ್ತು ಸಿಇಒ ಅರ್ಚಿತ್ ಗುಪ್ತಾ ಮಾತನಾಡಿ, “ಬಜೆಟ್‌ನಲ್ಲಿನ  ಫ್ಯೂಚರ್ಸ್ ಮೇಲೆ ಶೇ. 150 ಮತ್ತು ಆಪ್ಷನ್ಸ್ ಮೇಲೆ ಶೇ. 50 ರಷ್ಟು ಎಸ್‌ಟಿಟಿ ಹೆಚ್ಚಿಸಿರುವುದು ಒಂದು ಸ್ಪಷ್ಟ ಸಂದೇಶವನ್ನು ನೀಡುತ್ತದೆ. ಅತಿಯಾದ ಅಲ್ಪಾವಧಿಯ ವಹಿವಾಟನ್ನು ನಿಯಂತ್ರಿಸಲು ಸರ್ಕಾರ ಬಯಸುತ್ತಿದೆ” ಎಂದು ಹೇಳಿದರು.

“ಹೂಡಿಕೆದಾರರ ವರ್ತನೆಯಲ್ಲಿನ ಬದಲಾವಣೆ ಮುಖ್ಯವಾಗಿದೆ. ಚಿಲ್ಲರೆ ಹೂಡಿಕೆದಾರರ ಭಾಗವಹಿಸುವಿಕೆ ಕಡಿಮೆಯಾಗಿಲ್ಲ. ಹೂಡಿಕೆದಾರರು ಪದೇ ಪದೇ ವಹಿವಾಟು ನಡೆಸುವ ಬದಲು ದೀರ್ಘಕಾಲದ ಹೂಡಿಕೆಯತ್ತ ವಾಲುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಅಲ್ಪಾವಧಿಯ ವಹಿವಾಟಿನ ಆದಾಯಕ್ಕಿಂತ ಸ್ಥಿರವಾದ ಬಂಡವಾಳ ರಚನೆಯನ್ನು ಬೆಂಬಲಿಸುವುದು ಸರ್ಕಾರದ ಸ್ಪಷ್ಟ ನೀತಿಯಾಗಿದೆ” ಎಂದು ಅಭಿಪ್ರಾಯಪಟ್ಟರು.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular