HomeIndiaಬಜೆಟ್ 2026-27: ಹಲ್ವಾ ಸಮಾರಂಭದ ಆಸಕ್ತಿಕರ ಮಾಹಿತಿ

ಬಜೆಟ್ 2026-27: ಹಲ್ವಾ ಸಮಾರಂಭದ ಆಸಕ್ತಿಕರ ಮಾಹಿತಿ

ಕೇಂದ್ರ ಬಜೆಟ್‌ 2026ರ ತಯಾರಿ ಆರಂಭವಾಗಿದೆ. ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರ ಭಾನುವಾರ ಸಂಸತ್ತಿನಲ್ಲಿ 2026-27ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಮಂಡಿಸಲಿದ್ದಾರೆ.

ಕೇಂದ್ರ ಬಜೆಟ್‌ ಪ್ರತಿ ಮುದ್ರಣ ಪ್ರಾರಂಭವಾಗುವುದು ಹಲ್ವಾ ಕಾರ್ಯಕ್ರಮದ ಮೂಲಕ. ಹಲ್ವಾ ಕಾರ್ಯಕ್ರಮ ಮಂಗಳವಾರ ನಡೆದಿದೆ. ಬಜೆಟ್ ತಯಾರಿಯಲ್ಲಿ ತೊಡಗಿರುವ ಸಿಬ್ಬಂದಿ ಹಲ್ವಾ ಕಾರ್ಯಕ್ರಮದ ಬಳಿಕ ಬಜೆಟ್ ಪ್ರತಿ ಮುದ್ರಣವಾಗುವ ತನಕ ಸಮಯ ನೋಡದೇ ಕೆಲಸ ಮಾಡುತ್ತಾರೆ.

ಹಲ್ವಾ ಸಮಾರಂಭ: ನವದೆಹಲಿಯಲ್ಲಿ 2026-27ನೇ ಸಾಲಿನ ಕೇಂದ್ರ ಬಜೆಟ್ ಸಿದ್ಧತೆ ಪ್ರಕ್ರಿಯೆಯ ಅಂತಿಮ ಹಂತ ‘ಹಲ್ವಾ ಸಮಾರಂಭ’ ನಾರ್ತ್ ಬ್ಲಾಕ್‌ನಲ್ಲಿರುವ ಬಜೆಟ್ ಪ್ರೆಸ್‌ನಲ್ಲಿ ನಡೆಯಿತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಅವರ ಸಮ್ಮುಖದಲ್ಲಿ ‘ಹಲ್ವಾ ಸಮಾರಂಭ’ದಲ್ಲಿ ಪಾಲ್ಗೊಂಡಿದ್ದರು.

ಇದು ಕೇಂದ್ರ ಬಜೆಟ್ ತಯಾರಿಕೆಯಲ್ಲಿ ತೊಡಗಿರುವ ಅಧಿಕಾರಿಗಳ ಲಾಕ್-ಇನ್ (ಬಜೆಟ್ ಮಂಡನೆವರೆಗೂ ಹೊರಗೆ ಹೋಗಲು ಅವಕಾಶವಿರದ ಅವಧಿ)ಗೂ ಮುನ್ನ  ‘ಹಲ್ವಾ ಸಮಾರಂಭ’ ನಡೆಯುತ್ತದೆ.

2026-27ನೇ ಸಾಲಿನ ಕೇಂದ್ರ ಬಜೆಟ್ 2026ರ ಫೆಬ್ರವರಿ 1 ರಂದು ಮಂಡನೆಯಾಗಲಿದೆ. ಹಲ್ವಾ ಸಮಾರಂಭದಲ್ಲಿ, ಹಣಕಾಸು ಸಚಿವಾಲಯದಡಿಯ ಎಲ್ಲಾ ಇಲಾಖೆಗಳ ಕಾರ್ಯದರ್ಶಿಗಳು ಮತ್ತು ಬಜೆಟ್ ತಯಾರಿಕೆಯಲ್ಲಿ ನಿರತರಾಗಿರುವ ಇತರ ಹಿರಿಯ ಅಧಿಕಾರಿಗಳ ಜೊತೆಗೆ ಕೇಂದ್ರ ಹಣಕಾಸು ಸಚಿವರಿದ್ದರು.

ಸಮಾರಂಭದ ಭಾಗವಾಗಿ ಹಣಕಾಸು ಸಚಿವರು ಬಜೆಟ್ ಮುದ್ರಣಾಲಯಕ್ಕೆ ಭೇಟಿ ನೀಡಿ ಸಿದ್ಧತೆಗಳ ಪರಾಮರ್ಶೆ ನಡೆಸಿ ಬಜೆಟ್ ತಯಾರಿಕೆಯ ಇಡೀ ತಂಡಕ್ಕೆ ಶುಭ ಹಾರೈಸಿದರು. ವಾರ್ಷಿಕ ಹಣಕಾಸು ತಃಖ್ತೆ (ಸಾಮಾನ್ಯವಾಗಿ ಬಜೆಟ್ ಎಂದು ಕರೆಯಲ್ಪಡುವ ಪಟ್ಟಿ), ಅನುದಾನಗಳ ಬೇಡಿಕೆ (ಡಿಜಿ), ಹಣಕಾಸು ಮಸೂದೆ ಇತ್ಯಾದಿಗಳನ್ನು ಒಳಗೊಂಡಂತೆ ಎಲ್ಲಾ ಕೇಂದ್ರ ಬಜೆಟ್ ದಾಖಲೆಗಳು ಯೂನಿಯನ್ ಬಜೆಟ್ ಮೊಬೈಲ್ ಅಪ್ಲಿಕೇಶನ್ ನಲ್ಲಿ ಲಭ್ಯವಾಗಲಿದೆ.

ಇದರಿಂದಾಗಿ ಸಂಸದರು ಮತ್ತು ಸಾರ್ವಜನಿಕರು ಡಿಜಿಟಲ್ ರೂಪದಲ್ಲಿ ಬಜೆಟ್ ದಾಖಲೆಗಳನ್ನು ಸುಲಭವಾಗಿ ಪಡೆಯಬಹುದಾಗಿದೆ. ಈ ಆ್ಯಪ್ ದ್ವಿಭಾಷೆಯಲ್ಲಿ (ಇಂಗ್ಲಿಷ್ ಮತ್ತು ಹಿಂದಿ), ಆಂಡ್ರಾಯ್ಡ್ ಮತ್ತು ಐಒಎಸ್ ಎರಡೂ ಪ್ಲಾಟ್‌ ಫಾರ್ಮ್‌ ಗಳಲ್ಲಿ ಲಭ್ಯವಿರಲಿದೆ.

ಈ ಅಪ್ಲಿಕೇಶನ್ ಅನ್ನು ಕೇಂದ್ರ ಬಜೆಟ್ ವೆಬ್ ಪೋರ್ಟಲ್ (www.indiabudget.gov.in) ನಿಂದ ಸಹ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಸಂಸತ್ತಿನಲ್ಲಿ 2026ರ ಫೆಬ್ರವರಿ 1 ರಂದು ಕೇಂದ್ರ ಹಣಕಾಸು ಸಚಿವರು ಆಯವ್ಯಯ ಮಂಡಿಸಿದ ನಂತರ ಬಜೆಟ್ ದಾಖಲೆಗಳು ಮೊಬೈಲ್ ಅಪ್ಲಿಕೇಶನ್ ಮತ್ತು ಜಾಲತಾಣದಲ್ಲಿ ಲಭ್ಯವಾಗಲಿದೆ.

ನಿರ್ಮಲಾ ಸೀತಾರಾಮನ್ ಬಜೆಟ್‌ನ ಪೂರ್ಣ ಪ್ರತಿಯನ್ನು ಓದುವುದಿಲ್ಲ. ವಲಯವಾರು ಹಂಚಿಕೆ, ತೆರಿಗೆ ಪ್ರಸ್ತಾಪಗಳನ್ನು ಮಾತ್ರ ಓದುತ್ತಾರೆ. ಆದರೆ ರಾಷ್ಟ್ರಪತಿಗಳು ಸೇರಿದಂತೆ ಸಂಪ್ರದಾಯದಂತೆ ಹಂಚಿಕೆ ಮಾಡಬೇಕಾದ ಪ್ರತಿಗಳಿಗಾಗಿ ಮಾತ್ರ ಬಜೆಟ್ ಪ್ರತಿಯನ್ನು ಮುದ್ರಣ ಮಾಡಲಾಗುತ್ತದೆ.

ಕೇಂದ್ರ ಬಜೆಟ್ ಅಧಿವೇಶನ ಬುಧವಾರ ರಾಷ್ಟ್ರಪತಿಗಳು ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡುವ ಮೂಲಕ ಆರಂಭವಾಗಿದೆ. 65 ದಿನಗಳ ಕಾಲ ಎರಡು ಹಂತದಲ್ಲಿ ಬಜೆಟ್ ಅಧಿವೇಶನ ನಡೆಯಲಿದೆ.

2026ರಲ್ಲಿ 5 ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಯುವ ಕಾರಣಕ್ಕೆ ಕೇಂದ್ರ ಬಜೆಟ್ ಮೇಲೆ ಅಪಾರವಾದ ನಿರೀಕ್ಷೆ ಇದೆ. ಹಲವು ಘೋಷಣೆಗಳನ್ನು ನಿರೀಕ್ಷೆ ಮಾಡಲಾಗಿದೆ. ಆದಾಯ ತೆರಿಗೆ ಮತ್ತು ವಾಣಿಜ್ಯ ತೆರಿಗೆಯಲ್ಲಿ ಕೇಂದ್ರ ಸರ್ಕಾರ ಯಾವ ಬದಲಾವಣೆ ಮಾಡಲಿದೆ? ಎಂದು ಜನರು ಕಾಯುತ್ತಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular