HomeLatest Newsನಿರುದ್ಯೋಗಿ ಯುವಕರೇ ಗಮನಿಸಿ : ವಿವಿಧ ವೃತ್ತಿಗಳ ತರಬೇತಿಗಾಗಿ ಅರ್ಜಿ ಆಹ್ವಾನ

ನಿರುದ್ಯೋಗಿ ಯುವಕರೇ ಗಮನಿಸಿ : ವಿವಿಧ ವೃತ್ತಿಗಳ ತರಬೇತಿಗಾಗಿ ಅರ್ಜಿ ಆಹ್ವಾನ

ಧಾರವಾಡ : ನರಗುಂದ ಪಟ್ಟಣದ ಅಳಗವಾಡಿ ರಸ್ತೆಯಲ್ಲಿರುವ ಜಿಟಿಟಿಸಿ ಕೇಂದ್ರವು ಟೂಲರೂಮ್ ಮಶಿನಿಸ್ಟ್, ವೆಹಿಕಲ್ ಅಸೆಂಬ್ಲಿ ಫಿಟ್ಟರ್ ಮತ್ತು ಅಟೊಮೊಬೈಲ್ ವೆಲ್ಡರ್ ವೃತ್ತಿ ತರಬೇತಿಗಳಿಗೆ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಉತ್ತೀರ್ಣ, ಅನುತ್ತೀರ್ಣ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಸಂಸ್ಥೆಯಲ್ಲಿ ಒಂದು ವರ್ಷ ಅವಧಿಯ ಟೂಲರೂಮ್ ಮಶಿನಿಸ್ಟ್ ತರಬೇತಿಯಲ್ಲಿ ಟರ್ನರ್, ಮಿಲ್ಲರ್, ಗ್ರೈಂಡರ್, ಸಿ.ಎನ್.ಸಿ ಪ್ರಾಯೋಗಿಕ ತರಬೇತಿಯನ್ನು ನೀಡಲಾಗುವುದು. ವೆಹಿಕಲ್ ಅಸೆಂಬ್ಲಿ ಫಿಟ್ಟರ್ ಮತ್ತು ಅಟೊಮೊಬೈಲ್ ವೆಲ್ಡರ್ ವೃತ್ತಿಪರ ತರಬೇತಿಯಲ್ಲಿ ಫಿಟ್ಟರ್, ಕಾರು ಬಿಡಿ ಭಾಗಗಳ ಜೋಡಣೆ ಮತ್ತು ವೆಲ್ಡಿಂಗ್ ಪ್ರಾಯೋಗಿಕ ತರಬೇತಿಯನ್ನು ನೀಡಲಾಗುವುದು. ಹಾಗೂ ಅಟೊಕ್ಯಾಡ್, ಕನ್ನಡ ಮತ್ತು ಇಂಗ್ಲಿಷ್ ಭಾಷಾ ಕೌಶಲ್ಯಗಳನ್ನು ಹಾಗೂ ಉದ್ಯೋಗ ಕೌಶಲ್ಯಗಳನ್ನು ಕಲಿಸಲಾಗುತ್ತದೆ.

ಆಸಕ್ತ ವಿದ್ಯಾರ್ಥಿಗಳು ಜಿಟಿಟಿಸಿ ಕೇಂದ್ರಕ್ಕೆ ಭೇಟಿ ನೀಡಿ ಮೇ 26. 2026 ರೊಳಗಾಗಿ ಅರ್ಜಿ ಸಲ್ಲಿಸಬಹುದು. ತರಬೇತಿಗಳು ಜೂನ್ 01 ರಿಂದ ಪ್ರಾರಂಭವಾಗುತ್ತವೆ.ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆಗೆ 8088536896 ಸಂಪರ್ಕಿಸಬಹುದು ಎಂದು ನರಗುಂದ ಜಿಟಿಟಿಸಿ ಕೇಂದ್ರದ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular