ನೂರು ವರ್ಷಗಳ ಹಿಂದಿನ ಡೈರಿ ಮಿಲ್ಕ್‌ ಕವರ್‌ ಪತ್ತೆ

ಇಂಗ್ಲೆಂಡ್‌ನ ಡೆವೊನ್‌ನಲ್ಲಿರುವ ಮಹಿಳೆಯೊಬ್ಬರು ತಮ್ಮ ಮನೆಯನ್ನು ನವೀಕರಿಸುವಾಗ 100 ವರ್ಷ ಹಳೆಯ ಡೈರಿ ಮಿಲ್ಕ್ ಕವರ್‌ ಕಂಡು ಆಶ್ಚರ್ಯಗೊಂಡಿದ್ದಾರೆ. 51 ವರ್ಷದ ಎಮ್ಮಾ ಯಂಗ್ ತಮ್ಮ ಬಾತ್‌ರೂಮ್‌ನಲ್ಲಿ ನೆಲದ ಹಲಗೆಗಳನ್ನು ತೆಗೆಯುವಾಗ ಇದನ್ನು ಕಂಡಿದ್ದಾಳೆ.

ಅವಳು ಧೂಳನ್ನು ಬ್ರಷ್ ಮಾಡಿದಾಗ, ಕ್ಯಾಡ್ಬರಿಯ ವಿಶಿಷ್ಟವಾದ ನೇರಳೆ ಪ್ಯಾಕೇಟ್‌ ಕಂಡಿದೆ. ಆಯತಾಕಾರದ ರಟ್ಟನ್ನು ತೆಗೆದು ನೋಡಿದಾಗ ಅದರೊಳಗೆ ಚಾಕಲೇಟ್ ಇರಲಿಲ್ಲ. ಅದರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಕುತೂಹಲದಿಂದ, ಈಕೆ ಮಿಠಾಯಿ ಕಂಪೆನಿಯನ್ನು ಸಂಪರ್ಕಿಸಿದಾಗ ಇದು 1930-1934 ರ ನಡುವೆ ಉತ್ಪಾದಿಸಲ್ಪಟ್ಟಿದೆ ಎಂದು ತಿಳಿದುಬಂದಿದೆ.

ನನಗೆ ಈ ವಿಷಯ ತುಂಬಾ ಅಚ್ಚರಿಯಾಯಿತು. ನನ್ನನ್ನು ತುಂಬಾ ದಿಗ್ಭ್ರಮೆಗೊಳಿಸಿದ ವಿಷಯವಿದು. ಇದು ಸುಮಾರು 100 ವರ್ಷಗಳಷ್ಟು ಹಳೆಯದು ಎಂದರೆ ಯಾರೂ ನಂಬುವುದಿಲ್ಲ.ಇದರ ಒಂದು ಬದಿ ಇಲಿಗಳಿಂದ ತಿನ್ನಲ್ಪಟ್ಟಿದ್ದರೆ ಇನ್ನೊಂದು ಬದಿ ಇನ್ನೂ ಚೆನ್ನಾಗಿದೆ ಎಂದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read