ಬೆಂಗಳೂರು: ಹಿಂದೂ ಸಂಪ್ರದಾಯದ ಪ್ರಕಾರ ಹೊಸ ವರ್ಷದ ಹರಿಕಾರ ಎಂದೇ ಕರೆಯಲ್ಪಡುವ ಯುಗಾದಿ ಕೇವಲ ಒಂದು ಹಬ್ಬವಲ್ಲ, ಅದು ಬದುಕಿನ ಹೊಸ ಪಯಣದ ಆರಂಭ. ಭಾರತದಾದ್ಯಂತ ಈ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ವಿಶೇಷವೆಂದರೆ, ಪ್ರಾಂತ್ಯಕ್ಕೆ ತಕ್ಕಂತೆ ಇದರ ಹೆಸರು ಮತ್ತು ಆಚರಣೆಯ ದಿನಗಳು ಬದಲಾದರೂ, ಹಬ್ಬದ ಆಶಯ ಮತ್ತು ಅರ್ಥ ಮಾತ್ರ ಒಂದೇ ಆಗಿರುತ್ತದೆ.
ಪರಾಭವ ನಾಮ ಸಂವತ್ಸರ ಅರ್ಥ:
ಪರಾಭವ ಎಂದರೆ ಸೋಲು ಅಥವಾ ಅಹಂಕಾರದ ಪತನ. ಇದು ನಮಗೆ ವಿನಯ ಮತ್ತು ಆತ್ಮಾವಲೋಕನದ ಹಾದಿಯನ್ನು ತೋರಿಸುತ್ತದೆ. ಈ ವರ್ಷವು ಶ್ರೀಮಹಾವಿಷ್ಣುವಿಗೆ ಸಮರ್ಪಿತವಾಗಿದ್ದು ಧರ್ಮ ಮತ್ತು ವಿವೇಕದ ಮೂಲಕ ಪ್ರಗತಿ ಸಾಧಿಸಲು ಪ್ರೇರೇಪಿಸುತ್ತದೆ.ಅಹಂಕಾರವನ್ನು ತೊರೆದು ಜ್ಞಾನದ ಹಾದಿಯಲ್ಲಿ ನಡೆಯಲು ಇದು ಅತ್ಯಂತ ಸೂಕ್ತ ಸಮಯ.ಈ ವರ್ಷ ಆರ್ಥಿಕ ಬದಲಾವಣೆಗಳು ಮತ್ತು ಹವಾಮಾನ ವೈಪರೀತ್ಯದಂತಹ ಮಿಶ್ರಫಲಗಳನ್ನು ನೀಡುವ ಸಾಧ್ಯತೆ ಇದೆ.ಸವಾಲುಗಳ ನಡುವೆಯೂ ವಿನಯದಿಂದ ಮುನ್ನಡೆದರೆ ಯಶಸ್ಸು ಖಚಿತ
ಸೃಷ್ಟಿ ಮತ್ತು ವಿಜ್ಞಾನದ ಸಮ್ಮಿಲನ:
ಹಿಂದೂ ಪುರಾಣಗಳ ಪ್ರಕಾರ, ಬ್ರಹ್ಮದೇವನು ಈ ಸೃಷ್ಟಿಯ ಕಾರ್ಯವನ್ನು ಆರಂಭಿಸಿದ್ದು ಇದೇ ಶುಭ ದಿನದಂದು. ಇದೇ ಕಾರಣಕ್ಕೆ ಯುಗಾದಿಯ ಸಮಯದಲ್ಲಿ ಪ್ರಕೃತಿಯಲ್ಲೂ ಮರುಜನ್ಮದ ಕಳೆ ಕಂಡುಬರುತ್ತದೆ. ಮರಗಿಡಗಳು ಹಳೆ ಎಲೆಗಳನ್ನು ಉದುರಿಸಿ ಹೊಸ ಚಿಗುರು ಪಡೆಯುತ್ತವೆ, ಹೂವುಗಳು ಅರಳುತ್ತವೆ. ಇದು ಬರಿ ಬದಲಾವಣೆಯಲ್ಲ, ವಸಂತ ಋತುವಿನ ಆಗಮನದ ಸಂಕೇತ. ಯಾವುದೇ ಹೊಸ ಕಾರ್ಯವನ್ನು ಆರಂಭಿಸಲು, ಉದ್ಯೋಗ ಅಥವಾ ಉದ್ಯಮ ಶುರು ಮಾಡಲು ಯುಗಾದಿಯೇ ಅತ್ಯಂತ ಸೂಕ್ತ ಕಾಲ ಎಂಬುದು ಶತಶತಮಾನಗಳ ಅಚಲ ನಂಬಿಕೆ.
ದಕ್ಷಿಣ ಭಾರತದಾದ್ಯಂತ ಹೊಸ ವರ್ಷದ ಸಂಭ್ರಮ ಈ ಪರಾಭವ ನಾಮ ಸಂವತ್ಸರವು ನಿಮ್ಮ ಜೀವನದಲ್ಲಿ ಹಸಿರು ಮತ್ತು ಹರುಷ ತುಂಬಲಿ.
ನಿಮ್ಮ ಸ್ನೇಹಿತರು, ಕುಟುಂಬ ಮತ್ತು ಆಪ್ತರಿಗೆ ಕಳುಹಿಸಲು ಇಲ್ಲಿವೆ ಕೆಲವು ಆಯ್ದ ಮತ್ತು ಆಕರ್ಷಕ ಶುಭಾಶಯ ಸಂದೇಶಗಳು:
ಎಲ್ಲರಿಗೂ ಆಯುಷ್ಯ, ಆರೋಗ್ಯ ಮತ್ತು ಅಷ್ಟೈಶ್ವರ್ಯ ಲಭಿಸಲಿ, ಮನೆಯಲ್ಲಿ ಸಮೃದ್ಧಿ ತುಂಬಲಿ. ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು
ಈ ವರ್ಷವಿಡೀ ನಿಮ್ಮ ಜೀವನದಲ್ಲಿ ನಗು, ಖುಷಿ ಮತ್ತು ಸಮೃದ್ಧಿ ತುಂಬಿರಲಿ. ಪರಸ್ಪರ ಪ್ರೀತಿ ಹೆಚ್ಚಲಿ. ಯುಗಾದಿ ಶುಭಾಶಯಗಳು
ಈ ವರ್ಷ ಯಶಸ್ಸು ಮತ್ತು ಅದೃಷ್ಟ ಸದಾ ನಿಮ್ಮೊಂದಿಗಿರಲಿ. ಪರಾಭವ ನಾಮ ಸಂವತ್ಸರವು ನಿಮಗೆ ಆಶೀರ್ವಾದ ನೀಡಲಿ. ಯುಗಾದಿ ಹಬ್ಬದ ಶುಭಾಶಯಗಳು
ಯುಗಾದಿಯಂದು ಕಟ್ಟುವ ಮಾವಿನ ತೋರಣವು ನಿಮ್ಮಲ್ಲಿನ ಎಲ್ಲ ನೆಗೆಟಿವ್ ಎನರ್ಜಿಯನ್ನೂ ಹೊಡೆದೋಡಿಸಲಿ. ಸಂಸ್ಕೃತಿಯನ್ನ ಸಂಭ್ರಮಿಸೋಣ, ನಮ್ಮ ಪರಂಪರೆಯನ್ನ ಗೌರವಿಸೋಣ
2026ನೇ ವರ್ಷದಲ್ಲಿ ನಿಮ್ಮ ಜೀವನದಲ್ಲಿ ಶೇ.90ರಷ್ಟು ಸಿಹಿಯೇ ತುಂಬಿರಲಿ, ಇನ್ನು ಕೇವಲ 10 ಪರ್ಸಂಟ್ ಅಷ್ಟು ಮಾತ್ರ ಕಹಿ ಇರಲಿ. Happy Ugadi
ಹೊಸ ಆರಂಭ, ಹೊಸ ಅಧ್ಯಾಯ. ಈ ವರ್ಷ ನಿಮ್ಮ ಎಲ್ಲಾ ಕನಸುಗಳು ನನಸಾಗಲಿ
ಸಂಸ್ಕೃತಿಯನ್ನ ಸಂಭ್ರಮಿಸೋಣ, ಪರಂಪರೆಯನ್ನ ಗೌರವಿಸೋಣ.. ತನ್ಮೂಲಕ 2026ನ್ನ ಸ್ವಾಗತಿಸೋಣ
ಜೀವನ ಎನ್ನುವುದು ಸುಂದರ ಅನುಭವಗಳ ಮಿಶ್ರಣ. ಪ್ರತಿ ಕ್ಷಣದ ಸವಿಯನ್ನೂ ಸವಿಯೋಣ.
ಈ ಯುಗಾದಿ ಹಬ್ಬವು ನಿಮಗೆ ನಿಮ್ಮ ಗುರಿಯನ್ನ ತಲುಪುವ ಶಕ್ತಿ, ತಾಳ್ಮೆ ಮತ್ತು ಸವಾಲುಗಳನ್ನು ಎದುರಿಸುವ ಧೈರ್ಯ ಕೊಡಲಿ. ಹ್ಯಾಪಿ ಯುಗಾದಿ
2026ರ ಈ ಯುಗಾದಿ ಹಬ್ಬದ ಶುಭ ದಿನದಂದು, ಬೇವು-ಬೆಲ್ಲ ತಿಂದು ಕಹಿ-ಸಿಹಿಯನ್ನು ಸಮಾನವಾಗಿ ಸ್ವೀಕರಿಸೋಣ. ಪ್ರೀತಿಪಾತ್ರರ ಜೊತೆ ಒಳ್ಳೆಯ ಮಾತನಾಡಿ, ಸಂತೋಷವನ್ನು ಹಂಚಿಕೊಳ್ಳೋಣ.

