HomeIndiaಮುಂದಿನ ತಿಂಗಳ ಈ ದಿನದಂದು ಬ್ಯಾಂಕ್ ಬಂದ್: 4 ದಿನಗಳ ಕಾಲ ಸೇವೆಯಲ್ಲಿ ವ್ಯತ್ಯಯ

ಮುಂದಿನ ತಿಂಗಳ ಈ ದಿನದಂದು ಬ್ಯಾಂಕ್ ಬಂದ್: 4 ದಿನಗಳ ಕಾಲ ಸೇವೆಯಲ್ಲಿ ವ್ಯತ್ಯಯ

ನವದೆಹಲಿ- ಪಿಂಚಣಿ ಪರಿಷ್ಕರಣೆ, 5 ದಿನಗಳ ಬ್ಯಾಂಕಿಂಗ್ ನೀತಿ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಸಂಘಟನೆಯು ಸೆಪ್ಟೆಂಬರ್ 11 ರಂದು ದೇಶಾದ್ಯಂತ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿದೆ.

ದೇಶದ ಪ್ರಮುಖ 9 ಬ್ಯಾಂಕ್ ನೌಕರರು ಮತ್ತು ಅಧಿಕಾರಿಗಳ ಸಂಘಗಳ ಒಕ್ಕೂಟವಾಗಿರುವ ಯುಎಫ್‌ಬಿ ಯು (UFBU) ಸರ್ಕಾರದ ನಕಾರಾತ್ಮಕ ಧೋರಣೆಯನ್ನು ಖಂಡಿಸಿ ಈ ಮಹತ್ವದ ನಿರ್ಧಾರ ಕೈಗೊಂಡಿದೆ.

ಪ್ರಮುಖ ಬೇಡಿಕೆಗಳು ಯಾವುವು?

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರಮುಖ ಬೇಡಿಕೆಗಳೇನು?

5 ದಿನಗಳ ಬ್ಯಾಂಕಿಂಗ್ ನೀತಿ: ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರ ಕೆಲಸದ ಅವಧಿ ನಿಗದಿಪಡಿಸುವುದು (ದೈನಂದಿನ ಕೆಲಸದ ಅವಧಿಯನ್ನು 40 ನಿಮಿಷ ಹೆಚ್ಚಿಸುವ ಪ್ರಸ್ತಾವನೆ). ಭಾರತೀಯ ಬ್ಯಾಂಕುಗಳ ಸಂಘ (IBA) 2024 ರ ಮಾರ್ಚ್ 8 ರಂದೇ ಒಪ್ಪಂದಕ್ಕೆ ಸಹಿ ಹಾಕಿದ್ದರೂ, ಸರ್ಕಾರಿ ಹಂತದಲ್ಲಿ ಅನುಮೋದನೆ ವಿಳಂಬವಾಗಿರುವುದು.

ಬ್ಯಾಂಕ್ ನೌಕರರ ಪಿಂಚಣಿ ಪರಿಷ್ಕರಣೆ ಹಾಗೂ ಇತರ ಬಾಕಿ ಇರುವ ಸೌಲಭ್ಯಗಳ ಅನುಷ್ಠಾನ.ನೌಕರರ ಕಾರ್ಯಕ್ಷಮತೆಗೆ ಸಂಬಂಧಿಸಿದ ಪ್ರೋತ್ಸಾಹಕ ನೀತಿಯಲ್ಲಿನ ಭಿನ್ನಾಭಿಪ್ರಾಯಗಳ ನಿವಾರಣೆ.

ಸತತ 4 ದಿನಗಳ ಕಾಲ ಬ್ಯಾಂಕಿಂಗ್ ಸೇವೆ ಬಂದ್!

ಸತತ 4 ದಿನ ಬ್ಯಾಂಕ್ ಸ್ಥಗಿತ

ಸೆಪ್ಟೆಂಬರ್ 11 ರಂದು (ಶುಕ್ರವಾರ) ಮುಷ್ಕರ ನಡೆದರೆ, ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಕಾರ್ಯನಿರ್ವಹಣೆಗೆ ತೀವ್ರ ಹೊಡೆತ ಬೀಳಲಿದೆ. ಇದರೊಂದಿಗೆ ಸಾಲು ಸಾಲು ರಜೆಗಳು ಬಂದಿರುವುದರಿಂದ ಗ್ರಾಹಕರು ತೊಂದರೆ ಅನುಭವಿಸಬೇಕಾಗುತ್ತದೆ:

ಸೆಪ್ಟೆಂಬರ್ 11 (ಶುಕ್ರವಾರ): ಬ್ಯಾಂಕ್ ನೌಕರರ ಮುಷ್ಕರ

ಸೆಪ್ಟೆಂಬರ್ 12 (ಶುಕ್ರವಾರ / ಎರಡನೇ ಶನಿವಾರ): ಬ್ಯಾಂಕ್ ರಜೆ

ಸೆಪ್ಟೆಂಬರ್ 13 (ಭಾನುವಾರ): ಸಾಪ್ತಾಹಿಕ ರಜೆ

ಸೆಪ್ಟೆಂಬರ್ 14 (ಸೋಮವಾರ): ಗಣೇಶ ಚತುರ್ಥಿ (ಕೆಲವು ರಾಜ್ಯಗಳಲ್ಲಿ ಬ್ಯಾಂಕ್‌ಗಳಿಗೆ ರಜೆ)

ಹೀಗಾಗಿ, ದೇಶದ ಹಲವು ಭಾಗಗಳಲ್ಲಿ ಸತತ ನಾಲ್ಕು ದಿನಗಳವರೆಗೆ (ಸೆಪ್ಟೆಂಬರ್ 11 ರಿಂದ 14 ರವರೆಗೆ) ಹಣಕಾಸು ವಹಿವಾಟುಗಳು, ಚೆಕ್ ಕ್ಲಿಯರೆನ್ಸ್ ಹಾಗೂ ಶಾಖೆಗಳ ಸೇವೆಗಳಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ.

ಮುಂದಿನ ಹೋರಾಟದ ಎಚ್ಚರಿಕೆ

ಸರ್ಕಾರ ಮತ್ತು ಬ್ಯಾಂಕ್ ಆಡಳಿತ ಮಂಡಳಿಗಳು ತಮ್ಮ ಬೇಡಿಕೆಗಳಿಗೆ ದಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಎಫ್‌ಬಿ ಯು ಎಚ್ಚರಿಸಿದೆ.

ಸೆಪ್ಟೆಂಬರ್ 28 ರಿಂದ ಮೂರು ದಿನಗಳ ಕಾಲ ಸತತ ರಾಷ್ಟ್ರವ್ಯಾಪಿ ಷ್ಕರ,ಅಕ್ಟೋಬರ್ 26 ರಿಂದ ಬೇಡಿಕೆಗಳು ಈಡೇರದೇ ಇದ್ದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಸಂಘಟನೆ ನಿರ್ಧರಿಸಿದೆ.

ಗ್ರಾಹಕರಿಗೆ ಸಲಹೆ

ಬ್ಯಾಂಕ್ ಗ್ರಾಹಕರು ಮುಷ್ಕರ ಹಾಗೂ ಸಾಲು ಸಾಲು ರಜೆಗಳನ್ನು ಗಮನದಲ್ಲಿಟ್ಟುಕೊಂಡು ತಮ್ಮ ತುರ್ತು ಹಣಕಾಸು ವಹಿವಾಟುಗಳನ್ನು ಮುಂಚಿತವಾಗಿ ಪ್ಲ್ಯಾನ್ ಮಾಡಿಕೊಳ್ಳುವುದು ಸೂಕ್ತವಾಗಿದೆ. ಎಟಿಎಂ (ATM) ಸೇವೆಗಳು ಮತ್ತು ಯುಪಿಐ (UPI) / ಆನ್‌ಲೈನ್ ಬ್ಯಾಂಕಿಂಗ್ ಎಂದಿನಂತೆ ಕಾರ್ಯನಿರ್ವಹಿಸಲಿವೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular