ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ. ಜೂನಿಯರ್ ಎಂಜಿನಿಯರ್, CHSL, ದೆಹಲಿ ಪೊಲೀಸ್ ಹಾಗೂ CAPF ಎಸ್‌ಐ ಸೇರಿದಂತೆ ವಿವಿಧ ಹುದ್ದೆಗಳಿಗೆ ಒಟ್ಟು 6,155 ಖಾಲಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಗಳನ್ನು ಬಿಡುಗಡೆ ಮಾಡಲಾಗಿದೆ. ಇಂಟರ್‌ಮೀಡಿಯೇಟ್, ಡಿಪ್ಲೊಮಾ ಹಾಗೂ ಪದವಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರಿ ಉದ್ಯೋಗ ಪಡೆಯಲು ಇದು ಉತ್ತಮ ಅವಕಾಶವಾಗಿದೆ.
ಇಂಟರ್‌ಮೀಡಿಯೇಟ್, ಡಿಪ್ಲೊಮಾ ಹಾಗೂ ಪದವಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರಿ ಇಲಾಖೆಯಲ್ಲಿ ಉದ್ಯೋಗ ಪಡೆಯಲು ಇದು ಉತ್ತಮ ಅವಕಾಶವಾಗಿದೆ. ಜೂನಿಯರ್ ಎಂಜಿನಿಯರ್, ಕಂಬೈನ್ಡ್ ಹೈಯರ್ ಸೆಕೆಂಡರಿ ಲೆವೆಲ್ (CHSL), ದೆಹಲಿ ಪೊಲೀಸ್, CAPF ಎಸ್‌ಐ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಒಟ್ಟು 6,155 ಹುದ್ದೆಗಳ ಭರ್ತಿಗೆ ಅಧಿಸೂಚನೆಗಳನ್ನು ಬಿಡುಗಡೆ ಮಾಡಲಾಗಿದೆ.
ಜೂನಿಯರ್ ಎಂಜಿನಿಯರ್ ಹುದ್ದೆಗಳು
SSC ಜೂನಿಯರ್ ಎಂಜಿನಿಯರ್ (JE) ಪರೀಕ್ಷೆ-2026ರ ಅಧಿಸೂಚನೆಯ ಮೂಲಕ 1,748 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಎಂಜಿನಿಯರಿಂಗ್ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
CHSL ಮೂಲಕ 2,536 ಹುದ್ದೆಗಳು
ಕಂಬೈನ್ಡ್ ಹೈಯರ್ ಸೆಕೆಂಡರಿ ಲೆವೆಲ್ ಎಕ್ಸಾಮಿನೇಷನ್ (CHSL) 2026ರ ಮೂಲಕ 2,536 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಇದರಲ್ಲಿ ಲೋವರ್ ಡಿವಿಷನ್ ಕ್ಲರ್ಕ್ (LDC), ಜೂನಿಯರ್ ಸೆಕ್ರೆಟರಿಯೇಟ್ ಅಸಿಸ್ಟೆಂಟ್ (JSA), ಡೇಟಾ ಎಂಟ್ರಿ ಆಪರೇಟರ್ (DEO) ಸೇರಿದಂತೆ ವಿವಿಧ ಹುದ್ದೆಗಳು ಸೇರಿವೆ. ಇಂಟರ್‌ಮೀಡಿಯೇಟ್ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಈ ಅಧಿಸೂಚನೆ ಪ್ರಮುಖ ಅವಕಾಶವಾಗಿದೆ.
ದೆಹಲಿ ಪೊಲೀಸ್, CAPFನಲ್ಲಿ 1,871 ಎಸ್‌ಐ ಹುದ್ದೆಗಳು
ದೆಹಲಿ ಪೊಲೀಸ್ ಹಾಗೂ ಸೆಂಟ್ರಲ್ ಆರ್ಮ್ಡ್ ಪೊಲೀಸ್ ಫೋರ್ಸಸ್ (CAPF)ನಲ್ಲಿ ಸಬ್-ಇನ್ಸ್‌ಪೆಕ್ಟರ್ (SI) ಹುದ್ದೆಗಳ ಭರ್ತಿಗೂ SSC ಅಧಿಸೂಚನೆ ಹೊರಡಿಸಿದೆ. ಈ ನೇಮಕಾತಿ ಮೂಲಕ 1,871 ಎಸ್‌ಐ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಪದವಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಹೀಗೆ ಒಂದೇ ಸಮಯದಲ್ಲಿ ವಿವಿಧ ವಿಭಾಗಗಳಲ್ಲಿ ಸಾವಿರಾರು ಉದ್ಯೋಗ ಹುದ್ದೆಗಳು ಲಭ್ಯವಾಗಿರುವುದರಿಂದ ಕೇಂದ್ರ ಸರ್ಕಾರಿ ಉದ್ಯೋಗಕ್ಕಾಗಿ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶ ದೊರೆತಿದೆ. ಹುದ್ದೆಗೆ ಅನುಗುಣವಾಗಿ ವಿದ್ಯಾರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ ಸೇರಿದಂತೆ ನಿಯಮಗಳು ಬದಲಾಗುತ್ತವೆ.
ಅಭ್ಯರ್ಥಿಗಳು ಸಂಬಂಧಿತ SSC ಅಧಿಸೂಚನೆಯನ್ನು ಸಂಪೂರ್ಣವಾಗಿ ಪರಿಶೀಲಿಸಿ, ತಾವು ಅಗತ್ಯ ಅರ್ಹತೆಗಳನ್ನು ಹೊಂದಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಂಡ ಬಳಿಕ ಅರ್ಜಿ ಸಲ್ಲಿಸುವುದು ಸೂಕ್ತ.
ಅಂಗನವಾಡಿ ಕಂ ಕ್ರಷ್ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ
ಧಾರವಾಡ ಜಿಲ್ಲೆಯಲ್ಲಿ ಒಟ್ಟು 42 ಅಂಗನವಾಡಿ ಕಂ ಕ್ರಷ್ ಕೇಂದ್ರಗಳನ್ನು ಮಂಜೂರು ಮಾಡಿ 06 ಶಿಶು ಅಭಿವೃದ್ಧಿ ಯೋಜನೆಗಳ ವ್ಯಾಪ್ತಿಯಲ್ಲಿ ಪ್ರಾರಂಭಿಸಲು ಅನುಮೋದಿಸಿದ್ದು, ತಾಲೂಕಾವಾರು ಅನುಮೊದಿಸಲ್ಪಟ್ಟ 42 ಅಂಗನವಾಡಿ ಕಂ ಕ್ರಷ್ ಕೇಂದ್ರಗಳಲ್ಲಿ ಅಂಗನವಾಡಿ ಕಮ್ ಕ್ರಷ್ ಕಾರ್ಯಕರ್ತೆಯರ 2 ಹುದ್ದೆಗಳಿಗೆ ಮತ್ತು ಅಂಗನವಾಡಿ ಕಂ ಕ್ರಷ್ ಸಹಾಯಕಿಯರ 15 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಇಲ್ಲದ ಕಾರಣ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಮರು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
02 ಅಂಗನವಾಡಿ ಕಂ ಕ್ರಷ್ ಕಾರ್ಯಕರ್ತೆಯರ ಹುದ್ದೆಗಳ ವಿವರ: ಹುಬ್ಬಳ್ಳಿ-ಧಾರವಾಡ ಶಹರ ಯೋಜನೆಯ-ಬ್ಯಾಹಟ್ಟಿ ಪ್ಲಾಟ್ -1 ಕೇಂದ್ರ, ಕುಂದಗೋಳ ಯೋಜನೆಯ-ಕುಂದಗೋಳ 19 ಕೇಂದ್ರ,
15 ಅಂಗನವಾಡಿ ಕಮ್ ಕ್ರಷ್ ಸಹಾಯಕಿಯರ ಹುದ್ದೆಗಳ ವಿವರ: ಧಾರವಾಡ ಗ್ರಾಮೀಣ ಯೋಜನೆಯ- ನರೇಂದ್ರ-11 (ಕಾಯಕನಗರ) ಕೇಂದ್ರ, ಹುಬ್ಬಳ್ಳಿ (ಗ್ರಾ) ಯೋಜನೆಯ-ಇಂಗಳಹಳ್ಳಿ-1 ಕೇಂದ್ರ, ಮಂಟೂರ-3 ಕೇಂದ್ರ, ಕರಡಿಕೊಪ್ಟ-1 ಕೇಂದ್ರ, ಹುಬ್ಬಳ್ಳಿ-ಧಾರವಾಡ ಶಹರ ಯೋಜನೆಯ- ಸುತಗಟ್ಟಿ-2 ಕೇಂದ್ರ, ತಾರಿಹಾಳ-3 ಕೇಂದ್ರ, ಬ್ಯಾಹಟ್ಟಿ ಪ್ಲಾಟ್-1 ಕೇಂದ್ರ, ಈಶ್ವರ ನಗರ-1 ಕೇಂದ್ರ, ಕಲಘಟಗಿ ಯೋಜನೆಯ- ಉಗ್ಗಿನಕೇರಿ-3 ಕೇಂದ್ರ, ಕುಂದಗೋಳ ಯೋಜನೆಯ- ಕಳಸ-8 ಕೇಂದ್ರ, ಹಿರೇನರ್ತಿ-2 ಕೇಂದ್ರ, ಕಮಡೊಳ್ಳಿ-9 ಕೇಂದ್ರ, ಸಂಶಿ-5 ಕೇಂದ್ರ, ನವಲಗುಂದ ಯೋಜನೆಯ- ಅಣ್ಣಿಗೇರಿ-27 ಕೇಂದ್ರ, ಅಣ್ಣಿಗೇರಿ-31 ಕೇಂದ್ರ.
ಆಸಕ್ತರು ಸಂಬಂಧ ಪಟ್ಟ ಶಿಶು ಅಭಿವೃದ್ಧಿ ಕಛೇರಿಯಲ್ಲಿ ಅರ್ಜಿಗಳನ್ನು ಪಡೆದು, ಭರ್ತಿ ಮಾಡಿದ ಅರ್ಜಿಗಳನ್ನು ಸೆಪ್ಟೆಂಬರ್ 30, 2026 ರೊಳಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಉಪ ನಿರ್ದೇಶಕರ ಕಛೇರಿಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳಿಗೆ ಸಂಪರ್ಕಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

