HomeKarnatakaBIG NEWS: ಬಿಕಾಂ ಪದವೀಧರ ಆಯುರ್ವೇದಿಕ್ ಡಾಕ್ಟರ್; ಅಧಿಕಾರಿಗಳ ದಾಳಿ ವೇಳೆ ವೈದ್ಯನ ಅಸಲಿ ಮುಖ...

BIG NEWS: ಬಿಕಾಂ ಪದವೀಧರ ಆಯುರ್ವೇದಿಕ್ ಡಾಕ್ಟರ್; ಅಧಿಕಾರಿಗಳ ದಾಳಿ ವೇಳೆ ವೈದ್ಯನ ಅಸಲಿ ಮುಖ ಬಯಲು

ಉಡುಪಿ: ಭ್ರೂಣಹತ್ಯೆ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಎಚ್ಚೆತ್ತ ಆರೋಗ್ಯ ಇಲಾಖೆ ಅಧಿಕಾರಿಗಳು ರಾಜ್ಯದ ವಿವಿಧ ಜಿಲ್ಲೆಗಳ ಆಸ್ಪತ್ರೆ, ಕ್ಲಿನಿಕ್, ಲ್ಯಾಬ್ ಗಳ ಮೇಲೆ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ನಕಲಿ ವೈದ್ಯರು ಸಿಕ್ಕಿ ಬಿದ್ದಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ 7 ಕಡೆಗಳಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ ಬಿಕಾಂ ಪದವೀಧರನೇ ಆಯುರ್ವೇದಿಕ್, ಆಲೋಪತಿ ವೈದ್ಯನಾಗಿ ಕಾರ್ಯನಿರ್ವಹಿಸುತ್ತಿದ್ದುದು ಬಯಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕುಂಜಾಲು ಎಂಬಲ್ಲಿ ಆಯುರ್ವೇದಿಕ್ ಕ್ಲಿನಿಕ್ ಮೇಲೆ ದಾಳಿ ನಡೆಸಿದ ವೇಳೆ ವೈದ್ಯನ ಅಸಲಿ ಮಖ ಬಯಲಾಗಿದೆ. ಬಿಕಾಂ ಪದವೀಧರನಾಗಿರುವ ಸಂದೇಶ್ ರಾವ್ ತಾನು ಆಯುರ್ವೇದಿಕ್ ವೈದ್ಯ ಎಂದು ಆಯುರ್ವೇದಿಕ್ ಸೆಂಟರ್ ತೆಗೆದಿರುವುದು ಪತ್ತೆಯಾಗಿದೆ.

ಆಯುರ್ವೇದಿಕ್ ಸೆಂಟರ್ ಸೀಜ್ ಮಾಡಿರುವ ಅಧಿಕಾರಿಗಳು ಬ್ರಹ್ಮಾವರ ಠಾಣೆಯಲ್ಲಿ ಎಫ್ ಐ ಆರ್ ದಾಖಲಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular