HomeKarnatakaBIG NEWS: ಉಡುಪಿಯಲ್ಲಿ ಉಪಲೋಕಾಯುಕ್ತ ದಿಢೀರ್ ದಾಳಿ

BIG NEWS: ಉಡುಪಿಯಲ್ಲಿ ಉಪಲೋಕಾಯುಕ್ತ ದಿಢೀರ್ ದಾಳಿ

ಉಡುಪಿ: ಉಡುಪಿ ಜಿಲ್ಲೆಯ ಸರ್ಕಾಅರಿ ಕಚೇರಿಗಳ ಮೇಲೆ ಉಪಲೋಕಾಯುಕ್ತ ನ್ಯಾ.ಬಿ.ವೀರಪ್ಪ ದಿಢೀರ್ ದಾಳಿ ನಡೆಸಿದ್ದಾರೆ. ಜೀನ್ಸ್ ಪ್ಯಾಂಟ್ ಧರಿಸಿ ಕಚೇರಿಗೆ ಆಗಮಿಸಿರುವ ಸರ್ಕಾರಿ ಅಧಿಕಾರಿಗಳಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.

ಮಂಜೂರಾಗಿರುವ ಸರ್ಕಾರಿ ಭೂಮಿಗಾಗಿ ಕಚೇರುಗೆ ಅಲೆದಾಡುತ್ತಿರುವ ಮಾಜಿ ಸೈನಿಕನ ಸಂಕಷ್ಟವನ್ನು ಉಪಲೋಕಾಯುಕ್ತರು ಆಲಿಸಿದರು. ತಾಮ್ತ್ರಿಕ ದೋಷ ಸರಿಪಡ್ಸಿ ತಕ್ಷಣಣ ಭೂಮಿ ಮಂಜೂರು ಮಾಡಿಕೊಡುವಂತೆ ಅಧಿಅಕರಿಗಳಿಗೆ ಸೂಚಿಸಿದ್ದಾರೆ.

ಸರ್ಕಾರಿ ನೌಕರನೊಬ್ಬ ತನ್ನ ಬ್ಯಾಗ್ ನಲ್ಲಿ ಹಣ ಇಟ್ಟುಕೊಂಡಿದ್ದಕ್ಕೆ ಆತನನ್ನು ಅಮಾನತುಗೊಳಿಸುವಂತೆ ಸ್ಥಳದಲ್ಲೇ ಸೂಚಿಸಿದ ಘಟನೆಯೂ ನಡೆದಿದೆ. ಇನ್ನು ಸರ್ವೆ ಕಚೇರಿಗಳಲ್ಲಿ ಅಸಮರ್ಪಕ ದಾಖಲೆ ಕಂಡು ನೌಕರರ ವಿರುದ್ಧ ಉಪಲೋಕಾಯುಕ್ತರು ಗರಂ ಆದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದೇ ವೇಳೆ ಮಲ್ಪೆ ಬಂದರು ಪ್ರದೇಶದ ಮ್ರ‍್ಲೂ ದಾಳಿ ನಡೆಸಿದ ಉಪಲೋಕಾಯುಕ್ತರು, ಸಮುದ್ರ ಸೇರುತ್ತಿರುವ ಕೊಳಚೆ ನೀರಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಕೊಳಕು ನೀರನ್ನು ಸೇವಿಸುವ ಮೀನುಗಳು ಇಡೀ ದೇಶಕ್ಕೆ ಸಪ್ಲೈ ಆಗುತ್ತಿವೆ. ಇದನ್ನು ತಿಂದ ಜನರ ಆರೋಗ್ಯದ ಗತಿ ಏನು ಎಂದು ಅಸಮಾಧಾನ ವ್ಯಕ್ತಪಡಿಸಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular