HomeKarnatakaBIG NEWS: ಉಡುಪಿಯ ಲ್ಯಾಬ್, ಕ್ಲಿನಿಕ್ ಗಳ ಮೇಲೆ ದಾಳಿ; ನಕಲಿ ವೈದ್ಯರು, ಅನುಮತಿ ಇಲ್ಲದ...

BIG NEWS: ಉಡುಪಿಯ ಲ್ಯಾಬ್, ಕ್ಲಿನಿಕ್ ಗಳ ಮೇಲೆ ದಾಳಿ; ನಕಲಿ ವೈದ್ಯರು, ಅನುಮತಿ ಇಲ್ಲದ ಕ್ಲಿನಿಕ್ ಗಳು ಪತ್ತೆ

ಉಡುಪಿ: ರಾಜ್ಯದ ಹಲವೆಡೆ ಭ್ರೂಣಹತ್ಯೆ ಪ್ರಕರಣ ಬೆಳಕಿಗೆ ಬಂದಿರುವ ಬೆನ್ನಲ್ಲೇ ಎಚ್ಚೆತ್ತ ವೈದ್ಯಾಧಿಕಾರಿಗಳು ವಿವಿಧ ಜಿಲ್ಲೆಗಳ ಆಸ್ಪತ್ರೆ, ಕ್ಲಿನಿಕ್ ಗಳ ಮೇಲೆ ದಾಳಿ ನಡೆಸಿದ್ದಾರೆ.

ಉಡುಪಿ ಜಿಲ್ಲೆಯ ಹಲವೆಡೆ ಲ್ಯಾಬ್, ಕ್ಲಿನಿಕ್ ಗಳ ಮೇಲೆ ದಾಳಿ ನಡೆಸಲಾಗಿದ್ದು, ಈ ವೇಳೆ ನಕಲಿ ವೈದ್ಯರು, ನಕಲಿ ಕ್ಲಿನಿಕ್ ಗಳು ಪತ್ತೆಯಾಗಿವೆ. ಉಡುಪಿ, ಕುಂದಾಪುರ ತಾಲೂಕಿನ 7 ಕಡೆ ದಾಳಿ ನಡೆಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪರವಾನಗಿ ಇಲ್ಲದ ಲ್ಯಾಬ್, ಕ್ಲಿನಿಕ್ ಗಳನ್ನು ಅಧಿಕರಿಗಳು ಸೀಜ್ ಮಾಡಿದ್ದಾರೆ. ಉಪ್ಪುಂದದ ಸುಷ್ಮಾ ಕ್ಲಿನಿಕ್ ಲ್ಯಾಬ್ ಸೀಜ್ ಮಾಡಲಾಗಿದೆ. ಇನ್ನು ಕುಂದಾಪುರದ ಬಯೋಲಿನ್ ಕ್ಲಿನಿಕ್ ಲ್ಯಾಬ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಆರೂರಿನಲ್ಲಿಯೂ ಒಂದು ಕ್ಲಿನಿಕ್ ಸೀಜ್ ಮಾಡಲಾಗಿದೆ ಎಂದು ತಿಳಿದುಬಂದಿದೆ.

For Latest News Updates, Join Our Whatsapp Community🚩
RELATED ARTICLES

Most Popular