HomeLatest NewsSHOCKING NEWS: ಮನೆಗೆ ನುಗ್ಗಿ ಸ್ನೇಹಿತನನ್ನೇ ಬರ್ಬರವಾಗಿ ಹತ್ಯೆಗೈದ ಕಿರಾತಕರು: ಪತ್ನಿ ಹಾಗೂ ಮಗುವಿನ ಎದುರಲ್ಲೇ...

SHOCKING NEWS: ಮನೆಗೆ ನುಗ್ಗಿ ಸ್ನೇಹಿತನನ್ನೇ ಬರ್ಬರವಾಗಿ ಹತ್ಯೆಗೈದ ಕಿರಾತಕರು: ಪತ್ನಿ ಹಾಗೂ ಮಗುವಿನ ಎದುರಲ್ಲೇ ಕೊಲೆ

ಉಡುಪಿ: ಮನೆಗೆ ನುಗ್ಗಿ ಸ್ನೇಹಿತನನ್ನೇ ಮೂವರು ಹತ್ಯೆಗೈದಿರುವ ಘಟನೆ ಉಡುಪಿ ಜಿಲ್ಲೆಯ ಪುತ್ತೂರು ಗ್ರಾಮದ ಸುಬ್ರಹ್ಮಣ್ಯನಗರದಲ್ಲಿ ನಡೆದಿದೆ.

ವಿನಯ್ ದೇವಾಡಿಗ (40) ಕೊಲೆಯಾದ ವ್ಯಕ್ತಿ. ಪೇಂಟಿಂಗ್ ಕೆಲಸ ಮಾಡುತ್ತಿದ್ದ ವಿನಯ್ ನಿನ್ನೆ ರಾತ್ರಿ ಮನೆಯಲ್ಲಿ ಪತ್ನಿ ಮಗುವಿನೊಂದಿಗೆ ಮಲಗಿದ್ದರು. ಈ ವೇಳೆ ಏಕಾಏಕಿ ಮನೆಗೆ ನುಗ್ಗಿದ ಮೂವರು ವಿನಯ್ ಇದ್ದಾನಾ ಎಂದು ಕೇಳಿದ್ದಾರೆ. ಸ್ನೇಹಿತರೆಂದು ಮನೆಯ ಒಳಗೆ ಬಿಟ್ಟಿದ್ದೇ ತಡ ಏಕಾಏಕಿ ಕೋಣೆಗೆ ನುಗ್ಗಿ ವಿನಯ್ ನನ್ನು ಪತ್ನಿ ಹಾಗೂ ಮಗುವಿನ ಎದುರಲ್ಲೇ ಹತ್ಯೆಗೈದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರಕರಣ ದಾಖಲಿಸಿಕೊಂಡಿರುವ ಉಡುಪಿ ನಗರ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬ್ರಹ್ಮಾವರದ ಕೊಕ್ಕರ್ಣಿಯ ಅಜಿತ್ (28), ಅಕ್ಷೇಂದ್ರ (34) ಹಾಗೂ ಪ್ರದೀಪ್ ಆಚಾರ್ಯ ಬಂಧಿತರು.

ಆರೋಪಿಯೊಬ್ಬನಿಗೆ ಸಂಬಂಧಿಸಿದ ಆಡೀಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವಿನಯ್ ಹಂಚಿಕೊಂಡಿದ್ದ ಎಂಬ ಕಾರಣಕ್ಕೆ ಕೊಲೆ ನಡೆದಿದೆ ಎನ್ನಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular