HomeKarnatakaಉಡುಪಿಯಲ್ಲಿ ಮತ್ತೊಂದು ಗ್ಯಾಂಗ್ ವಾರ್; ಮಾತುಕತೆಗೆಂದು ಕರೆದು ತಲವಾರ್ ನಿಂದ ದಾಳಿ ನಡೆಸಿದ ಪುಂಡರ ಗುಂಪು

ಉಡುಪಿಯಲ್ಲಿ ಮತ್ತೊಂದು ಗ್ಯಾಂಗ್ ವಾರ್; ಮಾತುಕತೆಗೆಂದು ಕರೆದು ತಲವಾರ್ ನಿಂದ ದಾಳಿ ನಡೆಸಿದ ಪುಂಡರ ಗುಂಪು

ಉಡುಪಿ: ಉಡುಪಿಯ ಕುಂಜಿಬೆಟ್ಟುವಿನಲ್ಲಿ ನಡೆದ ಗ್ಯಾಂಗ್ ವಾರ್ ಬೆನ್ನಲ್ಲೇ ಮತ್ತೊಂದು ಗ್ಯಾಂಗ್ ವಾರ್ ನಡೆದಿದೆ. ಉಡುಪಿಯ ಪುತ್ತೂರಿನ ಬಿರಿಯಾನಿ ಪಾಯಿಂಟ್ ಬಳಿ ಎರಡುರ‍ಡು ಗುಂಪುಗಳ ನಡುವೆ ಗ್ಯಾಂಗ್ ವಾರ್ ನಡೆದಿದ್ದು, ಜಿಲ್ಲೆಯ ಜನರು ಬೆಚ್ಚಿ ಬಿದ್ದಿದ್ದಾರೆ.

ಪುತ್ತೂರು ಸಲೂನ್ ನೌಕರ ಚರಣ್, ಶಬರಿ ಎಂಬಾತನಿಗೆ ಬೈದಿದ್ದನು. ಇದೇ ವಿಚಾರವಾಗಿ ಪ್ರವೀಣ್ ಹಾಗೂ ಗ್ಯಾಂಗ್ ಚರಣ್ ನನ್ನು ಮಾತುಕತೆಗೆಂದು ಪುತ್ತೂರಿನ ಬಿರಿಯಾನಿ ಪಾಯಿಂಟ್ ಗೆ ಕರೆದಿದೆ. ಚರಣ್ ತನ್ನ ಮೂವರು ಸ್ನೇಹಿತರೊಂದಿಗೆ ಆಗಮಿಸಿದ್ದ. ಈ ವೇಳೆ ಪ್ರವೀಣ್ ಹಾಗೂ ಗ್ಯಾಂಗ್ ಚರಣ್ ಹಾಗೂ ಸ್ನೇಹಿತರ ಮೇಲೆ ತಲವಾರು ಬೀಸಿದೆ.

ದಾಳಿಯಿಂದ ಕಂಗಾಲಾದ ಚರಣ್ ಹಾಗೂ ಸ್ನೇಹಿತರು ಪ್ರಾಣ ಉಳಿಸಿಕೊಳ್ಳಲು ತಮ್ಮ ಬೈಕ್ ನ್ನೂ ಬಿಟ್ಟು ಓಡಿದ್ದಾರೆ. ಚರಣ್ ಹಾಗೂ ಸ್ನೇಹಿತರು ಸಿಗದಿದ್ದಾಗ ಅವರ ಬೈಕ್ ಗಳ ಮೇಲೆ ತಲವಾರ್ ನಿಂದ ಹೊಡೆದು ಬೈಕ್ ಜಖಂಗೊಳಿಸಿದ್ದಾರೆ. ಅಷ್ಟೇ ಅಲ್ಲ ತಮ್ಮ ಕೃತ್ಯವನ್ನು ಪುಂಡರು ವಿಡಿಯೋ ಮಾಡಿ ಅಟ್ಟಹಾಸ ಮೆರೆದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular