ಬೆಂಗಳೂರು: ಕಾರ್ಖಾನೆಯ ಬಾಯ್ಲರ್ ಸ್ವಚ್ಛತೆ ವೇಳೆ ಕೆಮಿಕಲ್ ರಿಯಾಕ್ಷನ್ ಉಂಟಾಗಿ ಇಬ್ಬರು ಕಾರ್ಮಿಕರು ಮೃತಪಟ್ಟ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ಜಿಗಣಿ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.
ಕುಮಾರ್ ಆರ್ಗ್ಯಾನಿಕ್ಸ್ ಕಾರ್ಖಾನೆಯ ಬಾಯ್ಲರ್ ಸ್ವಚ್ಛಗೊಳಿಸುವಾಗ ಕೆಮಿಕಲ್ ರಿಯಾಕ್ಷನ್ ಉಂಟಾದ ಪರಿಣಾಮ ಆಯತಪ್ಪಿ ಡ್ರೈನೇಜ್ ಗೆ ಬಿದ್ದು ಇಬ್ಬರು ಕಾರ್ಮಿಕರು ಮೃತಪಟ್ಟಿದ್ದು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಉತ್ತರ ಪ್ರದೇಶ ಮೂಲದ ಮುನ್ನಾ ಸಿಂಗ್(45), ಲಾಲೂ ಸಿಂಗ್(40) ಮೃತಪಟ್ಟವರು. ಅಣ್ಣನನ್ನು ಕಾಪಾಡಲು ಹೋಗಿ ತಮ್ಮನೂ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ. ಸುಮಿತ್ ಮಂಡಲ್ ಮತ್ತು ವಿಜಯಕುಮಾರ್ ಸಿಂಗ್ ಎಂಬ ಕಾರ್ಮಿಕರ ಸ್ಥಿತಿ ಗಂಭೀರವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಡಿವೈಎಸ್ಪಿ ಗೋಪಾಲ ನಾಯಕ್ ಮತ್ತು ಜಿಗಣಿ ಇನ್ ಸ್ಪೆಕ್ಟರ್ ನವೀನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

