HomeLatest Newsಕ್ರಿಕೆಟ್ ಆಡುವಾಗಲೇ ದುರಂತ: ಹೃದಯಾಘಾತದಿಂದ ಇಬ್ಬರು ಸಾವು

ಕ್ರಿಕೆಟ್ ಆಡುವಾಗಲೇ ದುರಂತ: ಹೃದಯಾಘಾತದಿಂದ ಇಬ್ಬರು ಸಾವು

ನವದೆಹಲಿ: ರಾಜ್‌ ಕೋಟ್ ಮತ್ತು ಸೂರತ್‌ ನಲ್ಲಿ ಕ್ರಿಕೆಟ್ ಆಡುತ್ತಿದ್ದ ಇಬ್ಬರು ವ್ಯಕ್ತಿಗಳು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

27 ವರ್ಷದ ಪ್ರಶಾಂತ್ ಕಾಂತಿಭಾಯ್ ಭರೋಲಿಯಾ ಮತ್ತು 31 ವರ್ಷದ ಜಿಗ್ನೇಶ್ ಚೌಹಾಣ್ ಎಂಬ ಇಬ್ಬರು ಯುವಕರು ಮೃತಪಟ್ಟವರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸೂರತ್‌ನಲ್ಲಿ ಪ್ರಶಾಂತ್ ಕಾಂತಿಭಾಯ್ ಭರೋಲಿಯಾ ಅವರು ಶನಿವಾರ ಕ್ರಿಕೆಟ್ ಆಟವಾಡಿದ ನಂತರ ಎದೆ ನೋವು ಕಾಣಿಸಿಕೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಚಿಕಿತ್ಸೆ ಫಲಕಾರಿಯಾಗದೇ ಅವರು ನಿಧನರಾಗಿದ್ದಾರೆ.

ರಾಜ್‌ಕೋಟ್‌ ನಲ್ಲಿ ಜಿಗ್ನೇಶ್ ಚೌಹಾಣ್ ಭಾನುವಾರ ರೇಸ್ ಕೋರ್ಸ್‌ನ ಮಾಧವರಾವ್ ಸಿಂದಿಯಾ ಕ್ರಿಕೆಟ್ ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದಾಗ ಹಠಾತ್ ಕುಸಿದು ಬಿದ್ದಿದ್ದಾರೆ. ಇಂಟರ್‌ಪ್ರೆಸ್ ಮೀಡಿಯಾ ಟೂರ್ನಮೆಂಟ್‌ನಲ್ಲಿ ಭಾಗವಹಿಸಿದ್ದ ಅವರು ಆಟವಾಡಿದ ನಂತರ ತೀವ್ರ ಎದೆ ನೋವು ಮತ್ತು ತಲೆತಿರುಗುತ್ತಿದೆ ಎಂದು ಹೇಳಿದ್ದು, ಹತ್ತಿರದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಅವರು ನಿಧನರಾದರು ಎಂದು ಹೇಳಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular